ಉಡುಪಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಶಂಕಿತರಲ್ಲಿ ಯಾವುದೇ ಕರೋನಾ ವೈರಸ್ ಪತ್ತೆಯಾಗಿಲ್ಲ

ಉಡುಪಿ : ಸದ್ಯಕ್ಕೆ ಕರಾವಳಿಯ ಜನ ನಿರಾಳರಾಗಿದ್ದಾರೆ. ಕಾರಣ ಉಡುಪಿಯಲ್ಲಿ ಶಂಕಿತ ಕೊರೋನಾ ವೈರಸ್‌ ಪರೀಕ್ಷೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದ ಮೂವರ ವೈದ್ಯಕೀಯ ವರದಿ ಜಿಲ್ಲಾ ವೈದ್ಯಾಧಿಕಾರಿಗಳ ಕೈ ಸೇರಿದ್ದು ಇದರಲ್ಲಿ ಯಾವುದೇ ಕೊರೋನಾ ವೈರಸ್‌ ಪತ್ತೆಯಾಗಿಲ್ಲ ಎಂದು ನಮೂದಿಸಲಾಗಿದೆ.

ಬೆಂಗಳೂರು ಮೆಡಿಕಲ್ ಕಾಲೇಜು ಮತ್ತು ಸಂಶೋಧನಾ ಕೇಂದ್ರದ ವೈರಲ್ ಪತ್ತೆ ಪ್ರಯೋಗಾಲಯ ಈ ವರದಿಯನ್ನು ನೀಡಿದೆ.ಈ ಮೂವರಲ್ಲಿ ಯಾವುದೇ ಸೋಂಕು ಇಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಮೂರು ವಾರಗಳ ಹಿಂದೆ ಚೀನಾ ಪ್ರವಾಸಕ್ಕೆ ಹೋಗಿ ಮರಳಿ ಬಂದಿದ್ದ ನಾಲ್ವರು ಅಸ್ವಸ್ತರಾಗಿದ್ದು, ಶಂಕಿತ ಕೊರೊನಾ ವೈರಸ್ ಪರೀಕ್ಷೆಗಾಗಿ ಫೆ.7ರಂದು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ರೋಗದ ಲಕ್ಷಣ ಗಳು ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಕುಟುಂಬದ ಸದಸ್ಯೆಯಾಗಿದ್ದ ಮಹಿಳೆಯನ್ನು 2 ದಿನಗಳ ಹಿಂದೆ ಮನೆಗೆ ಕಳುಹಿಸಲಾಗಿತ್ತು. ಉಳಿದ ಮೂವರ ರಕ್ತ ಹಾಗೂ ಗಂಟಲ ಸ್ರಾವವನ್ನು ಫೆ.7ರಂದು ಕೊರೊನಾ ವೈರಸ್ ಪರೀಕ್ಷೆಗಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು.

ಬೆಂಗಳೂರಿನ ಪ್ರಯೋಗಾಲಯದಿಂದ ಈ ಮೂವರ ವೈದ್ಯಕೀಯ ವರದಿ ಇಂದು ಬಂದಿದ್ದು, ಇದರಲ್ಲಿ ನೆಗೆಟಿವ್ ಎಂಬುದು ತಿಳಿಸಲಾಗಿದೆ. ಆದುದರಿಂದ ಜಿಲ್ಲೆಯಲ್ಲಿ ಯಾವುದೇ ಕೊರೊನಾ ವೈರಸ್ ಪ್ರಕರಣಗಳು ಇಲ್ಲ. ಈ ಬಗ್ಗೆ ಸಾರ್ವಜನಿಕರು ಯಾವುದೇ ಆತಂಕ ಪಡಬೇಕಾದ ಅಗತ್ಯ ಇಲ್ಲ’ ಎಂದು ಉಡುಪಿ ಜಿಲ್ಲಾಡಳಿತ ಹೇಳಿದೆ. ಈ ಮೂವರು ನಾಳೆ ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ

Facebook Comments

comments