Connect with us

FILM

ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಆತ್ಮಹತ್ಯೆ ಯತ್ನ..!

ಬೆಂಗಳೂರು :  ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಕೋಲಾರ ನಗರದ ಕುರುಬರ ಪೇಟೆ ಮನೆಯಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ.

ಪ್ರಸ್ತುತ  ಅವರನ್ನು ಕೋಲಾರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮದುವೆ ವಿಚಾರವಾಗಿ ನಡೆದ ವಿವಾದದ ಹಿನ್ನೆಲೆ ‌ಮನನೊಂದು ಫಿನಾಯಿಲ್ ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಮಾರ್ಚ್ 28 ರಂದು ಮಂಡ್ಯ ಮೂಲದ ನಾಗಾರ್ಜುನ್ ಎಂಬುವರೊಂದಿಗೆ ಚೈತ್ರಾ ಕೋಟೂರ್ ಮದುವೆಯಾಗಿದ್ದರು.

ಆದರೆ ಮದುವೆಯಾದ ದಿನವೇ ವಿವಾದಕ್ಕೀಡಾಗಿ ಪ್ರಕರಣ ಪೊಲೀಸ್ ಠಾಣೆ ಮಟ್ಟಿಲೇರಿತ್ತು.

ಇದೇ ಕಾರಣಕ್ಕೆ ನಟಿ, ಕವಯಿತ್ರಿ ಬಿಗ್ ಬಾಸ್ ಖ್ಯಾತಿಯ ಚೈತ್ರಾ ಕೋಟೂರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಬಿಗ್​ ಬಾಸ್ ಮಾಜಿ​ ಸ್ಪರ್ಧಿ ಚೈತ್ರಾ ಕೋಟೂರ್​ ಅವರು ಕನ್​ಸ್ಟ್ರಕ್ಷನ್ ಮತ್ತು ರಿಯಲ್​ ಎಸ್ಟೇಟ್​​ ಕ್ಷೇತ್ರದಲ್ಲಿ ತೊಡಗಿಕೊಂಡಿರುವ ನಾಗಾರ್ಜುನ್​ ಎಂಬುವವರ ಜೊತೆ ಮಾ.28ರ ಬೆಳಗ್ಗೆ ಸಿಂಪಲ್ ಆಗಿ ಮದುವೆ ಆಗಿದ್ದರು.

ಆದರೆ ವಿವಾಹವಾಗಿ ಕೆಲವೇ ಗಂಟೆಗಳು ಕಳೆಯುವುದರೊಳಗೆ ನಾಗಾರ್ಜುನ್​ ಮನೆಯವರು ತಕರಾರು ತೆಗೆದಿದ್ದರು.

ಇದರ ಬಗ್ಗೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಲು ನಾನು ತೆರಳಿದ್ದೆ. ನಂತರ ಮಾತುಕತೆಯಲ್ಲಿ ಬಗೆಹರಿಸಿಕೊಳ್ಳೋಣ ಎಂದು ಮನವಿ ಮಾಡಿಕೊಂಡರು ಎಂಬ ಕಾರಣಕ್ಕೆ ದೂರು ನೀಡಲಿಲ್ಲ.

ಆದರೆ ಈಗ ಮತ್ತೆ ವಿವಾದ ಮಾಡುತ್ತಿದ್ದಾರೆ’ ಎಂದು ಚೈತ್ರಾ ಪ್ರತಿಕ್ರಿಯೆ ನೀಡಿದ್ದರು.

ನಾಗಾರ್ಜುನ್​ ಎರಡು ದಿನ ಸಮಯ ತೆಗೆದುಕೊಂಡಿದ್ದಾರೆ. ತವರು ಮನೆಯಲ್ಲಿ ಚೈತ್ರಾ ಇದ್ದಾರೆ. ಎರಡು ದಿನಗಳ ಬಳಿಕ ಮತ್ತೆ ಮಾತುಕತೆ ನಡೆಸುವುದಾಗಿ ಚೈತ್ರಾ ತಿಳಿಸಿದ್ದರು.

ಆದರೆ  ಈ ಎಲ್ಲದರ ಮಧ್ಯೆ ಚೈತ್ರ  ಆತ್ಮಹತ್ಯೆ ಯತ್ನ ಮಾಡಿದ್ದಾರೆ. ಕೋಲರ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.