Connect with us

LATEST NEWS

ಉಡುಪಿ ಕ್ವಾರಂಟೈನ್ ನಲ್ಲಿರುವವರಿಂದ ಹೊರಗೆ ಬಿಡಿ ಎಂದು ಗಲಾಟೆ

ಉಡುಪಿ ಕ್ವಾರಂಟೈನ್ ನಲ್ಲಿರುವವರಿಂದ ಹೊರಗೆ ಬಿಡಿ ಎಂದು ಗಲಾಟೆ

ಉಡುಪಿ ಮೇ.26: ಉಡುಪಿ ಕ್ವಾರಂಟೈನ್ ಸೆಂಟರ್ ನಲ್ಲಿದ್ದವರು ಗದ್ದಲ ಎಬ್ಬಿಸಿರುವ ಘಟನೆ ಉಡುಪಿಯಲ್ಲಿ ನಡೆದಿದೆ.
ಮುಂಬೈಯಿಂದ ಆಗಮಿಸಿದ ಜನರಿಗೆ ಸರಕಾರಿ ಕ್ವಾರಂಟೈನ್ 14 ದಿನ ಕಡ್ಡಾಯ ಹಿನ್ನಲೆ ಉಡುಪಿಯ ಇಂದಿರಾನಗರದ ಹಾಸ್ಟೆಲ್ ಒಂದರಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.

ಆದರೆ ಜಿಲ್ಲೆಯಲ್ಲಿ ಕ್ವಾರಂಟೈನ್ ಮಾಡಿದವರ ಕೊವಿಡ್ ವರದಿ ಬರದ ಕಾರಣ ಇನ್ನೂ ಕ್ವಾರಂಟೈನ್ ಸೆಂಟರ್ ನಿಂದ ಹೊರಗೆ ಬಿಡಲು ಸಾಧ್ಯವಿಲ್ಲ ಎಂದು ಜಿಲ್ಲಾಡಳಿತ ಹೇಳಿತ್ತು. ಆದರೆ ಇಂದಿರಾನಗರದ ಹಾಸ್ಟೆಲ್ ಒಂದರಲ್ಲಿ ತಂದೆಯ ಅಪರಕ್ರಿಯೆಗಾಗಿ ಬಂದ ವ್ಯಕ್ತಿಯೊಬ್ಬ ಬಂದು 13 ದಿನ ಆಯ್ತು ನಮ್ಮ ನ್ನು ಇಲ್ಲಿಂದ ಬಿಡಿ ಎಂದು ಗಲಾಟೆ ಮಾಡಿದ್ದಲ್ಲದೆ, ಪೊಲೀಸರೊಂದಿಗೆ ಮಾತಿನ ಚಕಮಕಿ ಕೂಡ ನಡೆದಿದೆ. ಉಡುಪಿಯಲ್ಲಿ ನಾಲ್ಕುವರೆ ಸಾವಿರಕ್ಕೂ ಅಧಿಕ ವರದಿ ಬಾಕಿ ,ವರದಿ ನೆಗೆಟಿವ್ ಬಾರದೆ ಕ್ವಾರಂಟೈನ್ ಸೆಂಟರ್ ನಿಂದ ಬಿಡೋದಿಲ್ಲ, ವರದಿ ಬರುವವರೆಗೆ ಕಾಯಲೇಬೇಕು ಎಂದು ಜಿಲ್ಲಾಡಳಿತ ಖಡಕ್ ಸೂಚನೆ ನೀಡಿದೆ. ಈ ಹಿನ್ನಲೆ ವರದಿ ಬಾರದೆ ಬಿಡೋಕಾಗಲ್ಲ ಪೊಲೀಸರ ಖಡಕ್ ಆಗಿ ಎಚ್ಚರಿಸಿದ್ದಾರೆ.

Facebook Comments

comments