KARNATAKA
ಚಿತ್ರದುರ್ಗ: ತಹಶೀಲ್ದಾರ್ ಜೀಪಿಗೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಯುವಕ..!
ಚಿತ್ರದುರ್ಗ : ತಾಲ್ಲೂಕು ದಂಡಾಧಿಕಾರಿಗಳ ವಾಹನಕ್ಕೆ ಹಾಡಹಗಲೇ ಯುವಕನೋರ್ವ ಬೆಂಕಿ ಹಚ್ಚಿ ಹುಚ್ಚಾಟ ಮೆರೆದ ಘಟನೆ ಚಿತ್ರದುರ್ಗದ ಚಳ್ಳಕೆರೆಯಲ್ಲಿ ನಡೆದಿದೆ.
ಇತ್ತೀಚೆಗಷ್ಟೇ ಬೆಂಗಳೂರಿನ ವಿಧಾನಸೌಧದ ಮುಂದೆ ತನ್ನ ಬೈಕ್‌ಗೆ ತಾನೇ ಬೆಂಕಿ ಹಚ್ಚಿ ಹುಚ್ಚಾಟ ಮೆರೆದೆ ಘಟನೆ ಮರೆಯಾಗುವ ಮುನ್ನ ಚಳ್ಳಕೆರೆಯಲ್ಲೂ ಇಂಥದೊಂದು ಹುಚ್ಚಾಟ ನಡೆದಿದೆ. ತಹಶೀಲ್ದಾರ್ ಅವರು ಎಂದಿನಂತೆ ಕರ್ತವ್ಯಕ್ಕೆ ಹಾಜರಾಗಿ, ಕಚೇರಿ ಮುಂದೆ ಕಾರು ನಿಲ್ಲಿಸಿದ್ದರು. ತಹಸಿಲ್ದಾರ್ ಅವರು ಒಳಗಡೆ ಹೋದ ಕೆಲವೇ ಕ್ಷಣಗಳಲ್ಲಿ ಏಕಾಯಕಿ ಯುವಕನೋರ್ವ ಬಣದು ಸರ್ಕಾರಿ ವಾಹನದ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾನೆ. ಸ್ಥಳದಲ್ಲಿದ್ದ ಸಾರ್ವಜನಿಕರು ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಹು ದೊಡ್ಡ ಅನಾಹುತನಾ ಸಾರ್ವಜನಿಕರಿಂದ ತಪ್ಪಿದೆ. ಸ್ಥಳೀಯ ಸಿಸಿ ಟಿವಿ ಪರಿಶೀಲನೆ ನಡೆಸಿದ ಚಳ್ಳಕೆರೆ ಪೊಲೀಸರು ಪೃಥ್ವಿರಾಜ್ ಎಂಬ ಯುವಕನನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.
You must be logged in to post a comment Login