ಮಂಗಳೂರಿನಲ್ಲೊಂದು ವಿಸ್ಮಯ ಬುಲೆಟ್ ಸವಾರಿ ಮಾಡಿದ ಮರಿ ನಾಗರಹಾವು

ಮಂಗಳೂರು ನವೆಂಬರ್ 20: ಮಂಗಳೂರಿನಲ್ಲಿ ಚಲಿಸುತ್ತಿರುವ ಬುಲೆಟ್ ಬೈಕ್ ಒಳಗಿನಿಂದ ನಾಗರಹಾವು ಧಿಡೀರನೇ ಹೊರ‌ ಬಂದಿರುವ ಘಟನೆ ಮಂಗಳೂರಿನ ಮರಕಡ ಎಂಬಲ್ಲಿ ಘಟನೆ ನಡೆದಿದೆ.

ಮರಕಡ ನಿವಾಸಿ ಬದ್ರುದ್ದೀನ್ ಕುಳೂರು ಎಂಬುವವರು ಬುಲೆಟ್ ಬೈಕ್ ನಲ್ಲಿ ಸಂಚರಿಸುತ್ತಿರುವ ವೇಳೆಯಲ್ಲಿ ಹೆಡೆ ಎತ್ತುತ್ತಾ ಹಾವು ಧೀಡಿರ್ ಮೀಟರ್ ಗೇಜ್ ಪಕ್ಕದಿಂದಲೇ ಹೊರಬಂದಿದೆ.

ಭಾನುವಾರ ಮಧ್ಯಾಹ್ನ ಮರಕಡದ ತಮ್ಮ ಮನೆಯಿಂದ ನುಡಿಸಿರಿಗೆಂದು ಬುಲೆಟ್ ಬೈಕಲ್ಲಿ ಹೊರಟಿದ್ದರು. ಹೊರಡುವಾಗಲೇ ಅವರ ಮನೆಯ ಬೆಕ್ಕು ಬೈಕ್ ಸುತ್ತ ಸುತ್ತುತ್ತಿತ್ತು, ಆದರೂ ಕಡೆಗಣಿಸಿ ಅವರು ಮರಕಡ ಪೆಟ್ರೋಲ್ ಬಂಕ್‌ಗೆ ಬಂದಿದ್ದಾರೆ. ಪೆಟ್ರೋಲ್ ಹಾಕಿಸಿ ಇನ್ನೇನು ರಸ್ತೆಗೆ ಇಳಿಯಬೇಕು ಎನ್ನುವಷ್ಟರಲ್ಲೇ ಬೈಕ್‌ನ ಕೀ ಹಾಕುವ ಜಾಗದ ಬಳಿಯಿಂದ ಪುಟಾಣಿ ನಾಗರಹಾವೊಂದು ತಲೆಯೆತ್ತಿದೆ.

ಸುಮಾರು ಒಂದು ವರ್ಷ ಪ್ರಾಯದ ಮರಿ ನಾಗರ ಹಾವು ಇದಾಗಿದ್ದು, ಆದರೆ ಕಡಿದರೆ ಬಲು ಅಪಾಯಕಾರಿ. ಎಂದು ಹೇಳಲಾಗಿದೆ.
ಗಾಬರಿಯಾದರೂ ಬೈಕ್ ನ್ನು ನಿಲ್ಲಿಸಿದ ಬದ್ರುದ್ದೀನ್ ಕೆಳಗೆ ಇಳಿದಿದ್ದಾರೆ. ಈ ಸಂದರ್ಭದಲ್ಲಿ ಸ್ಥಳೀಯರೆಲ್ಲರೂ ಸೇರಿದ್ದಾರೆ. ಆದರೂ ಬೈಕ್‌ನಿಂದ ಇಳಿಯದ ನಾಗರ ಹಾವು ಹೆಡೆಯೆತ್ತಿ ನೆರೆದವರಿಗೆ ಮನರಂಜನೆ ನೀಡಿದೆ.

ಬೈಕ್‌ನ ಹೆಡ್‌ಲೈಟ್ ಕೆಳಭಾಗದಲ್ಲಿರುವ ವೈರುಗಳ ಎಡೆಯಲ್ಲಿ ಕುಳಿತು ತಲೆ ಎತ್ತಿ ನೋಡುತ್ತಿದ್ದ ಹಾವನ್ನು ಸ್ನೇಕ್ ಕ್ಯಾಚರ್ ಗಂಗಯ್ಯ ನಾಜೂಕಾಗಿ ಹಿಡಿದು ಗೋಣಿಗೆ ಹಾಕಿದರು. ಹಿಡಿದಿರುವ ಹಾವನ್ನು ಪಿಲಿಕುಳಕ್ಕೆ ಒಪ್ಪಿಸಲಿದ್ದಾರೆ.

VIDEO

Facebook Comments

comments