ಉಡುಪಿ ಜಿಲ್ಲೆಯ ಆಗಸದಲ್ಲಿ ಮೂಡಿದ ಬಣ್ಣದ ಕಾರ್ಮೋಡ

ಉಡುಪಿ ಜೂನ್ 10: ಕೇರಳಕ್ಕೆ ಮುಂಗಾರು ಮಳೆ ಪ್ರವೇಶಿಸುತ್ತಿದ್ದಂತೆ ಕರ್ನಾಟಕ ಕರಾವಳಿಯಲ್ಲಿ ಮುಂಗಾರು ಮಳೆ ಪ್ರವೇಶಕ್ಕೆ ಕ್ಷಣಗಣನೆ ಆರಂಭವಾಗಿದೆ.

ಕರಾವಳಿಯಾದ್ಯಂತ ಮೋಡ ಕವಿದ ವಾತಾವಾರಣ ಇದ್ದು ಅಲ್ಲಲ್ಲಿ ತುಂತುರು ಮಳೆ ಪ್ರಾರಂಭವಾಗಿದೆ. ಈ ನಡುವೆ ಉಡುಪಿಯಲ್ಲಿ ನಿನ್ನೆ ಭಾನುವಾರ ಸಂಜೆ ಆಗಸದಲ್ಲಿ ಮೂಡಿದ ಕಾರ್ಮೋಡಗಳು ಜನರನ್ನು ಆಕರ್ಷಿಸಿದೆ. ಕಾರ್ಮೋಡ ಬಾನಲ್ಲಿ ಚಿತ್ತಾರ ಮೂಡಿಸಿದ್ದು ರಂಗಿನೋಕುಳಿ ಚೆಲ್ಲಿದೆ.

ಸಂಜೆ ಸೂರ್ಯ ಸಮುದ್ರಕ್ಕೆ ಇಳಿಯುತ್ತಿದ್ದಂತೆ ಬಾನಲ್ಲಿ ಹಳದಿ, ಕೆಂಪು, ನೀಲಿ, ಕಪ್ಪು, ಬಿಳಿ ಹೀಗೆ ನಾನಾ ಬಣ್ಣಗಳು ತುಂಬಿಕೊಂಡಿದೆ. ಛಾಯಾಗ್ರಾಹಕರಂತೂ ವಾರಾಂತ್ಯ ಆಗಸವನ್ನು ಸಂಪೂರ್ಣ ಆವರಿಸಿಕೊಂಡು ಬಿಟ್ಟಿದ್ದು ಕ್ಯಾಮೆರಾದಲ್ಲಿ ಮೋಡದ ವಿವಿಧ ಆಕಾರವನ್ನು ಸೆರೆ ಮಾಡಿಕೊಂಡಿದ್ದಾರೆ.

VIDEO

13 Shares

Facebook Comments

comments