Connect with us

    LATEST NEWS

    ಗುಜರಾತಿನಲ್ಲಿ ಕೊರೊನಾ ಆರ್ಭಟ: ಇಂದಿನಿಂದ 20 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ..!

    ಅಹ್ಮದಾಬಾದ್ : ಪ್ರಧಾನಿ ಮೋದಿ ತವರೂರು ಗುಜರಾತ್ತಿನಲ್ಲಿ ಕೊರೊನಾ ಆರ್ಭಟ ಜೋರಾಗಿಯೇ ಇದೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನೇ ದಿನೇ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ   20 ನಗರಗಳಲ್ಲಿ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ನೈಟ್​ ಕರ್ಫ್ಯೂ ಜಾರಿಗೊಳಿಸಿ ಸರ್ಕಾರ ಘೋಷಿಸಿದೆ .

    ಇಂದಿನಿಂದ ಏಪ್ರಿಲ್​ 30 ರವರೆಗೆ ಈ ನೈಟ್ ಕರ್ಫ್ಯೂ ನಿಯಮ ಜಾರಿಯಲ್ಲಿರಲಿದೆ.

    ಅದೇ ಸಮಯದಲ್ಲಿ, ವೈರಸ್ ಸೋಂಕಿನ ಸರಪಳಿಯನ್ನು ಮುರಿಯಲು ಕರ್ಫ್ಯೂ ಅಥವಾ ಲಾಕ್​ಡೌನ್​ ಅನ್ನು ಮೂರು-ನಾಲ್ಕು ದಿನಗಳವರೆಗೆ ಜಾರಿಗೊಳಿಸಬಹುದು ಎಂದು ಮಾನ್ಯ ಉಚ್ಚ ನ್ಯಾಯಾಲಯ ಸೂಚಿಸಿತ್ತು.

     ಈಗಾಗಲೇ ಕೊರೊನಾ ಸೋಂಕು ಉಲ್ಭಣಿಸಿರುವ ಅಹ್ಮದಾಬಾದ್, ಸೂರತ್ ವಡೋದರಾ ಮತ್ತು ರಾಜ್‌ಕೋಟ್‌ನಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ನೈಟ್​ ಕರ್ಫ್ಯೂ ವಿಧಿಸಲಾಗಿದೆ. ಅದಗ್ಯೂ ಕೊರೊನಾ ತೀವ್ರವಾಗಿ ಉಲ್ಭಣಗೊಳ್ಳುತ್ತಿರುವುದು ಆತಂಕ ತಂದಿದೆ.

    Share Information
    Advertisement
    Click to comment

    You must be logged in to post a comment Login

    Leave a Reply