Connect with us

  DAKSHINA KANNADA

  ದೇಯಿ ಬೈದೆದಿ ಅವಮಾನ ಖಂಡಿಸಿ ಬಿಜೆಪಿ ಜಾಥಾ

  ದೇಯಿ ಬೈದೆದಿ ಅವಮಾನ ಖಂಡಿಸಿ ಬಿಜೆಪಿ ಜಾಥಾ

  ಪುತ್ತೂರು,ಅಕ್ಟೋಬರ್ 9: ತುಳುನಾಡಿದ ಐತಿಹಾಸಿಕ ವೀರ ಪುರುಷರಾದ ಕೋಟಿ-ಚೆನ್ನಯರ ತಾಯಿ ದೇಯಿ ಬೈದೆದಿ ಗೆ ಮಾಡಿದ ಅವಮಾನವನ್ನು ಖಂಡಿಸಿ ಬಿಜೆಪಿ ಪಕ್ಷ ನಾಳೆ (ಅಕ್ಟೋಬರ್ 10) ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡಿದೆ.

  ತಿಂಗಳ ಹಿಂದೆ ಪುತ್ತೂರಿನ ಈಶ್ವರಮಂಗಲದ ಹಮೀದ್ ಎನ್ನುವ ವ್ಯಕ್ತಿ ಪುತ್ತೂರಿನ ಪಡುಮಲೆಯಲ್ಲಿರುವ ದೇಯಿ ಬೈದೆದಿ ಔಷಧೀಯ ವನದಲ್ಲಿದ್ದ ದೇಯಿ ಬೈದೆದಿ ಪುತ್ಥಳಿಯನ್ನು ಮುಟ್ಟಿ ಅಸಹ್ಯವಾಗಿ ವರ್ತಿಸಿದ್ದ. ಅಲ್ಲದೆ ಅವರ ಚಿತ್ರವನ್ನು ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟಿದ್ದ. ಈ ಚಿತ್ರ ಭಾರೀ ವಿರೋಧಕ್ಕೂ ಕಾರಣವಾಗಿತ್ತು. ಈ ಸಂಬಂಧ ಕಾರ್ಯಾಚರಣೆ ನಡೆಸಿದ ಪೋಲೀಸರು ಆತನನ್ನು ಬಂಧಿಸಿದ್ದರು. ಘಟನೆಯನ್ನು ಖಂಡಿಸಿ ಹಲವು ಹಿಂದೂ ಪರ ಸಂಘಟನೆಗಳು ಹಾಗೂ ಬಿಲ್ಲವ ಸಂಘಟನೆಗಳು ಪ್ರತಿಭಟನೆಯನ್ನು ಈ ಹಿಂದೆಯೇ ನಡೆಸಿದೆ. ಇದೀಗ ಬಿಜೆಪಿ ಪಕ್ಷ ಪುತ್ತೂರಿನಿಂದ ಪಡುಮಲೆಯಲ್ಲಿರುವ ದೇಯಿ ಬೈದೆದಿ ವನದವರೆಗೆ ಕಾಲ್ನಡಿಗೆ ಜಾಥಾ ನಡೆಸಲಿದೆ. ಸುಮಾರು 2 ರಿಂದ 3 ಸಾವಿರ ಜನ ಈ ಕಾಲ್ನಡಿಗೆ ಜಾಥಾದಲ್ಲಿ ಪಾಲ್ಗೊಳ್ಳುವ ನಿರೀಕ್ಷೆಯಿದೆ. ಪುತ್ತೂರು ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಿಂದ ನಾಳೆ ಬೆಳಿಗ್ಗೆ 9 (ಅಕ್ಟೋಬರ್ 10) ಗಂಟೆಗೆ ಹೊರಡಲಿರುವ ಜಾಥಾದಲ್ಲಿ ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಬಿಜೆಪಿ ಮುಖಂಡರು ಭಾಗವಹಿಸಲಿದ್ದಾರೆ.

  Share Information
  Advertisement
  Click to comment

  You must be logged in to post a comment Login

  Leave a Reply