LATEST NEWS
ಗುಜರಾತಿನಲ್ಲಿ ಕೊರೊನಾ ಆರ್ಭಟ: ಇಂದಿನಿಂದ 20 ನಗರಗಳಲ್ಲಿ ನೈಟ್ ಕರ್ಫ್ಯೂ ಜಾರಿ..!

ಅಹ್ಮದಾಬಾದ್ : ಪ್ರಧಾನಿ ಮೋದಿ ತವರೂರು ಗುಜರಾತ್ತಿನಲ್ಲಿ ಕೊರೊನಾ ಆರ್ಭಟ ಜೋರಾಗಿಯೇ ಇದೆ. ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ದಿನೇ ದಿನೇ ತೀವ್ರಗೊಳ್ಳುತ್ತಿರುವ ಹಿನ್ನೆಲೆಯಲ್ಲಿ 20 ನಗರಗಳಲ್ಲಿ ರಾತ್ರಿ 8 ಗಂಟೆಯಿಂದ ಬೆಳಿಗ್ಗೆ 6 ಗಂಟೆಯವರೆಗೆ ನೈಟ್ ಕರ್ಫ್ಯೂ ಜಾರಿಗೊಳಿಸಿ ಸರ್ಕಾರ ಘೋಷಿಸಿದೆ .
ಇಂದಿನಿಂದ ಏಪ್ರಿಲ್ 30 ರವರೆಗೆ ಈ ನೈಟ್ ಕರ್ಫ್ಯೂ ನಿಯಮ ಜಾರಿಯಲ್ಲಿರಲಿದೆ.


ಈಗಾಗಲೇ ಕೊರೊನಾ ಸೋಂಕು ಉಲ್ಭಣಿಸಿರುವ ಅಹ್ಮದಾಬಾದ್, ಸೂರತ್ ವಡೋದರಾ ಮತ್ತು ರಾಜ್‌ಕೋಟ್‌ನಲ್ಲಿ ರಾತ್ರಿ 9 ರಿಂದ ಬೆಳಿಗ್ಗೆ 6 ರವರೆಗೆ ನೈಟ್ ಕರ್ಫ್ಯೂ ವಿಧಿಸಲಾಗಿದೆ. ಅದಗ್ಯೂ ಕೊರೊನಾ ತೀವ್ರವಾಗಿ ಉಲ್ಭಣಗೊಳ್ಳುತ್ತಿರುವುದು ಆತಂಕ ತಂದಿದೆ.