Connect with us

    DAKSHINA KANNADA

    ಪುತ್ತೂರು ನಗರಸಭಾ ಸದಸ್ಯೆ ಮನೆಯಲ್ಲೇ ಕೊರೊನಾ ಪಾಸಿಟಿವ್

    ಪುತ್ತೂರು ಜೂನ್ 20: ಪುತ್ತೂರು ನಗರ ಸಭಾ ಸದಸ್ಯೆಯ ಮನೆಯಲ್ಲೇ ಕೊರೊನಾ ಪಾಸಿಟಿವ್ ಪ್ರಕರಣ ಪತ್ತೆಯಾಗಿದೆ. ಸದಸ್ಯೆಯ ಮಾವ ವಾರದ ಹಿಂದೆ ಜ್ವರದ ಕಾರಣಕ್ಕಾಗಿ ಪುತ್ತೂರು ಸರಕಾರಿ ಆಸ್ಪತ್ರೆಗೆ ಔಷಧಿಗಾಗಿ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಗಂಟಲ ದ್ರವದ ಮಾದರಿಯನ್ನು ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗಿತ್ತು. ಮತ್ತು ಅವರನ್ನು ವೈದ್ಯಕೀಯ ವೀಕ್ಷಣೆಯಲ್ಲಿ ಇಡದೆ ಮನೆಗೆ ಕಳುಹಿಸಲಾಗಿತ್ತು.


    ಇಂದು ಗಂಟಲ ಪರೀಕ್ಷೆಯ ವರದಿ ಸಂಗ್ರಹಿಸಲು ಆಸ್ಪತ್ರೆಗೆ ಮನೆ ಮಂದಿ ಬಂದಾಗ ಕೊರೊನಾ ಪಾಸಿಟೀವ್ ಇರುವ ವಿಚಾರವನ್ನು ತಿಳಿಸಲಾಗಿದೆ. ತಕ್ಷಣವೇ ಜಿಲ್ಲಾ ಆರೋಗ್ಯ ಇಲಾಖೆಯಿಂದ ಅಂಬ್ಯುಲೆನ್ಸ್ ವ್ಯವಸ್ಥಡ ಮಾಡಿ ಪಾಸಿಟೀವ್ ವ್ಯಕ್ತಿಯನ್ನು ಮನೆಯಿಂದಲೇ ಮಂಗಳೂರಿನ ಕೋವಿಡ್ -19 ಆಸ್ಪತ್ರೆಗೆ ದಾಖಲಿಸಲಾಗಿದೆ.


    ಕೊರೊನಾ ಪಾಸಿಟೀವ್ ಪತ್ತೆಯಾದ ಹಿನ್ನಲೆಯಲ್ಲಿ ನಗರ ಸಭೆ ಸದಸ್ಯೆಯ ಮನೆಯನ್ನು ಸೀಲ್ ಡೌನ್ ಮಾಡಲಾಗಿದ್ದು, ಪಾಸಿಟೀವ್ ಪತ್ತೆಯಾದ ವ್ಯಕ್ತಿಯ ಟ್ರಾವೆಲ್ ಹಿಸ್ಟರಿ ಹುಡುಕಲು ಆರೋಗ್ಯ ಇಲಾಖೆ ಇದೀಗ ಆರಂಭಿಸಿದೆ.

    Share Information
    Advertisement
    Click to comment

    You must be logged in to post a comment Login

    Leave a Reply