Connect with us

FILM

ಲವ್ ಜಿಹಾದ್ ವಿರುದ್ದ ಅಭಿಯಾನಕ್ಕಾಗಿ ದಿ ಕೇರಳ ಸ್ಟೋರಿ ಸಿನೆಮಾವನ್ನು ಮಕ್ಕಳಿಗೆ ತೋರಿಸಿದ ಕೇರಳದ ಕ್ರಿಶ್ಚಿಯನ್ ಡಯಾಸಿಸ್

ಕೇರಳ ಎಪ್ರಿಲ್ 08: ಕೇರಳದಲ್ಲಿ ದಿ ಕೇರಳ ಸ್ಟೋರಿ ಸಿನೆಮಾ ದೂರದರ್ಶನದಲ್ಲಿ ಪ್ರದರ್ಶನಕ್ಕೆ ಕುರಿತಂತೆ ವಿವಾದವಾಗಿರುವ ಸಮಯದಲ್ಲಿ ಕೇರಳದ ಕ್ರೈಸ್ತ ಡಯಾಸಿಸ್ ಒಂದು ಲವ್ ಜಿಹಾದ್ ವಿರುದ್ದ ತನ್ನ ಅಭಿಯಾನಕ್ಕಾಗಿ ಮಕ್ಕಳಿಗೆ ದಿ ಕೇರಳ ಸ್ಟೋರಿ ಸಿನೆಮಾದ ಪ್ರದರ್ಶನ ಏರ್ಪಡಿಸಿದೆ.


ಲವ್ ಜಿಹಾದ್ ವಿರುದ್ದ ತನ್ನ ಅಭಿಯಾನ ನಡೆಸುತ್ತಿರುವ ಕೇರಳದ ಸಿರೋ ಮಲಬಾರ್ ಚರ್ಚ್‌ನ ಇಡುಕ್ಕಿ ಡಯಾಸಿಸ್ ಕಳೆದ ವಾರ 10 ರಿಂದ 12 ನೇ ತರಗತಿಯ ವಿದ್ಯಾರ್ಥಿಗಳಿಗೆ ಜಾಗೃತಿ ಅಭಿಯಾನದ ಭಾಗವಾಗಿ ಚಲನಚಿತ್ರವನ್ನು ಪ್ರದರ್ಶಿಸಿತ್ತು.
ಹದಿಹರೆಯದವರು ಪ್ರೀತಿಯಿಂದ ಆಮಿಷಕ್ಕೆ ಒಳಗಾಗುವ ಮತ್ತು ದುರುಪಯೋಗಪಡಿಸಿಕೊಳ್ಳುವುದರ ವಿರುದ್ಧ ಮಕ್ಕಳಿಗೆ ಜಾಗೃತಿ ಮೂಡಿಸಲು ಈ ಚಲನಚಿತ್ರವನ್ನು ಪ್ರದರ್ಶಿಸಲಾಗಿದೆ ಎಂದು ಧರ್ಮಪ್ರಾಂತ್ಯದ ಮಾಧ್ಯಮ ಆಯೋಗದ ಮುಖ್ಯಸ್ಥ ಫಾದರ್ ಜಿನ್ಸ್ ಕರಕ್ಕಟ್ ಮಾಧ್ಯಮಗಳಿಗೆ ತಿಳಿಸಿದರು.

ಪ್ರೀತಿಯ ಆಮಿಷಕ್ಕೆ ಒಳಗಾಗಿ ಸಮುದಾಯದ ಯುವಕರು ಬಲೆಗೆ ಬೀಳುವ ನಿದರ್ಶನಗಳೂ ಇವೆ ಎಂದರು. ಆದ್ದರಿಂದ ಹದಿಹರೆಯದವರಿಗೆ ಜಾಗೃತಿ ಅಭಿಯಾನಕ್ಕಾಗಿ ಈ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಲವ್ ಜಿಹಾದ್ ಕುರಿತಂತೆ ಚರ್ಚೆಗಳನ್ನು ಪ್ರಾರಂಭಿಸಲಾಗಿದೆ ಎಂದರು. ಇನ್ನು ದಿ ಕೇರಳ ಸ್ಟೋರಿ ಸಿನೆಮಾ ಪ್ರದರ್ಶನವನ್ನು ಬಿಜೆಪಿ ಸ್ವಾಗತಿಸಿದ್ದು, ಅಮಾಯಕ ಯುವತಿಯರು ಲವ್ ಜಿಹಾದ್ ಬಲೆಗೆ ಬಿದ್ದು ಕೊನೆಗೆ ಐಸಿಸ್ ನಂತ ಉಗ್ರ ಸಂಘಟನೆಗಳಿಗೆ ಸೇರುತ್ತಿದ್ದಾರೆ ಎಂದು ಹೇಳಿದೆ. ಎಡಪಕ್ಷ ಹಾಗೂ ಕಾಂಗ್ರೇಸ್ ಇದನ್ನು ವಿರೋಧಿಸಿದೆ.

Share Information
Continue Reading
Advertisement
Click to comment

Leave a Reply

Your email address will not be published. Required fields are marked *