LATEST NEWS
ಚಳಿಗಾಲ ಮುಗಿಯಲು ಕೆಲವೇ ದಿನಗಳಿರುವಾಗ ಕರಾವಳಿಯಲ್ಲಿ ತೀವ್ರಗೊಂಡ ಚಳಿ
ಚಳಿಗಾಲ ಮುಗಿಯಲು ಕೆಲವೇ ದಿನಗಳಿರುವಾಗ ಕರಾವಳಿಯಲ್ಲಿ ತೀವ್ರಗೊಂಡ ಚಳಿ
ಮಂಗಳೂರು ಫೆ.10: ಇನ್ನೇನು ಚಳಿಗಾಲ ಅಂತ್ಯವಾಗುತ್ತಿದ್ದಂತೆ ಕರಾವಳಿಯಲ್ಲಿ ಚಳಿ ತೀವ್ರಗೊಂಡಿದೆ. ಇಂದು 19.3 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದೆ. ಈ ಋತುವಿನಲ್ಲಿ ಇದೇ ಮೊದಲ ಬಾರಿಗೆ ತಾಪಮಾನ 19 ಡಿಗ್ರಿ ಸನಿಹಕ್ಕೆ ಇಳಿದಿದೆ. ಈ ಬಾರಿ ಮಳೆ ಜನವರಿಯವರೆಗೂ ಸುರಿದಿದ್ದರಿಂದ ಚಳಿಯ ಪ್ರಮಾಣ ಕಡಿಮೆಯಾಗಿತ್ತು.
ಶನಿವಾರದ ಬಳಿಕ ಮತ್ತೆ ಚಳಿಯ ವಾತಾವರಣ ಕಂಡು ಬಂದಿದೆ. ಮಂಗಳೂರಿನಲ್ಲಿ ರವಿವಾರ ಬೆಳಗ್ಗೆ 8.30ಕ್ಕೆ ಅಂತ್ಯಗೊಂಡ 24 ತಾಸುಗಳ ಅವಧಿಯಲ್ಲಿ ಕನಿಷ್ಠ ತಾಪಮಾನ 19.3 ಡಿ.ಸೆ. ದಾಖಲಾಗಿತ್ತು. ಗ್ರಾಮಾಂತರ ಪ್ರದೇಶಗಳಲ್ಲಿ ಬೆಳಗ್ಗೆ 9 ಗಂಟೆಯವರೆಗೂ ಚಳಿಯ ವಾತಾವರಣವಿತ್ತು. ದಿನದ ಗರಿಷ್ಠ ತಾಪಮಾನ 34.3 ಡಿ.ಸೆ. ದಾಖಲಾಗಿತ್ತು.