Connect with us

    KARNATAKA

    ರಸ್ತೆ ಬದಿ ಕಬಾಬ್ ಮಾರುವನನ್ನು ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯನನ್ನಾಗಿ ಮಾಡಿದ್ದ ಚೈತ್ರಾ ಕುಂದಾಪುರ….!!

    ಉಡುಪಿ ಸೆಪ್ಟೆಂಬರ್ 13: ಹಿಂದೂ ಫೈರ್ ಬ್ರ್ಯಾಂಡ್ ಖ್ಯಾತಿ ಚೈತ್ರಾ ಕುಂದಾಪುರ ಎಂಎಲ್ ಎ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿ ಉದ್ಯಮಿಯೊಬ್ಬರಿಂದ ಕೊಟ್ಯಾಂತರ ಹಣವನ್ನು ವಸೂಲಿ ಮಾಡಿದ್ದಾಳೆ.

    ಸದಾ ಹಿಂದೂ ಧರ್ಮ ಸಂಸ್ಕಾರದ ಬಗ್ಗೆ ಗಂಟೆಗಟ್ಟರೆ ಬಾಷಣ ಬಿಗಿಯುತ್ತಿದ್ದ ಚೈತ್ರಾ ಕುಂದಾಪುರ ಪಕ್ಕಾ ಪ್ಲ್ಯಾನ್ ಮಾಡಿ ಉದ್ಯಮಿಯನ್ನು ಖೆಡ್ಡಾಗೆ ಬೀಳಿಸಿದ್ದಾರೆ.

    ಪೊಲೀಸ್ ಎಫ್ಐಆರ್ ನಲ್ಲಿ ಚೈತ್ರಾ ಕುಂದಾಪುರ ಮಾಡಿರುವ ವಂಚನೆ ಪ್ಲ್ಯಾನ್ ನ ಪಕ್ಕಾ ಮಾಹಿತಿ ಇದ್ದು, ಎಲ್ಲಿಯವರೆಗೆ ಅಂದರೆ ರಸ್ತೆ ಬದಿ ಕಬಾಬ್ ಮಾರುವನನ್ನು ತಂದು ಆಕೆ ಕೇಂದ್ರ ಬಿಜೆಪಿಯ ಚುನಾವಣಾ ಸಮಿತಿಯ ಸದ್ಯ ಎಂದು ನಂಬಿಸಿದ್ದಾಳೆ.

    ಚಿಕ್ಕಮಗಳೂರು ಜಿಲ್ಲೆಯ ಬೈಂದೂರ ತಾಲೂಕಿನ ಬಿಜೂರು ಗ್ರಾಮದವರಾದ ಗೋವಿಂದಬಾಬು ಪೂಜಾರಿ ಅವರು 9 ವರ್ಷಗಳ ಕಾಲ ರಾಷ್ಟ್ರೀಯ ಸೇವಾ ಸಂಘ (RSS) ಕಾರ್ಯಕರ್ತರಾಗಿದ್ದರು.

    ನಂತರ ಕಳೆದ 6 ವರ್ಷಗಳಿಂದ ಬಿಜೆಪಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸುತ್ತಿರುವಾಗ ಬೈಂದೂರ ವಿಧಾನಸಭಾ ಕ್ಷೇತ್ರದ ಟಿಕೆಟ್​ ಆಕಾಂಕ್ಷಿಯಾಗಿದ್ದರು.

    ಹೀಗಿರುವಾಗಲೇ ಇವರಿಗೆ ಚೈತ್ರಾ ಕುಂದಾಪುರ ಮತ್ತು ಚಿಕ್ಕಮಗಳೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಯುವ ಮೊರ್ಚಾ ಗಗನ್ ಕಡೂರು ಅವರ ಪರಿಚಯವಾಗುತ್ತದೆ.

    ನಂತರ ಇವರು ಟಿಕೆಟ್​ ಕೊಡಿಸುವುದಾಗಿ ಹೇಳಿ ನಂಬಿಸುತ್ತಾರೆ.

