ಪುತ್ತೂರು

ಟಾರ್ ಟ್ಯಾಂಕರ್ ನಲ್ಲಿ ಚಾಲಕನ ಮೃತ ದೇಹ ಪತ್ತೆ

ಉಪ್ಪಿನಂಗಡಿ ಸೆಪ್ಟೆಂಬರ್ 20: ಟಾರ್ ಹೊತ್ತೊಯ್ಯುವ ಟ್ಯಾಂಕರ್ ನಲ್ಲಿ ಚಾಲಕನ ಶವ ಪತ್ತೆಯಾದ ಘಟನೆ ರಾಷ್ಟ್ರೀಯ ಹೆದ್ದಾರಿ 75ರ ಬೆಂಗಳೂರು – ಮಂಗಳೂರು ನಡುವಿನ ಕೆಂಪುಹೊಳೆ ಎಂಬಲ್ಲಿ ನಡೆದಿದೆ.

ಮೃತ ಟ್ಯಾಂಕರ್ ಚಾಲಕನನ್ನು ತಮಿಳುನಾಡಿನ ತಿರುಚ್ಚಿಯ ನಟರಾಜ್‌ ಎಂಬವರ ಪುತ್ರ ನಾಗರಾಜ್‌ (37) ಎಂದು ಗುರುತಿಸಲಾಗಿದೆ.
ಹೊಸೂರಿನಿಂದ ಮಂಗಳೂರಿಗೆ ಬರುತ್ತಿದ್ದ ಟ್ಯಾಂಕರ್ ಇದಾಗಿದ್ದು ಮಾರನಹಳ್ಳಿ ಕೆಂಪುಹೊಳೆ ಎಂಬಲ್ಲಿ ನಿಲ್ಲಿಸಲಾಗಿತ್ತು.

ಇನ್ನೊಂದು ಟ್ಯಾಂಕರ್ ನಲ್ಲಿ ಇದೇ ದಾರಿಯಲ್ಲಿ ಬರುತ್ತಿದ್ದ ಇದೇ ಕಂಪೆನಿಯ ಇನ್ನೊಬ್ಬ ಚಾಲಕ ಮಾತನಾಡಿಸುವ ಇರಾದೆಯಲ್ಲಿ ತೆರಳಿದಾಗ ಟ್ಯಾಂಕರ್‌ನಲ್ಲಿ ಚಾಲಕ ಕಂಡಿರಲಿಲ್ಲ. ಟ್ಯಾಂಕರ್‌ ಸುತ್ತ ಹುಡುಕಾಡಿದಾಗ ಟ್ಯಾಂಕರ್‌ನ ಮೇಲ್ಭಾಗದ ಮುಚ್ಚಳ ತೆಗೆದುಕೊಂಡಿದ್ದು ಕಂಡಿತು.

ಒಳಗಡೆ ಗಮನಿಸಿದಾಗ ಆತನ ಶವ ಪತ್ತೆಯಾಗಿರುವುದು ಕಂಡಿತು. ತತ್‌ಕ್ಷಣವೇ ಆತ ಸಕಲೇಶಪುರ ಠಾಣೆಗೆ ಮಾಹಿತಿ ನೀಡಿದ್ದಾರೆ.
ಠಾಣೆ ಎಸ್‌ಐ ಹಾಗೂ ವೃತ್ತ ನಿರೀಕ್ಷಕರು ಸ್ಥಳಕ್ಕೆ ತೆರಳಿ, ಪರಿಶೀಲಿಸಿದಾಗ ಮೃತದೇಹದಲ್ಲಿ ಯಾವುದೇ ಗಾಯಗಳು ಕಂಡುಬಂದಿಲ್ಲ. ಸಂಶಯಾಸ್ಪದ ರೀತಿಯಲ್ಲಿ ಪತ್ತೆಯಾಗಿರುವುದಾಗಿ ಪ್ರಕರಣ ದಾಖಲಿಸಿದ್ದಾರೆ.