LATEST NEWS
ನೌಕರನಿಗೆ ಕೊರೊನಾ ಸೊಂಕು ಹಿನ್ನಲೆ ನಾಳೆ ಉಡುಪಿ ಜಿಲ್ಲಾಪಂಚಾಯತ್ ಬಂದ್
ನೌಕರನಿಗೆ ಕೊರೊನಾ ಸೊಂಕು ಹಿನ್ನಲೆ ನಾಳೆ ಉಡುಪಿ ಜಿಲ್ಲಾಪಂಚಾಯತ್ ಬಂದ್
ಉಡುಪಿ ಮೇ.25: ಉಡುಪಿಯಲ್ಲಿ ಕೊರೊನಾ ಈಗ ಸರಕಾರಿ ಕಚೇರಿಗಳಿಗೆ ತಟ್ಟಿದ್ದು, ಈ ಮೊದಲು ಪೊಲೀಸ್ ಠಾಣೆಗಳು ಸೀಲ್ ಡೌನ್ ಆದರೆ ಈಗ ಜಿಲ್ಲಾ ಪಂಚಾಯತ್ ಸರದಿ ಬಂದಿದ್ದು, ಇಂದು ಉಡುಪಿ ಜಿಲ್ಲೆಯಲ್ಲಿ ದೃಢಪಟ್ಟ ಕೊರೊನಾ ಸೊಂಕು ಪ್ರಕರಣಗಳಲ್ಲಿ ಜಿಲ್ಲಾ ಪಂಚಾಯತ್ ನ ಹೊರಗುತ್ತಿಗೆ ನೌಕರರಿಗೆ ಕೊರೊನಾ ಸೊಂಕು ತಗುಲಿರುವ ಉಡುಪಿ ಜಿಲ್ಲಾ ಪಂಚಾಯತ್ ನ್ನು 24 ಗಂಟೆಗಳ ಸ್ಯಾನಿಟೈಜ್ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಈ ಹಿನ್ನಲೆ ನಾಳೆ ಜಿಲ್ಲಾಪಂಚಾಯತ್ ಸಿಇಓ ಸಹಿತ ಎಲ್ಲಾ ಸಿಬ್ಬಂದಿಗಳು ಕಚೇರಿಗೆ ಆಗಮಿಸುವದಿಲ್ಲ ಎಂದು ಜಿಲ್ಲಾ ಪಂಚಾಯತ್ ಸಿಇಓ ಪ್ರೀತಿ ಗೆಹ್ಲೊಟ್ ಮಾಹಿತಿ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ನ ಹೊರಗುತ್ತಿಗೆ ನೌಕರ ಮೇ 19 ರಂದು ಕೊನೆಯ ಬಾರಿ ಕಚೇರಿಗೆ ಆಗಮಿಸಿದ್ದು, ಕಚೇರಿಗೆ ಆಗಮಿಸಿದ್ದ ಸಂದರ್ಭ ನೌಕರನಿಗೆ ಶೀತ ಹಾಗೂ ಕೆಮ್ಮಿನ ಲಕ್ಷಣಗಳಿತ್ತು. ಈ ಹಿನ್ನಲೆ ಆತನ ಗಂಟಲ ಸ್ವಾಬ್ ತೆಗೆದು ಪರೀಕ್ಷೆಗೆ ಕಳುಹಿಸಲಾಗಿತ್ತು. ಇಂದು ಹೊರಗುತ್ತಿಗೆ ನೌಕರಿಗೆ ಕೊರೊನಾ ಸೊಂಕು ಇರುವುದು ದೃಢಪಟ್ಟಿದೆ. ಈ ಹಿನ್ನಲೆ ನಾಳೆ ಜಿಲ್ಲಾ ಪಂಚಾಯತ್ ಕಚೇರಿಯನ್ನು ಸಂಪೂರ್ಣ ಸ್ಯಾನಿಟೈಜ್ ಮಾಡಲು ಮುಚ್ಚಲಾಗುವುದು ಎಂದು ಸಿಇಓ ತಿಳಿಸಿದ್ದಾರೆ.
ಈಗಾಗಲೇ ಕಳೆದ ಐದು ದಿನಗಳಲ್ಲಿ ಅನೇಕ ಬಾರಿ ಜಿಪಂ ಕಚೇರಿ ಸ್ಯಾನಿಟೈಸ್ ಮಾಡಲಾಗಿದೆ. ಆದರೂ ನಾಳೆ ಮತ್ತೊಮ್ಮೆ ಜಿಪಂ ಕಚೇರಿ ಸ್ಯಾನಿಟೈಸರ್ ಮಾಡಲಾಗುವುದು ಎಂದು ಅವರು ತಿಳಿಸಿದ್ದಾರೆ.