    ನಂತರ ಇವರು ವಿಶ್ವನಾಥ್ ಜೀ ಎಂಬುವರನ್ನು ಪರಿಚಯಿಸುತ್ತಾರೆ. ಇವರು ಕಳೆದ 45 ವರ್ಷಗಳಿಂದ ಆರ್​ಎಸ್​ಎಸ್​ ಪ್ರಚಾರಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

    ಅಲ್ಲದೇ ಕೇಂದ್ರದ ಅಭ್ಯರ್ಥಿಯ ಸೆಲೆಕ್ಷನ್ ಕಮಿಟಿಯಲ್ಲಿ ಅವರು ಒಬ್ಬರಾಗಿರುತ್ತಾರೆ ಎಂದು ಹೇಳಿರುತ್ತಾರೆ.

    ಚೈತ್ರಾ ಕುಂದಾಪುರ ಅವಳನ್ನು ಗೋವಿಂದ ಬಾಬು ಭೇಟಿ ಮಾಡಿದಾಗ ನಾನು ಹಿಂದೂ ಸಂಘಟನೆಯಲ್ಲಿರುವುದರಿಂದ BJP_RSS ವರಿಷ್ಠರಿಗೆ ಹತ್ತಿರವಿದ್ದೇನೆ, ಪ್ರಧಾನಿ ಕಚೇರಿಯಲ್ಲೂ ಪ್ರಭಾವಿಯಾಗಿದ್ದು, ಸುಪ್ರೀಂ ಕೋರ್ಟ್ ಜಡ್ಜುಗಳಿಗೂ ಆಪ್ತಳಾಗಿದ್ದು ಅವರೆಲ್ಲರರ ಪ್ರಭಾವ ಬಳಸಿ ಟಿಕೆಟ್ ಕೊಡಿಸುತ್ತೇನೆ ಎಂದು ಹೇಳಿದ್ದಾಳೆ.


    ಇದನ್ನೆ ನಂಬಿದ ಗೋವಿಂದಬಾಬು ಅವರನ್ನು ಚೈತ್ರಾ ಕುಂದಾಪುರ ರವರು, ರಾಷ್ಟ್ರೀಯ ನಾಯಕರೊಂದಿಗೆ ನಿಕಟ ಸಂಪರ್ಕ ಇರುವ ಚಿಕ್ಕಮಗಳೂರಿನ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಗಗನ್ ಕಡೂರು ನನ್ನು2022ರ ಜುಲೈ 4 ರಂದು ಚಿಕ್ಕಮಗಳೂರಿನ ಸರ್ಕಾರಿ ಅತಿಥಿ ಗೃಹದಲ್ಲಿ ಭೇಟಿ ಮಾಡಿಸಿದ್ದಾಳೆ.

    ಈ ವೇಳೆ ಗಗನ್ ಕಡೂರು ತಾವು ಪ್ರಧಾನಿ ಮತ್ತು ಗ್ರಹ ಸಚಿವಾಲಯದ ಅಧಿಕಾರಿಗಳಿಗೆ ಅತ್ಯಂತ ನಿಕಟವರ್ತಿಯಾಗಿದ್ದು ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಗಗನ್ ಕಡೂರು ಹೇಳಿದ್ದಾನೆ.

    ಅಲ್ಲದೆ RSS ರಾಷ್ಟ್ರೀಯ ಪ್ರಮುಖರ ಶಿಫಾರಸು ಇರಬೇಕು, ಅದಕ್ಕೆ ಸುಮಾರು 45 ವರ್ಷಗಳಿಂದ ಉತ್ತರ ಭಾರತದಲ್ಲಿ RSS ಹಿರಿದ ಪ್ರಚಾರರಾಗಿರುವ ಚಿಕ್ಕಮಗಳೂರು ಮೂಲದ ವಿಶ್ವನಾಥ್ ಜೀ ಮೂಲಕ ಶಿಫಾರಸು ಮಾಡಿಸುವುದಾಗಿ ಭರವಸೆ ನೀಡಿದ್ಜಾನೆ.

    ಬಳಿಕ ವಿಶ್ವನಾಥ್ ಜೀ ಅವರನ್ನು ಗೋವಿಂದಬಾಬುಗೆ ಗಗನ್ ಕಡೂರು ಬೇಟಿ ಮಾಡಿಸಿದ್ದಾನೆ.

