KARNATAKA
ಜನವರಿ ಅಂತ್ಯದವರೆಗೂ ನೈಟ್ ಕರ್ಫ್ಯೂ..ವಿಕೇಂಡ್ ಕರ್ಫ್ಯೂ ಮುಂದುವರಿಕೆ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೊಂಕು ಏರಿಕೆ ಹಾದಿಯಲ್ಲಿದ್ದು, ಈ ಹಿನ್ನಲೆ ಜನವರಿ ತಿಂಗಳ ಅಂತ್ಯದವರೆಗೂ ಈಗ ಇರುವ ಕೊರೊನಾ ರೂಲ್ಸ್ ಗಳನ್ನು ಮುಂದುವರೆಸಲು ರಾಜ್ಯ ಸರಕಾರ ತೀರ್ಮಾನ ಮಾಡಿದೆ.
ಜನವರಿ 31ರವರೆಗೂ ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ, 50:50 ರೂಲ್ಸ್ ಈಗಿರುವಂತೆಯೇ ಮುಂದುವರಿಯಲಿವೆ. ಸದ್ಯಕ್ಕೆ ಬೂಸ್ಟರ್ ಡೋಸ್ ಹೆಚ್ಚಳ ಮಾಡುವಂತೆ.. ಮಕ್ಕಳ ಚಿಕಿತ್ಸೆಗೆ ಔಷಧಿ ಕೊರತೆ ಆಗದಂತೆ ನೋಡಿಕೊಳ್ಳಬೇಕು ಎಂದು ಸಿಎಂ ಸೂಚಿಸಿದ್ದಾರೆ.
ಇನ್ನು ಶಾಲೆ ಕಾಲೇಜುಗಳಿಗೆ ರಜೆ ನೀಡುವ ಅಧಿಕಾರವನ್ನು ಆಯಾಯ ಜಿಲ್ಲಾಧಿಕಾರಿಗಳಿಗೆ ನೀಡಲಾಗಿದ್ದು, ಕೊರೊನಾ ಪ್ರಕರಣಗಳ ಆಧಾರದ ಮೇಲೆ ಶಾಲೆ ಕಾಲೇಜು ಬಂದ್ ಮಾಡುವ ಅಧಿಕಾರ ನೀಡಲಾಗಿದೆ.
You must be logged in to post a comment Login