Connect with us

    LATEST NEWS

    ಮೂರುವರೆ ವರ್ಷ ಮಗುವಿಗೆ ನೇಣು ಬಿಗಿದು ತಾನೂ ಆತ್ಮಹತ್ಯೆ ಮಾಡಿಕೊಂಡ ಬ್ರಹ್ಮಾವರ ಮೂಲದ ಮಹಿಳೆ

    ಬೆಂಗಳೂರು ಜುಲೈ 1: ಉಡುಪಿ ಜಿಲ್ಲೆಯ ಬ್ರಹ್ಮಾವರ ಮೂಲದ ಮಹಿಳೆಯೊಬ್ಬರು ತನ್ನ ಮೂರುವರೆ ವರ್ಷದ ಮಗುವನ್ನು ನೇಣು ಹಾಕಿ ಕೊಂದು ತಾನು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಂಗಳೂರಿನ RR ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಗುರುವಾರ ರಾತ್ರಿ ನಡೆದಿದೆ.


    ಮಗುವನ್ನು ರಿಯಾ ಎಂದು ಗುರುತಿಸಲಾಗಿದ್ದು ತಾಯಿ ದೀಪಾ(31) ಕೂಡ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾಳೆ. ಆತ್ಮಹತ್ಯೆಗೂ ಮುನ್ನ ’ನನ್ನ ಸಾವಿಗೆ ಯಾರೂ ಕಾರಣರಲ್ಲ, ಸ್ವಾರಿ ಅಮ್ಮಾ’ ಎಂಬುದಾಗಿ ಬರೆದಿದ್ದ ಡೆತ್‌ನೋಟ್ ಪತ್ತೆಯಾಗಿದೆ.
    ಮೂಲತಃ ಬ್ರಹ್ಮಾವರದವರಾದ ದೀಪಾ ಬೆಂಗಳೂರಿನ ಆರ್.ಆರ್. ನಗರದ ಅಪಾರ್ಟ್‌ಮೆಂಟ್‌ನಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದರು. ಪತಿ ಆದರ್ಶ್‌ ಸಾಫ್ಟ್‌ವೇರ್‍ ಎಂಜಿನಿಯರ್ ಆಗಿದ್ದು, 2017ರಲ್ಲಿ ಇವರಿಬ್ಬರ ಮದುವೆ ನಡೆದಿತ್ತು.

    ಮದ್ವೆಯಾದಗಿನಿಂದಲೂ ಆರ್ ಆರ್ ನಗರದ ಮಂತ್ರಿ ಅಪಾರ್ಟ್ಮೆಂಟ್ ನಲ್ಲಿ ವಾಸವಾಗಿದ್ದರು. ಕಳೆದೊಂದು ವಾರದಿಂದ ಜ್ವರ ಹಾಗೂ ಹೊಟ್ಟೆ ನೋವಿನಿಂದ ದೀಪಾ ಬಳಲುತ್ತಿದ್ದರು. ಚಿಕಿತ್ಸೆ ಪಡೆದರೂ ನೋವು ಕಡಿಮೆ ಆಗಿರಲಿಲ್ಲ. ಹೀಗಾಗಿ ದೀಪಾ ಜಿಗುಪ್ಸೆಗೊಂಡಿದ್ದರು ಎಂದು ತಿಳಿದು ಬಂದಿದ್ದರು.ರಾತ್ರಿ ಮಲಗಿದ್ದ ವೇಳೆ ಮಗುವಿನ ಕುತ್ತಿಗೆಗೆ ವೇಲ್ ಬಿಗಿದು ನೇಣು ಹಾಕಿ ಕೊಲೆ ಮಾಡಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply