KARNATAKA
ಕಾರ್ಕಳ : ಚುಚ್ಚುಮದ್ದು ತಗೊಂಡ ಕೆಲವೇ ಗಂಟೆಗಳಲ್ಲಿ ಮಗು ಸಾವು..!

ಕಾರ್ಕಳ : ಚುಚ್ಚುಮದ್ದು ತಗೊಂಡ ಕೆಲವೇ ಗಂಟೆಗಳಲ್ಲಿ ಮಗುವೊಂದು ಅನುಮಾನಾಸ್ಪದವಾಗಿ ಸಾವನ್ನಪ್ಪಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ರೆಂಜಾಳ ಗ್ರಾಮದಲ್ಲಿ ನಡೆದಿದೆ.
ಶ್ರೀಯಾನ್ (4.5 ವರ್ಷ) ಮೃತಪಟ್ಟ ಮಗು ಎಂದು ತಿಳಿದು ಬಂದಿದೆ.

ಶ್ರೀಯಾನ್‌ಗೆ ನಿನ್ನೆ ಬುಧವಾರ ಮದ್ಯಾಹ್ನ ಹೊತ್ತಿಗೆ ಕಾರ್ಕಳ ತಾಲೂಕು ಪ್ರಾಥಮಿಕ ಆರೋಗ್ಯ ಕೇಂದ್ರ ರೆಂಜಾಳದಲ್ಲಿ ಆರೋಗ್ಯ ಕೇಂದ್ರದ ಶುಶ್ರೂಕಿಯರು ಚುಚ್ಚು ಮದ್ದು ನೀಡಿದ್ದರು.
ಅದಾದ ಬಳಿಕ ಮಗುವನ್ನು ಮನೆಗೆ ಕರೆದುಕೊಂಡು ಬಂದಿದ್ದು, ಮದ್ಯಾಹ್ನ 02:30ರ ಹೊತ್ತಿಗೆ ಮಗುವಿನ ಬಾಯಿಯಲ್ಲಿ ನೊರೆ ಬಂದಿದ್ದಲ್ಲದೆ ತೀವ್ರ ರೀತಿಯಲ್ಲಿ ಅಸ್ವಸ್ಥಗೊಂಡಿತ್ತು.
ನಂತರ ಕಾರ್ಕಳ ರೋಟರಿ ಪೈ ಆಸ್ಪತ್ರೆಗೆ ಮಗುವನ್ನು ಕರೆದುಕೊಂಡು ಬಂದಿದ್ದು ಸಂಜೆ 06:50ರ ಹೊತ್ತಿಗೆ ಮಗು ಮೃತಪಟ್ಟಿದ್ದಾಗಿ ವೈದ್ಯರು ತಿಳಿಸಿರುತ್ತಾರೆ.
ಶ್ರೀಯಾನ್‌ಗೆ ರೆಂಜಾಳ ಪ್ರಾಥಮಿಕ ಆರೋಗ್ಯ ಕೇಂದ್ರದ ಶುಶ್ರೂಕಿಯವರು ಚುಚ್ಚುಮದ್ದು ನೀಡಿದ ಅಡ್ಡ ಪರಿಣಾಮದಿಂದಲೇ ಮೃತಪಟ್ಟಿದ್ದಾಗಿ, ಮಗುವಿನ ತಂದೆ ಸುಧಾಕರ ಆರ್. ಶೆಟ್ಟಿ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.