    ಈ ವೇಳೆ ವಿಶ್ವನಾಥ್ ಜೀ “ನಾನು ಬಿಜೆಪಿ ಕೇಂದ್ರ ಆಯ್ಕೆ ಸಮಿತಿಯ ಸದಸ್ಯನಾಗಿದ್ದು, RSS ಮತ್ತು ಬಿಜೆಪಿ ನಡುವಿನ ಸಮನ್ವಯಕಾರನಾಗಿದ್ದನ, ಟಿಕೆಟ್ ವಿಚಾರದಲ್ಲಿ, ನನ್ನ ನಿರ್ಧಾರವೇ ಅಂತಿಮವಾಗಿರುತ್ತದೆ, ಆದರೆ ಸಾಕಷ್ಟು ಹಣ ನೀಡಿದರೆ ಮಾತ್ರ ಟಿಕೆಟ್ ಸಿಗಬಹುದು” ಎಂದು ಹೇಳಿದ್ದಾನೆ.

    ಅಲ್ಲದೆ ಟಿಕೆಟ್ ಪ್ರಕ್ರಿಯೆ ಆರಂಭಿಸಬೇಕಾದರೆ ಮೂರು ದಿನಗಳಲ್ಲಿ ಐವತ್ತು ಲಕ್ಷ ಗಗನ್ ಕಡೂರ್‌ ನೀಡಬೇಕು, ಆಯ್ಕೆ ಪ್ರಕ್ರಿಯೆ ಆರಂಭವಾಗುತ್ತಿದ್ದಂತೆಯೇ ಇನ್ನುಳಿದ ಮೂರು ಕೋಟಿ ರೂಪಾಯಿ ನೀಡಬೇಕೆಂದು ತಿಳಿಸಿರುತ್ತಾರೆ.

    2023ರ ವಿಧಾನಸಭಾ ಚುನಾವಣೆಯಲ್ಲಿ.. ಬೈಂದೂರು ಕ್ಷೇತ್ರದ ಬಿಜೆಪಿ ಟಿಕೆಟ್ ಕೊಡಿಸಿ ಗೆಲ್ಲಿಸುವ ಸಂಬಂಧ ಈ ಹಣವನ್ನು ಪಡೆಯಲಾಗುತ್ತಿದ್ದು, ಒಂದು ವೇಳೆ ಟಿಕೆಟ್ ಕೊಡಿಸಲು ಸಾಧ್ಯವಾಗದಿದ್ದರೆ ಸಂಪೂರ್ಣ ಮೊತ್ತವನ್ನು ಹಿಂದಿರುಗಿಸಲಾಗುವುದು ಎಂದು ವಿಶ್ವನಾಥ್ ಜೀ ಭರವಸೆ ನೀಡಿರುತ್ತಾರೆ.

    ಈ ವೇಳೆ ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಕೂಡಾ ಈ ವಿಚಾರದಲ್ಲಿ, ಯಾವುದೇ ಅನುಮಾನ ಬೇಡ, ಹಣದ ವಿಷಯದಲ್ಲಿ ತಾವೂ ಜವಾಬ್ದಾರರಾಗಿರುತ್ತೇವೆ ಎಂದು ಹೇಳಿರುತ್ತಾರೆ,

    ಚೈತ್ರಾ ಕುಂದಾಪುರ ಮತ್ತು ಗಗನ್ ಕಡೂರು ಮಾತಿನ ಬಗ್ಗೆ, ನಂಬಿಕೆ ಮೇಲೆ ಹಾಗೂ ವಿಶ್ವನಾಥ್ ಜೀ ಯವರ ನಿರ್ದೇಶನದ ಮೇರೆಗೆ 50 ಲಕ್ಷವನ್ನು ನೀಡಿದ್ದಾರೆ.

    ತರುವಾಯ ಪಿರ್ಯಾದುದಾರರಿಗೆ ವಿಶ್ವನಾಥ್ ಜಿ ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ರವರು ಕಾನ್ಫರೆನ್ಸ್ ಕರೆ ಮಾಡಿ, ನಿಮ್ಮ ಹೆಸರು ಆಯ್ಕೆ ಪಟ್ಟಿಯಲಿದೆ.

    2023ರ ಚುನಾವಣೆಯಲ್ಲಿ ಬೈಂದೂರಿನಿಂದಲೇ ಸ್ಪರ್ಧಿಸಲು ಟಿಕೆಟ್ ನೀಡಲು ಕೇಂದ್ರ ಬಿಜೆಪಿ ನಾಯಕರು ಒಪ್ಪಿದ್ದಾರೆಂದು ಮಾಹಿತಿ ನೀಡಿರುತ್ತಾರೆ.

    ಇದಾದ ಸ್ವಲ್ಪ ದಿನಗಳಲ್ಲಿ, 2022ರ ಸೆಪ್ಟೆಂಬರ್ ಮೊದಲ ವಾರದಲ್ಲಿ, ಗೋವಿಂದಬಾಬು ಮೊಬೈಲ್, ವಿಶ್ವನಾಥ್‌ ಜಿ ಮತ್ತು ಚೈತ ಕುಂದಾಪುರ ಅವರು ಕಾನ್ಫರೆನ್ಸ್ ಕರೆ ಮಾಡಿ, ಕರ್ನಾಟಕದ ಟಿಕೆಟ್ ಹಂಚಿಕೆ ಬಗ್ಗೆ ಹೊಸಪೇಟೆಯ ಸಂಸ್ಥಾನ ಮಠ ಹಿರೇಹಡಗಲಿಯ ಅಭಿನವ ಹಾಲಶ್ರೀ ಸ್ವಾಮೀಜಿಯವರ ಶಿಫಾರಸು ಕೂಡಾ ಮುಖ್ಯವಾಗಿರುತ್ತದೆ.

    ಹಾಗಾಗಿ ಅವರನ್ನು ಭೇಟಿಯಾಗಲು ಸೂಚಿಸಿದ್ದಾರೆ.

    ಈ ಹಿನ್ನಲೆ ಗೋವಿಂದಬಾಬು ಅವರು ಸ್ವಾಮಿ ಅವರನ್ನೂ ಭೇಟಿ ಮಾಡಿದ್ದಾರೆ.

    ಈ ವೇಳೆ ವಿಶ್ವನಾಥ್ ಜೀ ರವ ಆಯ್ಕೆ ಸಮಿತಿಯಲಿ.. ಹಿರಿಯ ಸದಸ್ಯರಾಗಿದ್ದಾರೆ. ಅವರೇ ನನಗೆ ಕರ್ನಾಟಕದ ಜವಾಬ್ದಾರಿ ಕೊಡಿಸಿರುವುದು, ಪ್ರಧಾನಿ ಮೋದಿಯವರ ಜೊತೆಗೂ ನನಗೆ ನಿಕಟ ಸಂಪರ್ಕ ಇದ್ದು ಟಿಕೆಟ್ ಕೊಡಿಸುತ್ತೇನೆ’ ಎಂದು ಹೇಳಿ ಮುಂದಿನ ಪ್ರಕ್ರಿಯೆಗೆ 1 ಕೋಟಿ 50 ಲಕ್ಷ ಹಣ ಕೇಳಿದ್ದಾರೆ.

    ಜನವರಿಯಲ್ಲಿ ಗೋವಿಂದಬಾಬು ಈ ಹಣವನ್ನು ಸ್ವಾಮಿಜಿಗೆ ನೀಡಿದ್ದಾರೆ. ಒಂದು ವೇಳೆ ಟಿಕೆಟ್‌ ಸಿಗದಿದ್ದರೆ ಹಣ ವಾಪಸ್ ಕೊಡುವುದಾಗಿ ಸ್ವಾಮೀಜಿ ಭರವಸೆ ನೀಡಿದ್ದಾರೆ.

    ನಂತರ ವಿಶ್ವನಾಥ್ ಜೀ, ಗಗನ್ ಕಡೂರು ಮತ ಚೈತ್ರಾ ಕುಂದಾಪುರ ರವರು ನನ್ನೊಂದಿಗೆ ಕಾನ್ಪರೆನ್ಸ್ ಕರೆಯಲಿ ಮಾತನಾಡಿ, ಕುಮಾರ ಕೃಪಾ ಸರ್ಕಾರಿ ಅತಿಥಿ ಗ್ರಹದಲ್ಲಿ ತಂಗಿದ್ದ ಶ್ರೀಕಾಂತ್​ ನಾಯ್ಕ್​ ಎಂಬವರನ್ನು ಭೇಟಿ ಮಾಡಲು ಹೇಳಿದ್ದರು.

