LATEST NEWS
ಒಂದೇ ಪಾಸಿಟಿವ್ ಕೇಸ್ ನಿಂದ 50ಕ್ಕೂ ಅಧಿಕ ಜನರಿಗೆ ಕ್ವಾರಂಟೈನ್
ಒಂದೇ ಪಾಸಿಟಿವ್ ಕೇಸ್ ನಿಂದ 50ಕ್ಕೂ ಅಧಿಕ ಜನರಿಗೆ ಕ್ವಾರಂಟೈನ್
ಮಂಗಳೂರು ಎಪ್ರಿಲ್ 26: ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೃದ್ದೆ ಕೊರೋನಾದಿಂದ ಮೃತಪಟ್ಟ ಹಿನ್ನಲೆ ಈ ಆಸ್ಪತ್ರೆಯ ಸಂಪರ್ಕಕ್ಕೆ ಬಂದ ಎಲ್ಲರನ್ನೂ ಕ್ವಾರಂಟೈನ್ ಮಾಡಲಾಗಿದೆ. ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಿಬ್ಬಂದಿಗಳ ಕುಟುಂಬಗಳನ್ನು ಜಿಲ್ಲಾಡಳಿತ ಕ್ವಾರಂಟೈನ್ ಮಾಡಿದೆ.
ಮಂಗಳೂರಿನ ಫಸ್ಟ್ ನ್ಯೂರೋ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಈ ಸಿಬ್ಬಂದಿಗಳ ಕುಟುಂಬಗಳನ್ನು ಮುನ್ನೆಚ್ಚರಿಕೆ ಕ್ರಮವಾಗಿ ಕ್ವಾರಂಟೈನ್ ನಲ್ಲಿಡಲಾಗಿದೆ. ಬೆಳ್ತಂಗಡಿ ತಾಲೂಕಿನ ಮಾಲಾಡಿ ಗ್ರಾಮ ಪಂಚಾಯತ್ ವ್ಯಾಪ್ತಿಯ ನರ್ಸ್ ಕುಟುಂಬ , ವಿಟ್ಲ ಚಂದಳಿಕೆಯ ನರ್ಸ್ ಕುಟುಂಬವೂ ಕ್ವಾರಂಟೈನ್ ಸೇರಿದಂತೆ ಕಡಬದ ಯುವಕನ ಕುಟುಂಬದ ಮೇಲೂ ನಿಗಾ ಇಡಲಾಗಿದೆ.
ಅಲ್ಲದೆ ಚಿಕಿತ್ಸೆ ಪಡೆದು ಹೋಗಿರುವ ರೋಗಿಗಳ ಕುಟುಂಬವು ಕ್ವಾರಂಟೈನ್ ನಲ್ಲಿಡಲಾಗಿದೆ. ಬೆಳ್ತಂಗಡಿ ನೆರಿಯದ 4 ಕುಟುಂಬದ 23 ಮಂದಿ, ಶಿರ್ಲಾಲಿನ 4 ಕುಟುಂಬದ 21 ಮಂದಿ, ಕಾಶಿಪಟ್ನದ ಒಂದು ಕುಟುಂಬದ ಇಬ್ಬರು ಸೇರಿದಂತೆ 50 ಮಂದಿಯನ್ನು ಕ್ವಾರಂಟೈನ್ ನಲ್ಲೀಡಲಾಗಿದೆ.