BANTWAL
ತೆಂಗಿನಕಾಯಿ ಗೋಡೌನ್ ಗೆ ಬೆಂಕಿ ಲಕ್ಷಾಂತರ ರೂಪಾಯಿ ನಷ್ಟ
ತೆಂಗಿನಕಾಯಿ ಗೋಡೌನ್ ಗೆ ಬೆಂಕಿ ಲಕ್ಷಾಂತರ ರೂಪಾಯಿ ನಷ್ಟ
ಬಂಟ್ವಾಳ ಡಿಸೆಂಬರ್ 14: ಕಲ್ಲಡ್ಕ ದ ತೆಂಗಿನಕಾಯಿ ಗೋಡೌನ್ ವೊಂದಕ್ಕೆ ಆಕಸ್ಮಿಕ ಬೆಂಕಿ ತಗಲಿ ಲಕ್ಷಾಂತರ ರೂಪಾಯಿ ಹಾನಿ ಸಂಭವಿಸಿದ ಘಟನೆ ಗುರುವಾರ ಬೆಳಿಗ್ಗೆ ನಡೆದಿದೆ.
ಕಲ್ಲಡ್ಕದ ವರ್ತಕ ದಿನೇಶ್ ಶೆಣೈ ಎಂಬವರಿಗೆ ಸೇರಿದ ಈ ದಾಸ್ತಾನು ಕೊಠಡಿಯಲ್ಲಿ ಸಾವಿರಾರು ತೆಂಗಿನಕಾಯಿಗಳನ್ನು ಹಾಗೂ ತೆಂಗಿನ ಚಿಪ್ಪುಗಳನ್ನು ದಾಸ್ತಾನು ಮಾಡಲಾಗಿತ್ತು.
ಗುರುವಾರ ಬೆಳಗ್ಗಿನ ಜಾವ ದಾಸ್ತಾನು ಕೊಠಡಿಯಿಂದ ಹೊಗೆಯಾಡುತ್ತಿದ್ದುದನ್ನು ಕಂಡು ಪರಿಶೀಲನೆ ನಡೆಸಿದಾಗ ಬೆಂಕಿ ತಗಲಿರುವುದು ಗೊತ್ತಾಗಿದೆ. ತಕ್ಷಣವೇ ಬಂಟ್ವಾಳ ಅಗ್ನಿಶಾಮಕ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ.
ಆದರೆ ಆ ವೇಳೆಗಾಗಲೇ ಲಕ್ಷಾಂತರ ಮೌಲ್ಯದ ತೆಂಗಿನಕಾಯಿ ಸುಟ್ಟು ಕರಕಲಾಗಿದೆ. ಕೊಠಡಿಯ ಮೇಲ್ಞಾವಣಿ ಹಾಗೂ ಕಿಟಕಿಗಳಿಗೂ ಬೆಂಕಿ ತಗಲಿದೆ.
You must be logged in to post a comment Login