Connect with us

    LATEST NEWS

    ಉಡುಪಿಯ ಹಂಗಾರಕಟ್ಟೆಯ ಚಕ್ರವರ್ತಿ ಬಾರ್ ನಲ್ಲಿ ಕಳ್ಳತನ

    ಉಡುಪಿಯ ಹಂಗಾರಕಟ್ಟೆಯ ಚಕ್ರವರ್ತಿ ಬಾರ್ ನಲ್ಲಿ ಕಳ್ಳತನ

    ಉಡುಪಿ ಎಪ್ರಿಲ್ 24: ಉಡುಪಿ ಜಿಲ್ಲೆಯಲ್ಲಿ ಬಾರ್ ಕಳ್ಳತನ ಮುಂದುವರೆದಿದ್ದು, ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆಯಲ್ಲಿನ ಚಕ್ರವರ್ತಿ ಬಾರ್ & ರೆಸ್ಟೋರೆಂಟ್ ನಲ್ಲಿ ಕಳ್ಳತನ ನಡೆದಿದೆ.

    ಕೊರೊನಾ ಲಾಕ್ ಡೌನ್ ಹಿನ್ನಲೆ ರಾಜ್ಯದಾದ್ಯಂತ ಬಾರ್ ಗಳನ್ನು ಬಂದ್ ಮಾಡಲಾಗಿದ್ದು, ಈ ಹಿನ್ನಲೆ ಮದ್ಯಪಾನ ಸಿಗದೇ ಬಾರ್ ಹಾಗೂ ವೈನ್ ಶಾಪ್ ಗಳ ಕಳ್ಳತನ ಹೆಚ್ಚಾಗಿ ನಡೆಯಲಾರಂಭಿಸಿದೆ.

    ಬಾಳ್ಕುದ್ರು ಗ್ರಾಮದ ಹಂಗಾರಕಟ್ಟೆಯ ಚಕ್ರವರ್ತಿ ಬಾರ್ ನಲ್ಲಿ ಕಳ್ಳತನ ನಡೆದಿದ್ದು, ಕಳ್ಳರು ಬಾರ್ ನ ಹಿಂಬದಿಯ ಕಿಟಕಿ ಮುರಿದಿದ್ದು ಮೇಲಿನ ಹಂಚು ತೆಗೆದ ಒಳನುಗಿದ್ದಾರೆ.

    ಬಾರ್ ನಲ್ಲಿದ್ದ 31 ಬಾಕ್ಸ್ ಮದ್ಯ, 3 ಬಾಕ್ಸ್ ಬಿಯರ್ ಸೇರಿದಂತೆ ಸುಮಾರು 1.50 ಲಕ್ಷ ರೂಪಾಯಿ ಬೆಲೆ ಬಾಳುವ ಮದ್ಯವನ್ನು ಕದ್ದೊಯ್ದಿದ್ದಾರೆ. ಸ್ಥಳಕ್ಕೆ ಪೊಲೀಸ್ ಹಾಗೂ ಅಬಕಾರಿ ಇಲಾಖೆ ಸಿಬ್ಬಂದಿಗಳು ಭೇಟಿ ನೀಡಿದ್ದು , ಬಾರ್ ನ ಶೆಟರ್ ಗೆ ಹಾಕಿದ ಸೀಲ್ ಒಡೆದು ಒಳಹೋಗಿ ಪರಿಶೀಲನೆ ನಡೆಸಿದ್ದಾರೆ. ಘಟನೆ ಕುರಿತಂತೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು

    Share Information
    Advertisement
    Click to comment

    You must be logged in to post a comment Login

    Leave a Reply