DAKSHINA KANNADA
ಭಾರತೀಯ ಸೇನೆ ಬಗ್ಗೆ ಅವಹೇಳನಕಾರಿ ಭಾಷಣ ಎಸ್ ಡಿಪಿಐ ವಿರುದ್ದ ದೂರು

ಪುತ್ತೂರು
ಭಾರತೀಯ ಸೇನೆ ಬಗ್ಗೆ ಅವಹೇಳನಕಾರಿ ಭಾಷಣ ಎಸ್ ಡಿಪಿಐ ವಿರುದ್ದ ದೂರು
ಪುತ್ತೂರು ಸೆಪ್ಟೆಂಬರ್ 20: ಪುತ್ತೂರಿನಲ್ಲಿ ನಡೆದ ಎಸ್ ಡಿಪಿಐ ಪ್ರತಿಭಟನೆಯಲ್ಲಿ ಭಾರತೀಯ ಸೇನೆಯ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ ಎಂದು ಎಸ್ ಡಿಪಿಐ ಸಂಘಟನೆಯ ಮೇಲೆ ದೂರು ದಾಖಲಾಗಿದೆ.
ಪುತ್ತೂರು ಹಿಂದೂ ಜಾಗರಣೆ ವೇದಿಕೆಯ ಉಪಾಧ್ಯಕ್ಷರಾದ ದಿನೇಶ್ ಪಂಜಿಗ ಎಂಬವರು ಈ ಬಗ್ಗೆ ಪುತ್ತೂರು ನಗರ ಠಾಣೆಗೆ ಲಿಖಿತ ದೂರು ನೀಡಿದ್ದಾರೆ. ಎಸ್ ಡಿಪಿಐ ನ ಮುಖಂಡರುಗಳಾದ ಜಾಬೀರ್ ಅರಿಯಡ್ಕ ಸಿದ್ದಿಕ್ ,ಬಷೀರ್ ಕೂರ್ನಡ್ಕ ಎಂಬವರು ಪ್ರತಿಭಟನ ಸಭೆಯಲ್ಲಿ ಭಾರತದ ಸೈನಿಕರ ವಿರುದ್ದ ಅವಹೇಳನಕಾರಿಯಾಗಿ ಮಾತನಾಡಿ ಭಾರತೀಯ ಸೈನಿಕರ ಮತ್ತು ಸೈನ್ಯ ವ್ಯವಸ್ಥೆಯನ್ನು ಅವಮಾನಿಸಿ ಕೋಮು ಪ್ರಚೋದನಕಾರಿಯಾಗಿ ಮಾತನಾಡಿದ್ದಾರೆ ಎಂದು ದೂರಿನಲ್ಲಿ ಅಪಾದನೆ ಮಾಡಲಾಗಿದೆ.
