Connect with us

    LATEST NEWS

    ಇಯರ್‌ಫೋನ್ ಧರಿಸಿ ಹಳಿ ಮೇಲೆ ಹೋಗುತ್ತಿದ್ದ ಮೂವರು ರೈಲಿಗೆ ಸಿಲುಕಿ ಸಾವು

    ಲಖನೌ ಅಗಸ್ಟ್ 20: ಕಿವಿಯಲ್ಲಿ ಇಯರ್ ಪೋನ್ ಇಟ್ಟು ರೈಲ್ವೆ ಹಳಿ ಮೇಲೆ ನಡೆದುಕೊಂಡು ಹೋಗುತ್ತಿದ್ದ ಮೂವರ ಮೇಲೆ ರೈಲು ಹರಿದು ಸಾವನಪ್ಪಿರುವ ಘಟನೆ ಉತ್ತರ ಪ್ರದೇಶದ ಭದೋಹಿ ಮತ್ತು ಅಹಿಮಾನ್‌ಪುರ್ ಎಂಬಲ್ಲಿ ನಡೆದಿದೆ.


    ಭದೋಹಿ ರೈಲ್ವೆ ಸ್ಟೇಷನ್ ಪ್ರದೇಶದಲ್ಲಿ ಇಬ್ಬರು ಇಯರ್‌ಫೊನ್ ಕಿವಿಗಿಟ್ಟುಕೊಂಡು ಹಳಿಯಲ್ಲಿ ನಡೆಯುತ್ತಿದ್ದಾಗ ಅವರ ಮೇಲೆ ರೈಲು ಚಲಿಸಿದೆ. ಅವರಿಬ್ಬರೂ ಮೃತಪಟ್ಟಿದ್ದಾರೆ ಎಂದು ರೈಲ್ವೆ ರಕ್ಷಣಾ ಪಡೆಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

    ಜಲಾಲ್‌ಪುರದ ಸಿವಿಲ್ ಲೈನ್ ಪೊಲೀಸ್ ಠಾಣೆ ವ್ಯಾಪ್ತಿಯ ಅಶೋಕ್ ಕುಮಾರ್ ಸಿಂಗ್ (20) ಹಾಗೂ ಅವರ ಸ್ನೇಹಿತ ಮೋನು (18) ರೈಲು ನಿಲ್ದಾಣದ ಪ್ಲಾಟ್‌ಫಾರಂ ಸಂಖ್ಯೆ 2ರ ಮಧ್ಯದ ಹಳಿಯಲ್ಲಿ ವಾಕಿಂಗ್ ಮಾಡುತ್ತಿದ್ದರು. ಕಿವಿಗೆ ಇಯರ್‌ಫೋನ್ ಹಾಕಿಕೊಂಡಿದ್ದರಿಂದ ಹೌರಾ–ಲಾಲ್‌ಕುವಾನ್ ಎಕ್ಸ್‌ಪ್ರೆಸ್ ಅತಿ ವೇಗದಲ್ಲಿ ಬಂದುದು ಅವರ ಗಮನಕ್ಕೆ ಬಂದಿರಲಿಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಮತ್ತೊಂದು ಘಟನೆಯಲ್ಲಿ, ದಲ್‌ಪಾತ್‌ಪುರದ ಪಂಕಜ್ ದುಬೆ (30) ಎಂಬುವವರು ವಾರಾಣಸಿ–ಅಲಹಾಬಾದ್ ರೈಲು ಮಾರ್ಗದಲ್ಲಿ ಪ್ರಯಾಗ್‌ರಾಜ್‌ಗೆ ತೆರಳುತ್ತಿದ್ದ ಪ್ಯಾಸೆಂಜರ್ ರೈಲು ಡಿಕ್ಕಿಯಾಗಿ ಮೃತಪಟ್ಟಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply