Connect with us

    LATEST NEWS

    ಕಾಬೂಲ್ ವಿಮಾನ ನಿಲ್ದಾಣದ ಹೊರಗೆ 150 ಅಧಿಕ ಭಾರತೀಯರನ್ನು ಅಪಹರಿಸಿದ ತಾಲಿಬಾನಿಗಳು..!!

    ಕಾಬೂಲ್ ಅಗಸ್ಟ್ 21: ಅಪ್ಘಾನಿಸ್ತಾನವನ್ನು ತಾಲಿಬಾನ್ ಗಳು ವಶಕ್ಕೆ ಪಡೆದ ನಂತರ ತಾಲಿಬಾನಿಗಳು ತನ್ನ ನಿಜ ರೂಪನ್ನು ತೋರಿಸಲು ಪ್ರಾರಂಭಿಸಿದ್ದು, ಇದೀಗ ಅಫ್ಘಾನಿಸ್ತಾನವನ್ನು ತೊರೆಯಲು ಕಾಬೂಲ್ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದ ಸುಮಾರು 150 ಕ್ಕೂ ಅಧಿಕ ಭಾರತೀಯರನ್ನು ತಾಲಿಬಾನಿ ಹೋರಾಟಗಾರರು ಅಪಹರಿಸಿದ್ದಾರೆ ಎಂದು ಅಪ್ಘಾನ್ ನ ಸ್ಥಳೀಯ ಮಾಧ್ಯಮಗಳನ್ನು ಉಲ್ಲೇಖಿಸಿ ಎಎನ್ಐ ವರದಿ ಮಾಡಿದೆ.


    ಆದರೆ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಬಗ್ಗೆ ಯಾವುದೇ ಅಧಿಕೃತ ಹೇಳಿಕೆಯನ್ನು ಇಲ್ಲಿಯವರೆಗೆ ನೀಡಿಲ್ಲ. ವರದಿಗಳ ಪ್ರಕಾರ, 100 ಕ್ಕೂ ಹೆಚ್ಚು ಭಾರತೀಯರು ಮತ್ತು ಕೆಲವು ಅಫಘಾನ್ ಪ್ರಜೆಗಳು ಕಾಬೂಲ್‌ನ ಹಮೀದ್ ಕರ್ಜೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಅಪಹರಣಕ್ಕೊಳಗಾದ ಜನರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ ಮತ್ತು ಅವರ ಮೊಬೈಲ್ ಪೋನ್ ಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ವರದಿಯಾಗಿದೆ.


    ಈ ನಡುವೆ ತಾಲಿಬಾನ್ ವಕ್ತಾರ ಅಹ್ಮದುಲ್ಲಾ ವಸೇಕ್ ಅವರು ಅಪಹರಣ ಆರೋಪವನ್ನು ನಿರಾಕರಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply