Connect with us

    DAKSHINA KANNADA

    ಕಡಬ: ಕಾಲು ಜಾರಿ ತೋಡಿಗೆ ಬಿದ್ದು ಯುವಕ ಮೃತ್ಯು

    ಕಡಬ :  ದಕ್ಷಿಣ ಕನ್ನಡದ ಕಡಬ ತಾಲೂಕಿನ ಪೇರಡ್ಕ ಎಂಬಲ್ಲಿ ತೋಡಿಗೆ ಬಿದ್ದು ಯುವಕನೋರ್ವ ಮೃತಪಟ್ಟಿದ್ದಾನೆ. ಮೀನಾಡಿ ಸಮೀಪ ದೋಳ ನಿವಾಸಿ ಉಮೇಶ (35) ಮೃತಪಟ್ಟ ಯುವಕನಾಗಿದ್ದಾನೆ.

    ಕೆಲಸ ಬಿಟ್ಟು ಮನೆಗೆ ಬರುತ್ತಿದ್ದ ವೇಳೆ ಕಾಲು ಜಾರಿ ಉಮೇಶ ತೋಡಿಗೆ ಬಿದ್ದಿದ್ದರು. ಈ ಸಂದರ್ಭ ತೋಡಿನಲ್ಲಿ ನೀರಿನ ಹರಿವು ಹೆಚ್ಚಳವಾಗಿತ್ತು ಎನ್ನಲಾಗಿದೆ. ಬಳಿಕ ಸುಮಾರು ಒಂದು ಕಿಮೀ ಕೆಳಗಡೆ ಪೇರಡ್ಕ ಸೇತುವೆ ಬಳಿ ಉಮೇಶ್ ಅವರ ಮೃತದೇಹ ಪತ್ತೆಯಾಗಿತ್ತು. ಸ್ಥಳಕ್ಕೆ ಕಡಬ ಪೊಲೀಸರ ಆಗಮಿಸಿ ಪರಿಶೀಲನೆ ನಡೆಸಿದ್ದು ಕಡಬ ಪೋಲಿಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲು ಮಾಡಲಾಗಿದೆ.

    Share Information
    Advertisement
    Click to comment

    You must be logged in to post a comment Login

    Leave a Reply