    ಈ ವೇಳೆ ಗಗನ್ ಕಡೂರು, ಶ್ರೀಕಾಂತ ನಾಯ್ಕ್​ ಅವರನ್ನು ದೆಹಲಿ ಚುನಾವಣಾ ಸಮಿತಿಯ ಸದಸ್ಯ ಎಂದು ಪರಿಚಯಿಸಿದ್ದಾನೆ.

    ಈ ವೇಳೆ ಶ್ರೀಕಾಂತ ನಾಯ್ಕ್​, ಕೇಂದ್ರಿಯ ಚುನಾವಣಾ ಸಮಿತಿ ನಿಮ್ಮ ಹೆಸರು ಅಂತಿಮಗೊಳಿಸಿದೆ ಎಂದು ಗೋವಿಂದಬಾಬು ಪೂಜಾರಿಗೆ ಹೇಳಿದ್ದಾರೆ.

    ನಂತರ ಬಾಕಿ ಮೊತ್ತ 3 ಮೂರು ಕೋಟಿ ರೂ. ಗಗನ್ ಕಡೂರ್ ರವರು ಸೂಚಿಸಿದ ಸ್ಥಳಕ್ಕೆ ತಲುಪಿಸಬೇಕೆಂದು ಸೂಚಿಸಿದರು.

    ನಂತರ ಶ್ರೀಕಾಂತ್​ ನಾಯ್ಕ್​​ ಮತ್ತು ವಿಶ್ವನಾಥ್ ಜಿ ಸೂಚನೆಯಂತೆ 3 ಕೋಟಿ ರೂ. ಮೊತ್ತವನ್ನು ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ತಂಡಕ್ಕೆ 2022ರ ಡಿಸೆಂಬರ್​ 29 ರಂದು ಮಂಗಳೂರಿನಲ್ಲಿ ನೀಡಿದ್ದಾರೆ.

    ನಂತರ ಗಗನ್ ಕಡೂರ್, ಗೋವಿಂದಬಾಬು ಪೂಜಾರಿಗೆ ಕರೆ ಮಾಡಿ ವಿಶ್ವನಾಥ್ ಜಿ ಅವರು ಇದೇ ವರ್ಷ ಮಾರ್ಚ್​ 3 ರಂದು ಬೆಳಿಗ್ಗೆ 11.30ರ ಸುಮಾರಿಗೆ ವಿಶ್ವನಾಥ್ ಜಿ. ಉಸಿರಾಟದ ಸಮಸ್ಯೆಯಿಂದ ಮೃತಪಟ್ಟಿದ್ದಾರೆ ಎಂದು ತಿಳಿಸಿದ್ದಾನೆ.

    ಇದರಿಂದ ಅನುಮಾನಗೊಂಡ ಗೋವಿಂದಬಾಬು ಪೂಜಾರಿ ವಿಶ್ವನಾಥ್ ಜೀ ಸಾವಿನ ಸುದ್ದಿ ಬಗ್ಗೆ ತಿಳಿಯಲು ಕಾಶ್ಮೀರದಲ್ಲಿರುವ ತಮ್ಮ ಪರಿಚಿತರಾದ ನಿವೃತ್ತ ಸೇನಾಧಿಕಾರಿ ಯೋಗೇಶ್ ಎಂಬುವವರನ್ನು ವಿಚಾರಿಸಿದಾಗ ವಿಶ್ವನಾಥ್ ಜೀ ಹೆಸರಿನ ಹಿರಿಯ ಪ್ರಚಾರಕರು ಯಾರೂ ಇಲ್ಲ ಎಂದು ತಿಳಿಸಿದ್ದಾರೆ.

    ಇದರಿಂದ ಅನುಮಾನ ದಟ್ಟವಾಗಿದೆ. ಕೂಡಲೇ ಗೋವಿಂದಬಾಬು, ಚೈತ್ರಾ ಕುಂದಾಪರ ಹಾಗೂ ಗಗನ್ ಕಡೂರುಗೆ ಕರೆ ಮಾಡಿ ಬೊಮ್ಮನಹಳ್ಳಿಯಲ್ಲಿರುವ ತಮ್ಮ ಕಚೇರಿಗೆ ಕರೆಸಿಕೊಂಡು ಚರ್ಚಿಸಿದಾಗ ತಾವು ಪಡೆದ ಹಣ ವಿಶ್ವನಾಥ ಜೇ ಬಳಿ ಇದ್ದು, ಅವರೀಗ ವಿಧಿವಶರಾಗಿದ್ದಾರೆ ಎಂದು ಹೇಳಿದ್ದಾರೆ.
    ಇದನ್ನು ನಂಬದ ಗೋವಿಂದಬಾಬು ಅವರು ಎಲ್ಲ ನಾಟಕ ನನಗೆ ಗೊತ್ತಾಗಿದೆ, ಹಣವನ್ನು ವಾಪಸ್‌ ನೀಡಿ, ಇಲ್ಲ ದೂರು ನೀಡುತ್ತೇನೆ ಎಂದಿದ್ದಾರೆ.

