ಬಿಸಿ ನೀರು ತಗಲಿ ಬಾಲಕಿ ಸಾವು, ಸಂಬಂಧಿಕರಿಂದ ವೈದ್ಯರ ನಿರ್ಲಕ್ಯ ಆರೋಪ

ಮೈ ಮೇಲೆ ಬಿಸಿ ನೀರು ತಗಲಿ ಗಂಭೀರವಾಗಿ ಗಾಯಗೊಂಡಿದ್ದ ಬಾಲಕಿ ಖಾಸಗಿ ಆಸ್ಪತ್ರೆಯಲ್ಲಿ ಸಾವಿಗೀಡಾದ ಘಟನೆ ಪುತ್ತೂರಿನಲ್ಲಿ ನಡೆದಿದೆ.

ಪುತ್ತೂರಿನ ಬೆದ್ರಾಳ ನಿವಾಸಿ ಹಾಗೂ ಸಾಂದೀಪನಿ ಶಾಲೆಯ ಒಂದನೇ ತರಗತಿ ಬಾಲಕಿ ತನ್ವಿ ಸಾವಿಗೀಡಾದ ಬಾಲಕಿಯಾಗಿದ್ದಾಳೆ.

ನಾಲ್ಕು ದಿನಗಳ ಹಿಂದೆ ಮನೆಯಲ್ಲಿದ್ದ ಸಂದರ್ಭದಲ್ಲಿ ಅಚಾನಕ್ ಆಗಿ ಬಿಸಿ ನೀರು ತನ್ವಿ ಮೇ ಮೇಲೆ ಬಿದ್ದಿದೆ.

ಇದರಿಂದ ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ಪುತ್ತೂರಿನ ಧನ್ವಂತರಿ ಆಸ್ಪತ್ರೆಗೆ ಸೇರಿಸಲಾಗಿತ್ತು.

ಆಸ್ಪತ್ರೆಯ ವೈದ್ಯರು ಬೆಂದಿದ್ದ ಆಕೆಯ ದೇಹದ ತುಂಬಾ ಬಟ್ಟೆ ಸುತ್ತಿ ಚಿಕಿತ್ಸೆ ನೀಡಿದ್ದರು.

ಆದರೆ ಆಕೆಯ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡು ಬರದ ಕಾರಣ ಆಸ್ಪತ್ರೆಯ ವೈದ್ಯರು ನಾಲ್ಕು ದಿನದ ಬಳಿಕ ಸೋಮವಾರ ರಾತ್ರಿ ಮಂಗಳೂರಿನ ಆಸ್ಪತ್ರೆಗೆ ಕೊಂಡೊಯ್ಯುವಂತೆ ಸೂಚನೆ ನೀಡಿದ್ದರು.

ಆದರೆ ಮಾರ್ಗ ಮಧ್ಯೆಯೇ ಬಾಲಕಿ ಸಾವನ್ನಪ್ಪಿದ್ದಾಳೆ.

ಬೆಂದು ಹೋದ ಶರೀರಕ್ಕೆ ಬಟ್ಟೆ ಸುತ್ತಿ ನಾಲ್ಕು ದಿನ ಚಿಕಿತ್ಸೆ ನೀಡಿದ ವೈದ್ಯರ ವಿರುದ್ಧ ಇದೀಗ ಮೃತ ಬಾಲಕಿ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವೈದ್ಯರ ನಿರ್ಲಕ್ಷ್ಯದಿಂದಲೇ ಈ‌ ಸಾವು ಸಂಭವಿಸಿದೆ ಎನ್ನುವ ಆರೋಪವೂ ಮೃತ ಬಾಲಕಿಯ ಸಂಬಂಧಿಕರದ್ದಾಗಿದೆ.

Facebook Comments

comments