Connect with us

    LATEST NEWS

    ಮಂಗಳೂರು – ಜಲ ಮಾರ್ಗದರ್ಶಕರ ಸಮಾವೇಶ

    ಮಂಗಳೂರು ಜುಲೈ 1: GIS ಸಂಸ್ಥೆಯ ವತಿಯಿಂದ Composite Water Resource Management (CWRM) ಪರಿಕಲ್ಪನೆ ಮತ್ತು GIS ಆಧಾರಿತ ಯೋಜನೆ ಕುರಿತು ಸಾಮರ್ಥ್ಯ ಅಭಿವೃದ್ದಿ ಕುರಿತು “ಜಲ ಮಾರ್ಗದರ್ಶಕರ ಸಮಾವೇಶ” ಒಂದು ದಿನದ ಕಾರ್ಯಗಾರವು ಮಂಗಳೂರಿನಲ್ಲಿ ನಡೆದಿದೆ.


    ಬೆಳೆಯುತ್ತಿರುವ ಹವಾಮಾನ ವೈಪರೀತ್ಯದ ನಡುವೆ ಭಾರತದ ಬಹುಪಾಲು ಕೃಷಿ ಮತ್ತು ಗ್ರಾಮೀಣ ಜೀವನೋಪಾಯಗಳಲ್ಲಿ ನೀರಿನ ಅವಶ್ಯಕತೆಗಳನ್ನು ಗಮನಿಸಿದರೆ ಹವಾಮಾನ ಬದಲಾವಣೆಗೆ ಕೃಷಿಯ ಸ್ಥಿತಿ ಹಾಗು ಮುಂದಿನ ಪೀಳಿಗೆಗೆ ನೀರು ಉಳಿಸುವ ಗುರಿಯತ್ತ ವಾಲುವುದು ನಿರ್ಣಾಯಕವಾಗಿದೆ. ಈ ನಿಟ್ಟಿನಲ್ಲಿ GIZ (ಇಂಡೋ-ಜರ್ಮನ್ ಕೋಅಪರೇಷನ್)ಇಂಡಿಯಾವು 2019 ರಿಂದ ಗ್ರಾಮೀಣಾಭಿವೃದ್ಧಿ ಸಚಿವಾಲಯ (MoRD) ಮತ್ತು ಜಲ ಶಕ್ತಿ ಸಚಿವಾಲಯ (MoJS) ದೊಂದಿಗೆ ‘ಗ್ರಾಮೀಣ ಭಾರತದಲ್ಲಿ ನೀರಿನ ಭದ್ರತೆ ಮತ್ತು ಹವಾಮಾನ ಅಳವಡಿಕೆ’ (WASCA) ಎಂಬ ವಿಶೇಷ ಯೋಜನೆಯನ್ನು ಅನುಷ್ಠಾನಗೊಳಿಸುತ್ತಿದೆ.