    ಅದಕ್ಕೆ ಚೈತ್ರಾ ಕುಂದಾಪುರ ವಿಷದ ಬಾಟಲೆ ತೋರಿಸಿ, ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಬಾಕ್ ಮೇಲ್ ಮಾಡಿ ಸ್ವಲ್ಪ ಕಾಲಾವಕಾಶ ನೀಡಿ ಎಂದು ಇಬ್ಬರೂ ಹೇಳಿದ್ದಾರೆ.

    ಅನಂತರ ಇಬ್ಬರೂ ಫೋನ್ ಕರೆ ಸ್ವೀಕರಿಸದೆ ತಲೆ ಮರೆಸಿಕೊಂಡಿದ್ದರು.
    ಇದಾದ ಬಳಿಕ ಗೋವಿಂದಬಾಬು ಅಭಿನವ ಪಾಲಶ್ರೀ ಸ್ವಾಮೀಜಿ ಅವರನ್ನು ಭೇಟಿಯಾಗಿ 1.5 ಕೋಟಿ ರೂ. ಹಣ ನೀಡುವಂತೆ ಹೇಳಿದ್ದಾರೆ.

    ಆಗ ಸ್ವಾಮೀಜಿ ಒಂದು ತಿಂಗಳೊಳಗೆ ವಾಪಸ್‌ ನೀಡುತ್ತೇನೆ ಈ ವಿಚಾರದಲ್ಲಿ ನನ್ನನ್ನು ಬಿಟ್ಟು ಬಿಡಿ ಎಂದು ಹೇಳಿದ್ದಾರೆ.

    ಆದರೆ ಈ ಘಟನೆಯಲ್ಲಿ ಬರುವ ಪಾತ್ರಧಾರಿಗಳು ಮಾತ್ರ ಎಲ್ಲರೂ ನಕಲಿ ಎನ್ನುವುದು ತನಿಖೆಯಲ್ಲಿ ಗೊತ್ತಾಯಿತು.

    ಬಳಿಕ ಗೋವಿಂದಬಾಬು, ವಿಶ್ವನಾಥ್ ಜೀ ಬಗ್ಗೆ ಚಿಕ್ಕಮಗಳೂರು ಹಿಂದೂ ಸಂಘಟನೆ ಕಾರ್ಯಕರ್ತ ಮಂಜು ಬಳಿ ಹೇಳಿದಾಗ ಮಂಜು ತಾನು ಕೆಲ ದಿನಗಳ ಹಿಂದೆ ಸಲೂನ್‌ ಒಂದಕ್ಕೆ ಭೇಟಿ ನೀಡಿದ ವೇಳೆ ನಡೆದ ಸನ್ನಿವೇಶಕ್ಕೂ ಇದಕ್ಕೂ ಸಾಮ್ಯತೆ ಎಂದು ಹೇಳಿದ್ದಾರೆ.

    ಕಡೂರಿನ ಸಲೂನ್​ಗೆ ಮಾಕ್ರಿಯೊಬ್ಬರನ್ನು ಕರೆದುಕೊಂಡು ಬಂದಿದ್ದ ಸ್ಥಳೀಯನೊಬ್ಬ ಆ ವ್ಯಕ್ತಿಯನ್ನು ಆರ್​ಎಸ್​ಎಸ್​ ಪ್ರಚಾರಕರ ರೀತಿ ಮೇಕಪ್ ಮಾಡಿಸಿದ್ದನು.

    ಈ ಬಗ್ಗೆ ವಿಚಾರಿಸಿದಾಗ ಮೇಕಪ್ ಮಾಡಲು ಬಂದಿದ್ದವರು ಧನರಾಜ್ ಹಾಗೂ ರಮೇಶ್‌ ಎಂಬ ವ್ಯಕ್ತಿಗಳೆಂದು ತಿಳಿಯಿತು.

