Connect with us

    LATEST NEWS

    ತಾಲಿಬಾನಿಗಳಿಂದ ಅಪಹರಣಕ್ಕೊಳಗಾದ 150 ಮಂದಿ ಭಾರತೀಯರು ಸುರಕ್ಷಿತ

    ಕಾಬೂಲ್ ಅಗಸ್ಟ್ 21: ತಾಲಿಬಾನಿಗಳಿಂದ ಅಪಹರಣಕ್ಕೊಳಗಾದ ಭಾರತೀಯರು ಸುರಕ್ಷಿತರಾಗಿದ್ದು, ಎಲ್ಲರನ್ನು ತಾಲಿಬಾನಿಗಳು ಬಿಡುಗಡೆಗೊಳಿಸಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಇಂದು ಬೆಳಿಗ್ಗೆ ವಿಮಾನ ನಿಲ್ದಾಣಕ್ಕೆ ಬರುತ್ತಿದ್ದ ಸುಮಾರು 150 ಮಂದಿ ಭಾರತೀಯರನ್ನು ಹಮೀದ್ ಕರ್ಜೈ ವಿಮಾನ ನಿಲ್ದಾಣದ ಸಮಿಪದ ಪ್ರದೇಶದಿಂದ ತಾಲಿಬಾನಿಗಳು ಅಪಹರಣ ಮಾಡಿದ್ದರು.


    ಅವರನ್ನು ಅಪಹರಿಸಿದ ಗುಂಪು ಅವರ ಬಳಿ ಇದ್ದ ಪಾಸ್‌ಪೋರ್ಟ್ ಪಡೆದು ತನಿಖೆ ನಡೆಸಿದೆ ಎಂದು ಎಟೊಲಾಟ್ರೋಜ್ ಟ್ವೀಟ್ ಮಾಡಿತ್ತು. ಅಪಹರಣಕ್ಕೊಳಗಾಗದವರಲ್ಲಿ ಅಫ್ಗಾನಿಸ್ತಾನ ಜನರು, ಅಫ್ಗನ್ ಸಿಖ್ಖರು ಮತ್ತು ಬಹುತೇಕರು ಭಾರತೀಯರಿದ್ದರು ಎಂದು ತಾಲಿಬಾನಿಗಳಿಂದ ತಪ್ಪಿಸಿಕೊಂಡ ವ್ಯಕ್ತಿ ಸ್ಥಳೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.


    ರಾತ್ರಿ 1 ಗಂಟೆ ಸುಮಾರಿಗೆ ನಾವು‌ ಮಿನಿ ವ್ಯಾನಿನಲ್ಲಿ ವಿಮಾನ ನಿಲ್ದಾಣಕ್ಕೆ ಹೊರಟಿದ್ದೆವು. ಅಧಿಕಾರಿಗಳು ಒಳಗೆ ಪ್ರವೇಶಿಸಲು ಅವಕಾಶ ನೀಡಲಿಲ್ಲ. ಅಷ್ಟರೊಳಗೆ ಅಲ್ಲಿಗೆ ಬಂದ ತಾಲಿಬಾನಿಗಳನ್ನು ಎಲ್ಲರ ಮೇಲೆ ದೈಹಿಕ ಹಲ್ಲೆ ನಡೆಸಿ ಕರೆದೊಯ್ದರು. ಕರೆದೊಯ್ಯುವಾಗ ಮತ್ತೊಂದು ಗೇಟ್ ಮೂಲಕ ವಿಮಾನನಿಲ್ದಾಣಕ್ಕೆ ಸೇರಿಸುವುದಾಗಿ ತಾಲಿಬಾನಿಗಳು ಹೇಳಿದ್ದರು. ಈಗ ಅಪಹೃತರು ಎಲ್ಲಿದ್ದಾರೆ ಎಂಬುದು ಗೊತ್ತಾಗುತ್ತಿಲ್ಲ ಎಂದು ಪತ್ನಿ ಜೊತೆ ತಾಲಿಬಾನಿಗಳಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿ ಭಾರತೀಯ ಮಾಧ್ಯಮಕ್ಕೆ ತಿಳಿಸಿದ್ದಾರೆ.

    Share Information
    Advertisement
    Click to comment

    Leave a Reply

    Your email address will not be published. Required fields are marked *