Connect with us

LATEST NEWS

ಕರಾವಳಿಗೆ ಬಂದು ಕೊರಗಜ್ಜನ ದರ್ಶನ ಮಾಡದೇ ಇದ್ದಲ್ಲಿ ವಾಪಸ್ಸು ತೆರಳುವಾಗ ಹೊರೆ ಹೊತ್ತಂಥ ಅನುಭವ – ವಸಿಷ್ಠ ಸಿಂಹ ಹರಿಪ್ರಿಯಾ

ಉಳ್ಳಾಲ ಅಕ್ಟೋಬರ್ 25: ಸ್ಯಾಂಡಲ್ ವುಡ್ ನ ನವದಂಪತಿ ವಸಿಷ್ಠ ಸಿಂಹ – ಹರಿಪ್ರಿಯಾ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ಆಶೀರ್ವಾದ ಪಡೆದರು. ಮದುವೆಯ ಮೊದಲ ದಸರಾ ಹಬ್ಬವನ್ನು ಈ ಬಾರಿ ಮಂಗಳೂರಿನಲ್ಲಿ ಆಚರಿಸಿದ್ದಾರೆ.


ವಸಿಷ್ಠ ಸಿಂಹ- ಹರಿಪ್ರಿಯಾ ಕಲ್ಲಾಪು ಬುರ್ದುಗೋಳಿಯ ಕೊರಗಜ್ಜನ ಕ್ಷೇತ್ರಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ ಮಾತನಾಡಿದ ನಟ ವಶಿಷ್ಠ ಸಿಂಹ ಬಯಸಿದ್ದು ಎಲ್ಲರಿಗೂ ಸಿಗುವುದು ಕಡಿಮೆ. ಆದರೆ ಹಲವು ವರ್ಷಗಳ ಪ್ರೀತಿ ಹರಿಪ್ರಿಯಾಳನ್ನು ಭಗವಂತ ನನಗೆ‌ ಕೊಟ್ಟಿದ್ದಾನೆ. ಅದಕ್ಕೆ ಚಿರ ಋಣಿ ಎಂದರು. ದಕ್ಷಿಣ ಕನ್ನಡ ಜಿಲ್ಲೆಗೆ ಬಂದಾಗ ಕೊರಗಜ್ಜನ ದರ್ಶನ ಮಾಡದೇ ಇದ್ದಲ್ಲಿ ವಾಪಸ್ಸು ತೆರಳುವಾಗ ಹೊರೆ ಹೊತ್ತಂಥ ಅನುಭವ ಆಗುತ್ತದೆ. ನನ್ನ ಲವ್ಲೀ ಚಿತ್ರ ಬಿಡುಗಡೆಯಾಗಲಿದ್ದು, ಬಹುತೇಕ ಶೂಟಿಂಗ್ ಈ ಜಿಲ್ಲೆಯಲ್ಲೇ ನಡೆದಿದೆ. ಶೂಟಿಂಗ್ ನಡೆದ ಸಂದರ್ಭದಲ್ಲೇ ಈ ದೈವಸ್ಥಾನಕ್ಕೆ ಭೇಟಿ ನೀಡಲು ಬಯಸಿದ್ದೆ. ಸಾಧ್ಯವಾಗಿರಲಿಲ್ಲ. ಈಗ ಸಾಧ್ಯವಾಯಿತು ಎಂದರು.


ನಟಿ ಹರಿಪ್ರಿಯಾ ಮಾತನಾಡಿ, ಈ ಸಲದ ದಸರಾ ವಿಶೇಷವಾಗಿತ್ತು. ವಶಿಷ್ಠ ಅವರ ಹುಟ್ಟುಹಬ್ಬವನ್ನು ಇಲ್ಲೇ ಆಚರಿಸಿದ್ದೇವೆ. ನಾನೇ ಅವರಿಗೆ ಹುಟ್ಟುಹಬ್ಬದ ಉಡುಗೊರೆಯಾಗಿರುವೆ. ವಾರದುದ್ದಕ್ಕೂ ಕರಾವಳಿಯ ಎಲ್ಲಾ ದೇವಸ್ಥಾನಗಳ ಸಂದರ್ಶನ ನಡೆಸಿ ಕೃತಾರ್ಥರಾದೆವು’ ಎಂದರು.

Share Information
Advertisement
Click to comment

You must be logged in to post a comment Login

Leave a Reply