    WASCA ಯ ಪ್ರಮುಖ ಅಂಶಗಳೆಂದರೆ ವೈಜ್ಞಾನಿಕ ಮಾಹಿತಿ ಸಂಗ್ರಹಣೆ, ಭೌಗೋಳಿಕ ಮಾಹಿತಿ ವ್ಯವಸ್ಥೆ (GIS) ಹಾಗೂ ನೀರಿನ ಮೌಲ್ಯಮಾಪನಗಳು, ನೀರಿನ ಅವಶ್ಯಕತೆಯ ಬೇಡಿಕೆ ಮತ್ತು ಪೂರೈಕೆ ಇತ್ಯಾದಿ ವಾಸ್ತವಿಕ ಪರಿಸ್ಥಿತಿಯನ್ನು ಚಿತ್ರಿಸಲು. ಗ್ರಾಮೀಣ ಪ್ರದೇಶಗಳು, ಭೂ ಬಳಕೆ ಮತ್ತು ಮಳೆನೀರಿನ ಹರಿವು ನಿರ್ವಹಣೆಯ ಬಗ್ಗೆ ಗ್ರಾಮ ಪಂಚಾಯತ್‌ಗಳು (GPs) ಮತ್ತು ಬ್ಲಾಕ್ ಮಟ್ಟದ ಅಧಿಕಾರಿಗಳಿಗೆ ತರಬೇತಿ ಕೂಡ ನೀಡಲಾಗುತ್ತದೆ. ಈ ಎಲ್ಲಾ ವಿಚಾರಗಳನ್ನು ಪರಿಗಣಿಸಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಜರ್ಮನ್ ಕಾರ್ಪೊರೇಷನ್ ಸಹಯೋಗದೊಂದಿಗೆ ಕರ್ನಾಟಕ ರಾಜ್ಯದ ಮೈಸೂರು, ಕಲಬುರ್ಗಿ, ಬೆಂಗಳೂರು ಹಾಗೂ ಬೆಳಗಾವಿ ಹೀಗೆ ನಾಲ್ಕು ವಿಭಾಗಗಳಲ್ಲಿ “ಜಲ ಮಾರ್ಗದರ್ಶಕರ ಸಮಾವೇಶ” ಒಂದು ದಿನದ ಕಾರ್ಯಗಾರವನ್ನು ನಡೆಸಲಾಗುತ್ತಿದೆ.


    ಸದ್ಯ ಮೈಸೂರು ವಿಭಾಗದ ಕಾರ್ಯಾಗಾರವು ಮಂಗಳೂರಿನ ಓಷ್ಯನ್ ಪರ್ಲ್ ಹೋಟೆಲ್ ನಲ್ಲಿ ಜರುಗಿದ್ದು, ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ತಾಂತ್ರಿಕ ಸಂಯೋಜಕರು ಈ ಕಾರ್ಯಗಾರದ ಸದುಪಯೋಗ ಪಡೆದುಕೊಂಡಿದ್ದಾರೆ. ನೀರು ಉಳಿಸಿ-ಬೆಳೆಸುವ ಈ ವಿಶೇಷ ತರಬೇತಿ ಕಾರ್ಯಗಾರಕ್ಕೆ ಗ್ರಾಮೀಣಾಭೀವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ.ಎಲ್.ಕೆ ಅತೀಕ್ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತರಾದ ಶ್ರೀಮತಿ ಶಿಲ್ಪಾ ನಾಗ್ ಅವರು ಶ್ಲಾಘನೆ ವ್ಯಕ್ತಪಡಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಶ್ರೀ ಶೈಲ ಬಿ. ದಿದ್ದಿಮನಿ – ಜಂಟಿ ನಿರ್ದೇಶಕರು (ಆಡಳಿತ) ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಶ್ರೀ ತ್ಯಾಗರಾಜ್ ಸಹಾಯಕ ನಿರ್ದೇಶಕರು ಗ್ರಾಮೀಣಾಭಿವೃದ್ಧಿ ಆಯುಕ್ತಾಲಯ, ಉಡುಪಿ ಜಿಲ್ಲಾ ಪಂಚಾಯತ್ ಸಿಇಒ ಶ್ರೀ ಪ್ರಸನ್ನ ಹೆಚ್, ಶಿವಮೊಗ್ಗ ಜಿಲ್ಲಾ ಪಂಚಾಯತ್ ಸಿಇಒ ವೈಶಾಲಿ, ಹಾಸನ ಜಿಲ್ಲಾ ಪಂಚಾಯತ್ ಸಿಇಒ ಶ್ರೀ ಕಾಂತರಾಜು, GIZ (ಜರ್ಮನ್ ಕೋ –ಅಪರೇಷನ್) ಸಂಸ್ಥೆಯ ಕರ್ನಾಟಕ ಸಂಯೋಜಕರಾದ ಅಮರ್ ಸಕ್ಸೆನಾ ಮತ್ತಿತ್ತರು ವೇದಿಕೆಯಲ್ಲಿದ್ದರು.

    Share Information
    Advertisement
    Click to comment

    You must be logged in to post a comment Login

    Leave a Reply