    ಅವರನ್ನು ಪತ್ತೆ ಮಾಡಿದಾಗ ರಮೇಶ ಎಂಬಾತನೇ ಆರ್​ಎಸ್​ಎಸ್​ ಪ್ರಚಾರಕ ವಿಶ್ವನಾಥ್ ಜಿ. ಹೆಸರಲಿ ನಟಿಸಿರುವ ಸಂಗತಿ ಗೋವಿಂದಬಾಬುಗೆ ತಿಳಿದಿದೆ.

    ಆರ್​ಎಸ್​ಎಸ್​ ಪ್ರಚಾರಕರಂತೆ ನಟಿಸಲು ಗಗನ್ ಕಡೂರ್ ಮತ್ತು ಚೈತ್ರಾ ಕುಂದಾಪುರ ಆತನಿಗೆ ತರಬೇತಿ ನೀಡಿ 1.20 ಲಕ್ಷ ರೂ. ಕೊಟ್ಟಿದ್ದಾರೆ.

    ಈ ನಾಟಕವಾಡುವಾಗ ಆರ್ ಎಸ್ ಎಸ್ ವಾಹನವಾಗಿ ಬಳಸಲು 2.5 ಲಕ್ಷ ರೂ. ನೀಡಿದ್ದಾರೆ ಎಂದು ಧನರಾಜ್ ಹೇಳಿದ್ದಾರೆ.

    ಇದೇ ವೇಳೆ ಬಿಜೆಪಿ ಕೇಂದ್ರ ಚುನಾವಣಾ ಸಮಿತಿಯ ಸದಸ್ಯರೆಂದು ಹೇಳಿಕೊಂಡ ಶ್ರೀಕಾಂತ್​ ನಾಯ್ಕ್​ ಎಂಬ ವ್ಯಕ್ತಿ ಬಗೆ ಧನರಾಜ್ ಬಳಿ ವಿಚಾರಿಸಿದಾಗ ಇವರು ಬೆಂಗಳೂರಿನ ಕೆ.ಆರ್ ಪುರಂನಲ್ಲಿ ಚಿಕನ್ ಕಬಾಬ್ ತಯಾರಿಸುವ ಬೀದಿ ವ್ಯಾಪಾರಿ ಎಂಬುದು ಗೊತ್ತಾಗಿದೆ.

    ಶ್ರೀಕಾಂತ್​ ನಾಯ್ಕ್​​ರನ್ನು ಭೇಟಿಯಾಗಿ ವಿಚಾರಿಸಿದಾಗ ಬಿಜೆಪಿ ನಾಯಕನಾಗಿ ಪಾತ್ರ ಮಾಡಲು ತನಗೆ ಗಗನ್ ಕಡೂರು 93 ಸಾವಿರ ರೂ. ನೀಡಿದ್ದಾರೆ.

    ಅಲ್ಲದೇ ಈ ವಿಚಾರಗಳನ್ನು ಬಹಿರಂಗಪಡಿಸಿದರೆ ಕೊಲೆ ಮಾಡಿಸುವುದಾಗಿ ಚೈತ್ರ ಕುಂದಾಪುರ ತನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ಶ್ರೀಕಾಂತ್​​ ಹೇಳಿದ್ದಾನೆ ಎಂದು ಎಫ್​ಐಆರ್​ ದಾಖಲಾಗಿದೆ.

    ಕೋಟಿ ಕೋಟಿ ಹಣವನ್ನು ನುಂಗಲು ಚೈತ್ರಾ ಕುಂದಾಪುರ ಅಂಡ್ ಟೀಮ್ ಒಂದು ವ್ಯವಸ್ಥಿತ ನಾಟಕವನ್ನೇ ಆಡಿದ್ದು ಗೋವಿಂದ ಬಾಬು ಪೂಜಾರಿ ಮಾತ್ರ ಖೆಡ್ಡಾಕ್ಕೆ ಬಿದ್ದ ಆನೆಯಂತಾಗಿದ್ದಾರೆ.

    Share Information
    Advertisement
    Click to comment

    You must be logged in to post a comment Login

    Leave a Reply