Connect with us

    FILM

    ನಯನಾತಾರಾ-ವಿಘ್ನೇಶ್‌ ದಂಪತಿಗೆ ಕ್ಲೀನ್‌ ಚಿಟ್‌

    ಚೆನ್ನೈ, ಅಕ್ಟೋಬರ್ 28: ನಟಿ ನಯನಾತಾರಾ ಮತ್ತು ನಿರ್ದೇಶಕ ವಿಘ್ನೇಶ್‌ ಶಿವನ್‌ ದಂಪತಿ ಮಕ್ಕಳನ್ನು ಪಡೆಯುವ ನಿಟ್ಟಿನಲ್ಲಿ ಬಾಡಿಗೆ ತಾಯ್ತನಕ್ಕೆ ಸಂಬಂಧಿಸಿದ ಯಾವುದೇ ಕಾನೂನನ್ನು ಉಲ್ಲಂಘಿಸಿಲ್ಲ ಎಂದು ತಮಿಳುನಾಡು ಸರ್ಕಾರ ತಿಳಿಸಿದೆ.

    ಬಾಡಿಗೆ ತಾಯ್ತನದ ವಿಚಾರಕ್ಕೆ ಸಂಬಂಧಿಸಿದಂತೆ ನಯನತಾರಾ ದಂಪತಿ ವಿರುದ್ಧ ನಿಯಮ ಉಲ್ಲಂಘನೆಯ ಆರೋಪ ಕೇಳಿಬಂದಿತ್ತು. ಕಾನೂನಿನ ಪ್ರಕಾರವೇ ಈ ದಂಪತಿ ಬಾಡಿಗೆ ತಾಯ್ತನದ ಮೂಲಕ ಮಕ್ಕಳು ಪಡೆದಿದ್ದಾರೆ. ಅವರು ಚಿಕಿತ್ಸೆ ಪಡೆದಿದ್ದ ಆಸ್ಪತ್ರೆಯೇ ಈ ನಿಟ್ಟಿನಲ್ಲಿ ದೋಷಿ ಎಂದು ತಮಿಳುನಾಡು ಸರ್ಕಾರದ ಮೂವರು ಸದಸ್ಯರ ಸಮಿತಿ ಪ್ರತಿಪಾದಿಸಿದೆ.

    ಅ.9 ರಂದು ತಾವು ಬಾಡಿಗೆ ತಾಯ್ತನದ ಮೂಲಕ ಅವಳಿ ಗಂಡು ಮಕ್ಕಳಾದ ಉಯಿರ್‌ ಮತ್ತು ಉಲಘಂ ಗೆ ತಂದೆ-ತಾಯಿ ಆಗಿರುವುದಾಗಿ ನಯನತಾರಾ-ವಿಘ್ನೇಶ್‌ ದಂಪತಿ ಘೋಷಿಸಿದ್ದರು. ನಂತರ ತಾವು ಆರು ವರ್ಷಗಳ ಮೊದಲೇ ಕಾನೂನಿನ ಪ್ರಕಾರ ಮದುವೆಯಾಗಿದ್ದಾಗಿ ದಂಪತಿ ತಿಳಿಸಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *