Connect with us

BANTWAL

ತಲಕಾವೇರಿ ಭೂಕುಸಿತ ದುರಂತದಲ್ಲಿ ಬಂಟ್ವಾಳದ ಅರ್ಚಕರು..!

ಬಂಟ್ವಾಳ ಅಗಸ್ಟ್ 6 : ಕೊಡಗಿನ ತಲಕಾವೇರಿಯಲ್ಲಿ ಗುಡ್ಡ ಜರಿದು ಅರ್ಚಕರ ಮನೆ ಸಮಾಧಿಯಾದ ದುರಂತ ಪ್ರಕರಣದಲ್ಲಿ ನಾಪತ್ತೆಯಾಗಿರುವ ಐವರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ಮೂಲದ ಯುವ ಅರ್ಚಕರೊಬ್ಬರೂ ಸೇರಿದ್ದಾರೆ ಎಂದು ತಿಳಿದು ಬಂದಿದೆ.

ಬಂಟ್ವಾಳ ಮೂಲದ ಕಳ್ಳಿಗೆ ಗ್ರಾಮದ ಕನಪಾಡಿ ನಿವಾಸಿ ರವಿಕಿರಣ್ ಈ ದುರಂತದಲ್ಲಿ ನಾಪತ್ತೆಯಾಗಿರುವ ಅರ್ಚಕರಾಗಿದ್ದಾರೆ.ರವಿ ಅವರು ಕಳೆದ ಎರಡು ವರ್ಷಗಳಿಂದ ತಲಕಾವೇರಿ ದೇವಸ್ಥಾನದಲ್ಲಿ ಅರ್ಚಕರ ಜೊತೆ ಸಹಾಯಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಸುಮಾರು 24 ವರ್ಷದ ರವಿಕಿರಣ್ ಅವರು ರಾಮಕೃಷ್ಣ ಮತ್ತು ರೇಣುಕಾ ಭಟ್ ದಂಪತಿಯ ಪುತ್ರನಾಗಿದ್ದಾರೆ.

ಕೊರೊನಾ ಲಾಕ್ ಡೌನ್ ಸಂದರ್ಭದಲ್ಲಿ ಸ್ವ ಊರು ಬಂಟ್ವಾಳದಲ್ಲೇ ಇದ್ದ ರವಿಕಿರಣ್ ಬಳಿಕ ತಲಕಾವೇರಿ ದೇವಳದ ಆರ್ಚಕರು ಮರಳಿ ಕರೆದ ಹಿನ್ನೆಲೆಯಲ್ಲಿ ತಲಕಾವೇರಿಗೆ ವಾಪಸ್ಸಾಗಿದ್ದರು. ಬಂಟ್ವಾಳ ಶಾಸಕರಾದ ರಾಜೇಶ್ ನಾಯಕ್ ಅವರು ಅಲ್ಲಿನ ಶಾಸಕರಾದ ಬೋಪಯ್ಯ ಅವರನ್ನು ಸಂಪರ್ಕಿಸಿ ಮಾಹಿತಿ ಧೃಡಪಡಿಸಿದ್ದಾರೆ.

Facebook Comments

comments