LATEST NEWS
ಕೊರೊನಾ ಗಂಭೀರತೆ ಇಲ್ಲದ ಕರಾವಳಿ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ ನಡುವೆ ಮಾರಾಮಾರಿ

ಕೊರೊನಾ ಗಂಭೀರತೆ ಇಲ್ಲದ ಕರಾವಳಿ ಜನಪ್ರತಿನಿಧಿಗಳು, ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಶಾಸಕರ ನಡುವೆ ಮಾರಾಮಾರಿ
ಮಂಗಳೂರು ಎಪ್ರಿಲ್ 29: ಕೊರೊನಾ ಸೊಂಕು ತಡೆಯಲು ಮುಂಜಾಗೃತಾ ಕ್ರಮಗಳಿಗಾಗಿ ನಡೆಯಬೇಕಿದ್ದ ಸಭೆ ಕರಾವಳಿ ಶಾಸಕರ ಮಧ್ಯೆ ಮಾತಿನ ಚಕಮಕಿಗೆ ಕಾರಣವಾದ ಘಟನೆ ಇಂದು ನಡೆದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ನೇತೃತ್ವದಲ್ಲಿ ಕೊರೊನಾ ತಡೆಗಟ್ಟುವಿಕೆಯ ವಿಚಾರದಲ್ಲಿ ಜಿಲ್ಲಾಧಿಕಾರಿ ಸಭಾಂಗಣದಲ್ಲಿ ಸಭೆ ನಡೆಯುತ್ತಿತ್ತು. ಈ ಸಂದರ್ಭದಲ್ಲಿ ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್ ಹಾಗೂ ಉಳ್ಳಾಲ ಶಾಸಕ ಯುಟಿ ಖಾದರ್ ನಡುವೆ ಮಾತಿನ ವಾರ್ ನಡೆಯಿತು. ಈ ಸಂದರ್ಭದಲ್ಲಿ ಇಬ್ಬರು ಜನಪ್ರತಿನಿಧಿಗಳು ಅಧಿಕಾರಿಗಳು ಇದ್ದಾರೆಂಬ ಅರಿವೇ ಇಲ್ಲದೆ ಏಕವಚನದಲ್ಲೇ ಮಾತಿನ ಪ್ರಹಾರ ನಡೆಸಿದರು.

ಶಾಸಕ ವೇದವ್ಯಾಸ ಕಾಮತ್ ಖಾದರ್ ತಮ್ಮ ಗಾಡಿಯನ್ನು ಟ್ಯಾಕ್ಸಿ ರೀತಿಯಲ್ಲಿ ಉಪಯೋಗಿಸಿಕೊಂಡಿದ್ದಲ್ಲದೆ , ಅದರಲ್ಲಿ ಜನರನ್ನು ಊರಿಂದ ಕರೆ ತಂದಿದ್ದಾರೆ. ಶಾಸಕರು ತಮ್ಮ ಗಾಡಿಯಲ್ಲಿ ಮುರೋಳಿ, ಪಡುಬಿದ್ರೆ, ಬೆಂಗಳೂರುವರೆಗೂ ಹೋಗಿ ಜನರನ್ನು ಕರೆ ತಂದಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಇದಕ್ಕೆ ತಿರುಗೇಟು ನೀಡಿದ ಶಾಸಕ ಖಾದರ್, ಬಿಜೆಪಿ ಶಾಸಕರು ಲಾಕ್ ಡೌನ್ ಸಮಯದಲ್ಲಿ ಜಲ್ಲಿ, ಮರಳು ಸಾಗಾಟಕ್ಕೆ ಗಾಡಿ ಉಪಯೋಗಿಸಿದ್ದಾರೆ ಎಂದು ಆರೋಪಿಸಿದರು. ಇವರಿಬ್ಬರ ಗಲಾಟೆಗಳ ಮದ್ಯೆ ಜಿಲ್ಲೆಯ ಇತರ ಶಾಸಕರು ಧ್ವನಿ ಏರಿಸಿ ಮಾತನಾಡಿದ್ದರು. ಕೊರೊನಾದ ಗಂಭೀರತೆ ಅರಿವಲ್ಲದೆ ಕರಾವಳಿಯ ಶಾಸಕರ ಈ ಗಲಾಟೆಗೆ ಅಧಿಕಾರಿಗಳು ಮೂಕ ಪ್ರೇಕ್ಷಕರಾದರು. ಕೊನೆಗೆ ಕೋವಿಡ್ ಸಭೆ ವಾರ್ ನೊಂದಿಗೆ ಮುಕ್ತವಾಯಿತು.