Connect with us

    KARNATAKA

    ಚಿಕ್ಕಮಗಳೂರು- ಬೇಲೂರು ಬ್ರಾಡ್ ಗೇಜ್ ಜೋಡನಾ ಕಾರ್ಯ 2024 ರ ಅಂತ್ಯದ ವೇಳೆಗೆ ಪೂರ್ಣ : ಸಚಿವ ವಿ. ಸೋಮಣ್ಣ

    ಹಾಸನ : ಕೇಂದ್ರ ರೈಲ್ವೆ ಮತ್ತು ಜಲಶಕ್ತಿ ರಾಜ್ಯ ಸಚಿವರಾದ  ವಿ. ಸೋಮಣ್ಣ ಅವರು ಮೈಸೂರು ವಿಭಾಗದ ಹಾಸನ ಮತ್ತು ಚಿಕ್ಕಮಗಳೂರು ರೈಲ್ವೆ ನಿಲ್ದಾಣಗಳಲ್ಲಿ ನಡೆಯುತ್ತಿರುವ ಮೂಲಸೌಕರ್ಯ ಯೋಜನೆಗಳ ಪರಿಶೀಲನೆ ನಡೆಸಿದರು.

    ಈ ನಿಲ್ದಾಣಗಳನ್ನು ಅಮೃತ್ ಭಾರತ್ ಸ್ಟೇಷನ್ ಯೋಜನೆಯಡಿ ದೀರ್ಘಕಾಲೀನ ಯೋಜನೆ ಮತ್ತು ಪ್ರಯಾಣಿಕರ ಸೌಲಭ್ಯಗಳ ಹೆಚ್ಚಳದ ಮೇಲೆ ಕೇಂದ್ರೀಕರಿಸಿ ಪುನರಾಭಿವೃದ್ಧಿ ಮಾಡಲಾಗುತ್ತಿದೆ. ಹಾಸನದಲ್ಲಿ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಸಭೆ ನಡೆಸಿದ ಮಾನ್ಯ ಕೇಂದ್ರ ರೈಲ್ವೆ ರಾಜ್ಯ ಸಚಿವರು ರೈಲ್ವೆ ಮೂಲಸೌಕರ್ಯ ಯೋಜನೆಗಳ ಪರಿಶೀಲನೆ ನಡೆಸಿದರು ನಂತರ ಮಾನ್ಯ ಸಚಿವರು ಹಾಸನ ರೈಲ್ವೆ ನಿಲ್ದಾಣದ ಪುನರಾಭಿರುದ್ಧಿ ಕಾಮಗಾರಿಗಳನ್ನು ನಿರೀಕ್ಷಣಾ ಕೊಠಡಿ, ಸಭಾಂಗಣ ಮತ್ತು ಪ್ಲಾಟ್ ಫಾರ್ಮ್ ಶೌಚಾಲಯಗಳ ಸುಧಾರಣೆ, ಮುಖಮಂಟಪ ನಿರ್ಮಾಣ, 2 ಲಿಫ್ಟ್ ಗಳು ಮತ್ತು 2 ಎಸ್ಕಲೇಟರ್ ಗಳನ್ನು ಹೊಂದಿರುವ 12 ಮೀಟರ್ ಅಗಲದ ಪಾದಚಾರಿ ಮೇಲ್ಸೇತುವೆ (ಎಫ್ ಒಬಿ) ಸೇರಿದಂತೆ ವಿವಿಧ ಕೆಲಸಗಳ, ಪೂರ್ಣ ಪ್ರಮಾಣದ ಪ್ಲಾಟ್ ಫಾರ್ಮ್ ಶೆಲ್ಟರ್ ಗಳು, ಲ್ಯಾಂಡ್ ಸ್ಕೇಪಿಂಗ್, ಪಾರ್ಕಿಂಗ್ ಪ್ರದೇಶಗಳು ಮತ್ತು ಸಾರ್ವಜನಿಕ ಪ್ರಕಟಣೆ ವ್ಯವಸ್ಥೆಗಳು, ಗಡಿಯಾರಗಳು, ಬೆಳಕಿನ ಸಂಕೇತಗಳಿಗಾಗಿ ವಿದ್ಯುತ್ ಕೆಲಸಗಳು, ಜೊತೆಗೆ ದಿವ್ಯಾಂಗ ಸೌಲಭ್ಯಗಳಿಗೆ ನಿಬಂಧನೆಗಳಂತಹ ವಿವಿಧ ಸೌಲಭ್ಯಗಳನ್ನು ವೀಕ್ಷಿಸಿದರು  ಶ್ರೇಯಸ್ ಪಟೇಲ್, ಸಂಸದರು ಹಾಸನ, ಜಿಲ್ಲಾದಿಕಾರಿಗಳಾದ ಶ್ರೀಮತಿ ಸತ್ಯಭಾಮ ಸಿ ಜೊತೆಗಿದ್ದರು.

    ಚಿಕ್ಕಮಗಳೂರಿನಲ್ಲಿ, ಕಾಯುವ ಪ್ರದೇಶಗಳ ