Connect with us

FILM

ರಾಜ್ಯಸಭಾ ಸದಸ್ಯ ನಟ ಜಗ್ಗೇಶ್ ಗೆ ಸಂಕಷ್ಟ ತಂದ ಹುಲಿ ಉಗುರು

ಬೆಂಗಳೂರು ಅಕ್ಟೋಬರ್ 25: ಬಿಗ್ ಬಾಸ್ ಮನೆಯಲ್ಲಿ ಹುಲಿ ಉಗುರು ಇರುವ ಲಾಕೆಟ್ ಧರಿಸಿ ಅರೆಸ್ಟ್ ಆದ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಪ್ರಕರಣದ ಬೆನ್ನಲ್ಲೇ ಇದೀಗ ಹಲವು ಜನಪ್ರಿಯ ವ್ಯಕ್ತಿಗಳ ಪೋಟೋಗಳು ವೈರಲ್ ಆಗಲು ಪ್ರಾರಂಭವಾಗಿದೆ.


ಈಗಾಗಲೇ ವರ್ತೂರ್ ಸಂತೋಷ್ ಅವರನ್ನು ಅರೆಸ್ಟ್ ಮಾಡಲಾಗಿದೆ. ಈ ನಡುವೆ ನಟ ದರ್ಶನ್ ಹುಲಿ ಉಗುರು ಧರಿಸಿದ್ದಾರೆ. ವಿನಯ್ ಗುರೂಜಿ ಹುಲಿ ಚರ್ಮದ ಮೇಲೆ ಕುಳಿತಿದ್ದಾರೆ ಎನ್ನಲಾಗಿದೆ. ಇವರುಗಳ ವಿರುದ್ಧ ಪ್ರಕರಣ ದಾಖಲಾಗಿದೆ. ಇದೀಗ ನಟ ಜಗ್ಗೇಶ್ ಅವರ ಮೇಲೂ ಪ್ರಕರಣ ದಾಖಲಿಸಲು ಒತ್ತಾಯ ಕೇಳಿ ಬಂದಿದೆ. ಬಿಗ್ ಬಾಸ್ ಸ್ಪರ್ಧಿ ವರ್ತೂರು ಸಂತೋಷ್ ಅವರು ಹುಲಿ ಉಗುರು ಹೊಂದಿರುವ ಆರೋಪದ ಮೇಲೆ ಬಂಧನಕ್ಕೆ ಒಳಗಾಗಿದ್ದು ಎಲ್ಲೆಲ್ಲೂ ಹುಲಿ ಉಗುರಿನ ಬಗ್ಗೆ ಚರ್ಚೆಗಳು ನಡೆಯುತ್ತಿವೆ. ಅನೇಕ ಹೀರೋಗಳು ಕತ್ತಲ್ಲಿ ಹುಲಿ ಉಗುರು ಧರಿಸಿರುವ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಫೋಟೋ ಹಂಚಿಕೊಳ್ಳಲಾಗುತ್ತಿದೆ. ಈಗ ಜಗ್ಗೇಶ್ ಕತ್ತಲ್ಲೂ ಹುಲಿ ಉಗುರು ಇದೆಯಂತೆ. ಸ್ವತಃ ಅವರೇ ಈ ವಿಚಾರವನ್ನು ಒಪ್ಪಿಕೊಂಡಿದ್ದರು.


ಖಾಸಗಿ ಸುದ್ದಿ ಸಂಸ್ಥೆ ಒಂದಕ್ಕೆ ಜಗ್ಗೆಶ್ ಅವರು ಸಂದರ್ಶನ ನಿಡಿದ್ದರು. ಈ ವೇಳೆ ಅವರು ಈ ಮಾಹಿತಿ ಹಂಚಿಕೊಂಡಿದ್ದರು. ‘ನನಗೆ 20 ವರ್ಷ ತುಂಬಿದಾಗ ಅಮ್ಮ ಈ ಲಾಕೆಟ್ ನೀಡಿದ್ದರು. ಮಗ ಹುಲಿ ಇದ್ದಾಂಗೆ ಇರಬೇಕು ಎಂದು ಅಮ್ಮ ಈ ಲಾಕೆಟ್​ನ ಹಾಕಿದ್ದರು’ ಎಂದು ಸಂದರ್ಶನದಲ್ಲಿ ಜಗ್ಗೇಶ್ ಹೇಳಿದ್ದರು. ಸದ್ಯ ಈ ವಿಡಿಯೋ ವೈರಲ್ ಆಗಿದೆ. ಅನೇಕರು ಈ ಬಗ್ಗೆ ಪ್ರಶ್ನೆ ಮಾಡುತ್ತಿದ್ದಾರೆ. ಜಗ್ಗೇಶ್ ವಿರುದ್ಧ ಮಾಜಿ ಎಂಎಲ್​ಸಿ ಪಿಆರ್ ರಮೇಶ್ ಅವರು ದೂರು ನೀಡಿದ್ದಾರೆ. ಜಗ್ಗೇಶ್ ಹೇಳಿಕೆಯ ವೀಡಿಯೋವನ್ನು ಅರಣ್ಯ ಇಲಾಖೆ ಪ್ರಧಾನ ಕಾರ್ಯದರ್ಶಿಗಳಿಗೆ ರವಾನೆ ಮಾಡಲಾಗಿದೆ. ನಟ ಜಗ್ಗೇಶ್ ಅವರನ್ನು ಇಲಾಖೆ ಅಧಿಕಾರಿಗಳು ಪ್ರಶ್ನೆ ಮಾಡುವ ಸಾಧ್ಯತೆ ಇದೆ.

 

https://twitter.com/ChekrishnaCk/status/1716826901287928050

Share Information
Continue Reading
Advertisement
Click to comment

Leave a Reply

Your email address will not be published. Required fields are marked *