ಕುಮಾರಧಾರ ನದಿಯಲ್ಲಿ ಮುಳುಗಿ ಸಾವು – ಕೊಲೆ ಶಂಕೆ ವ್ಯಕ್ತಪಡಿಸಿದ ಹೆತ್ತವರು
ಸುಳ್ಯ ಡಿಸೆಂಬರ್ 14: ಸ್ನೇಹಿತರೊಂದಿಗೆ ಮೋಜು ಮಸ್ತಿಗೆ ಹೋದ ಯುವಕ ನದಿಯಲ್ಲಿ ಮುಳುಗಿ ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಸುಬ್ರಹ್ಮಣ್ಯ ರಕ್ಷಿತಾರಣ್ಯದ ಮಂಗುಳಿಪಾದೆಯಲ್ಲಿ ನಡೆದಿದೆ.

ಕೊಂಬಾರು ಗ್ರಾಮದ ಕಾಯರ್ತಡ್ಕ ನಿವಾಸಿ ಜಯಪ್ರಕಾಶ್ ತನ್ನ 5 ಮಂದಿ ಸ್ನೇಹಿತರೊಂದಿಗೆ ಕುಮಾರಾಧಾರ ನದಿಗೆ ಮೋಜು ಮಸ್ತಿಗೆ ಹೋಗಿದ್ದು, ನೀರಿಗಿಳಿದ ನಂತರ ಅನುಮಾನಸ್ಪದವಾಗಿ ಸಾವನ್ನಪ್ಪಿದ್ದಾರೆ.

ನದಿ ದಡದಲ್ಲಿ ಕೋಳಿ ಪದಾರ್ಥ ಮಾಡಿ, ಮದ್ಯ ಸೇವಿಸಿ ಮಜಾ ಮಾಡಿದ್ದು, ನಂತರ ಕುಡಿದ ನಶೆಯಲ್ಲಿ ನದಿಗೆ ಇಳಿದಿದ್ದಾರೆ.ಈ ಸಂಧರ್ಭದಲ್ಲಿ ಈಜಲಾಗದೆ ನದಿಯಲ್ಲಿ ಮುಳುಗಿ ಜಯಪ್ರಕಾಶ್ ಸಾವನ್ನಪ್ಪಿದ್ದಾರೆ.

ಜಯಪ್ರಕಾಶ್ ಹೆತ್ತವರು ,ಗೆಳೆಯರ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದು ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಿದ್ದಾರೆ. ಸುಬ್ರಹ್ಮಣ್ಯ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ..