LATEST NEWS
ಗೋಹತ್ಯೆ ನಿಷೇಧವಾದರೆ ಸ್ವಾಗತ – ಮುಸ್ಲೀಂ ಯೂತ್ ಲೀಗ್

ಗೋಹತ್ಯೆ ನಿಷೇಧವಾದರೆ ಸ್ವಾಗತ – ಮುಸ್ಲೀಂ ಯೂತ್ ಲೀಗ್
ಮಂಗಳೂರು ಜೂನ್ 10: ಗೋಹತ್ಯೆ ನಿಷೇಧವಾದರೆ ಸ್ವಾಗತಿಸುತ್ತೇವೆ ಎಂದು ದಕ್ಷಿಣಕನ್ನಡ ಮುಸ್ಲೀಂ ಲೀಗ್ ಹಾಗೂ ಮುಸ್ಲೀಂ ಯೂತ್ ಲೀಗ್ ತಿಳಿಸಿದೆ.
ಇಂದು ಮಂಗಳೂರಿನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಸ್ಲೀಂ ಯೂತ್ ಲೀಗ್ ಪದಾಧಿಕಾರಿಗಳು ದಕ್ಷಿಣಕನ್ನಡ ಜಿಲ್ಲೆಯ ಮುಸ್ಲಿಮರು ಗೋಹತ್ಯೆಯನ್ನು ವಿರೋಧಿಸುತ್ತಿದ್ದು, ದಕ್ಷಿಣಕನ್ನಡ ಜಿಲ್ಲೆಯ ಖಾಝಿಗಳು ಕೂಡ ಗೋಹತ್ಯೆ ವಿರೋಧವಾಗಿದ್ದಾರೆ ಎಂದು ತಿಳಿಸಿದರು.

ಸರಕಾರ ಗೋಹತ್ಯೆ ನಿಷೇಧಿಸಿದರೆ ಸರಕಾರದ ನಿರ್ಧಾರವನ್ನು ಸ್ವಾಗತಿಸುತ್ತೇವೆ ಅಲ್ಲದೆ ಮುಸ್ಲಿಮರು ಬೇಕಾದ್ರೆ ಗೋಭಕ್ಷಣೆಯನ್ನೇ ಬಿಡುತ್ತೇವೆ ಎಂದು ಹೇಳಿದರು.
ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗೋಸಾಗಾಟದ ಬಗ್ಗೆ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು, ಅಲ್ಲದೆ ಅಕ್ರಮ ಗೋಸಾಗಾಟ ದಂಧೆಗೆ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.
ಬೆಳ್ತಂಗಡಿಯ ಮುಂಡಾಜೆಯಲ್ಲಿ ಐಷಾರಾಮಿ ಕಾರಿನಲ್ಲಿ ಗೋವುಗಳ ಕಳ್ಳ ಸಾಗಾಣೆಯನ್ನು ಖಂಡಿಸಿದ ಮುಸ್ಲೀಂ ಯೂತ್ ಲೀಗ್ ಸತ್ತ ದನದ ಮಾಂಸಗಳನ್ನು ಮಾರಾಟ ಮಾಡುವವರ ವಿರುದ್ದ ಮುಸ್ಲೀಂ ಸಮುದಾಯವೇ ಹೋರಾಟ ಮಾಡುವ ಅಗತ್ಯ ವಿದೆ ಎಂದರು.
ಸಮಾಜದಲ್ಲಿ ಕೋಮು ಸೌಹಾರ್ದತೆ ಉಳಿಸಲು ಇಂತಹ ಅಮಾನವೀಯ ಕೃತ್ಯವನ್ನು ಮುಸ್ಲೀಂ ಸಮುದಾಯ ಎಂದಿಗೂ ಬೆಂಬಲಿಸುವುದಿಲ್ಲ ,ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳದಿದ್ದರೆ ಜಿಲ್ಲಾ ಕೇಂದ್ರಗಳಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದರು.