Connect with us

    KARNATAKA

    ಕಾರವಾರದ ಪೆರ್ನೆಂ ಬಳಿ ಸುರಂಗದ ಒಳಭಾಗದ ಗೋಡೆ ಕುಸಿದ ಕೊಂಕಣ ರೈಲ್ವೆ ಸಂಚಾರ ಬಂದ್

    ಮಂಗಳೂರು ಅಗಸ್ಟ್ 7: ಭಾರಿ ಮಳೆಯಿಂದಾಗಿ ಕೊಂಕಣ ರೈಲ್ವೆ ವ್ಯಾಪ್ತಿಯ ಕಾರವಾರ ವಲಯದ ಪೆರ್ನೆಂ ಬಳಿ ಸುರಂಗದ ಒಳಭಾಗದ ಗೋಡೆ ಕುಸಿದಿದ್ದು ಮುಂದಿನ ಸೂಚನೆ ವರೆಗೆ ಎಲ್ಲಾ ರೈಲುಗಳ ಸಂಚಾರ ರದ್ದುಪಡಿಸಲಾಗಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆ ತಿಳಿಸಿದೆ.


    ಕೊಂಕಣ ರೈಲ್ವೆ ವ್ಯಾಪ್ತಿಯ ಕಾರವಾರ ವಲಯದ ಗೋವಾ ಬಳಿಯಯ ಪೆರ್ನಮ್‌ನಲ್ಲಿರುವ ಸುರಂಗ ಮಾರ್ಗದ ಗೋಡೆಯ ಒಂದು ಭಾಗ ಗುರುವಾರ ಭಾರೀ ಮಳೆಯಿಂದಾಗಿ ಕುಸಿದಿದೆ. ಮಧುರೆ ಹಾಗೂ ಪೆರ್ನಂ ಮಧ್ಯೆ ಸುರಂಗದ ಐದು ಮೀ. ಎತ್ತರದ ಗೋಡೆ ಕುಸಿದಿದ್ದು ಯಾವುದೇ ಅಪಾಯವಾಗಿಲ್ಲ. ಗೋಡೆ ಕುಸಿದು ರೈಲ್ವೆ ಹಳಿ ಮೇಲೆ ಸುರಿದ ಮಣ್ಣು ತೆರವು ನಡೆಯುತ್ತಿದೆ. ಕುಸಿದ ಗೋಡೆಯ ದುರಸ್ಥಿ ಪ್ರಗತಿಯಲ್ಲಿದೆ. ಮುಂದಿನ ಸೂಚನೆ ತನಕ ಈ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತಗೊಳಿಸಲಾಗಿದೆ.

    ಗೋವಾದಲ್ಲಿ ಕಳೆದ ಐದು ದಿನಗಳಿಂದ ನಿರಂತರ ಮಳೆಯಾಗುತ್ತಿದ್ದು, ಕೆಲ ತಗ್ಗು ಪ್ರದೇಶಗಳಲ್ಲಿ ಪ್ರವಾಹದ ಗಂಭೀರ ಪರಿಸ್ಥಿತಿಯಿದೆ. ಪ್ರಯಾಣಿಕರು ಹೆಚ್ಚಿನ ಮಾಹಿತಿಗೆ 022 27587939, 10722 ಸಂಪರ್ಕಿಸಬಹುದು ಎಂದು ಕೊಂಕಣ ರೈಲ್ವೆ ಮಂಗಳೂರು ವಿಭಾಗ ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply