Connect with us

    DAKSHINA KANNADA

    ಜಿಲ್ಲೆಯ ಡ್ರಗ್ ಮಾಫಿಯಾ ಕಿಂಗ್ ಕಾಂಗ್ರೇಸ್-ನಳಿನ್ ಆರೋಪ

    ಜಿಲ್ಲೆಯ ಡ್ರಗ್ ಮಾಫಿಯಾ ಕಿಂಗ್ ಕಾಂಗ್ರೇಸ್-ನಳಿನ್ ಆರೋಪ

    ಪುತ್ತೂರು,ಅಕ್ಟೋಬರ್ 9: ದಕ್ಷಿಣಕನ್ನಡ ಜಿಲ್ಲೆಯಲ್ಲಿ ನಡೆಯುತ್ತಿರುವ ಡ್ರಗ್ಸ್ ಮಾಫಿಯಾದ ನೇತೃತ್ವ ಕಾಂಗ್ರೇಸ್ ಕೈಯಲ್ಲಿದೆ ಎಂದು ಮಂಗಳೂರು ಸಂಸದ ನಳಿನ್ ಕುಮಾರ್ ಆರೋಪಿಸಿದ್ದಾರೆ.ಪುತ್ತೂರಿನಲ್ಲಿ ನಡೆದ ಬಿಜೆಪಿ ಮಹಿಳಾ ಮೋರ್ಚಾದ ಸಮಾವೇಶವನ್ನು ಉದ್ಧೇಶಿಸಿ ಮಾತನಾಡಿದ ಅವರು ಜಿಲ್ಲೆಯಲ್ಲಿ ಇದೀಗ ಡ್ರಗ್ಸ್ ಮಾಫಿಯಾ, ಹತ್ಯೆ ಮಾಫಿಯಾ, ಭಯೋತ್ಪಾದನಾ ಮಾಫಿಯಾ ಗಳು ನಡೆಯುತ್ತಿದ್ದು, ಈ ಎಲ್ಲದರ ಹಿಂದೆ ಕಾಂಗ್ರೇಸ್ ಇದೆ ಎಂದು ಅವರು ಆರೋಪಿಸಿದರು. ಯಾವ ರೀತಿ ಬ್ರಿಟಿಷರು ಉಪ್ಪಿನ ಮೇಲೆ ತೆರಿಗೆ ವಿಧಿಸಿದಾಗ ಮಹಾತ್ಮಾ ಗಾಂಧಿ ಸತ್ಯಾಗ್ರಹ ಮಾಡಿದರೋ, ಅದೇ ರೀತಿ ಮರಳಿಗೂ ಕಾಂಗ್ರೇಸ್ ಸರಕಾರ ತೆರಿಗೆ ವಿಧಿಸುತ್ತಿದೆ. ಮರಳಿನ ಮೇಲೆಯೂ ತೆರಿಗೆ ವಿಧಿಸಿ ಕಾಂಗ್ರೇಸ್ ಜಿಲ್ಲೆಯಲ್ಲಿ ಮರಳಿನ ದರೋಡೆ ನಡೆಸುತ್ತಿದೆ ಎಂದ ಅವರು ಈ ಮರಳು ಮಾಫಿಯಾದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ ಎಂದರು.

     

    Share Information
    Advertisement
    Click to comment

    You must be logged in to post a comment Login

    Leave a Reply