KARNATAKA
ನಾನು ಕಾಂಗ್ರೇಸ್ ಕಾರ್ಯಕರ್ತ ಎಂದ ಮೊಟ್ಟೆ ಎಸೆದ ಆರೋಪಿ…!!

ಬೆಂಗಳೂರು ಅಗಸ್ಟ್ 20: ಸಿದ್ದರಾಮಯ್ಯ ಅವರ ಹಿಂದೂ ವಿರೋಧಿ ಹೇಳಿಕೆಗೆ ಬೇಸತ್ತು ನಾನು ಅವರ ಕಾರಿಗೆ ಮೊಟ್ಟೆ ಹೊಡೆದೆ ಎಂದು ಸೋಮವಾರಪೇಟೆ ಸಂಪತ್ ಎಂಬ ವ್ಯಕ್ತಿ ಹೇಳಿಕೆ ನೀಡಿದ್ದು, ಈ ವಿಡಿಯೋ ವೈರಲ್ ಆಗಿದೆ.
ಕೊಡಗಿನವರು ದನದ ಮಾಂಸ ತಿನ್ನುತ್ತಾರೆ ಎಂದು ಸಿದ್ದರಾಮಯ್ಯ ನೀಡಿದ್ದ ಹೇಳಿಕೆಯಿಂದ ಕೋಪಗೊಂಡಿದ್ದೆ. ಕೆಲಸದ ನಿಮಿತ್ತ ಬಂದಿದ್ದ ನಾನು ಪ್ರತಿಭಟನೆಯ ಗುಂಪಿನಲ್ಲಿ ಸೇರಿ ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದೆ’ ಎಂದು ಅವರು ಹೇಳಿದ್ದಾರೆ.

ನಾನು ಜೀವಿಜಯ ಅವರ ಹಿಂಬಾಲಕ. ಅವರು ಜೆಡಿಎಸ್‌ನಲ್ಲಿದ್ದಾಗ ಮೊದಲು ನಾನೂ ಅಲ್ಲೇ ಇದ್ದೆ. ಅವರು ಕಾಂಗ್ರೆಸ್‌ಗೆ ಬಂದಾಗ ನಾನೂ ಅವರೊಂದಿಗೆ ಬಂದೆ. ಸಿದ್ದರಾಮಯ್ಯ ಅವರು ಟಿಪ್ಪು ಕುರಿತು ನೀಡಿದ ಹೇಳಿಕೆಯಿಂದ ನನಗೆ ಬೇಸರವಾಗಿತ್ತು’ ಎಂದು ಅವರು ವಿಡಿಯೊದಲ್ಲಿ ತಿಳಿಸಿದ್ದಾರೆ. ‘ನಾನು ಮೊದಲು ಹಿಂದೂ ನಂತರ ಪಕ್ಷ. ಹಿಂದೂ ಕಾರ್ಯಕ್ರಮವೊಂದರಲ್ಲಿ ಶಾಸಕ ಅಪ್ಪಚ್ಚುರಂಜನ್ ಅವರೊಂದಿಗೆ ಫೋಟೊ ತೆಗೆಸಿಕೊಂಡಿದ್ದೆ. ಅಂದು ಪ್ರತಿಭಟನೆ ಮಾಡಲು ಬಂದಿರಲಿಲ್ಲ. ಕೆಲಸದ ನಿಮಿತ್ತ ಬಂದಿದ್ದ ನಾನು ಸಿದ್ದರಾಮಯ್ಯ ಅವರು ಪ್ರಯಾಣಿಸುತ್ತಿದ್ದ ಕಾರಿಗೆ ಮೊಟ್ಟೆ ಹೊಡೆದೆ’ ಎಂದು ಅವರು ತಿಳಿಸಿದ್ದಾರೆ.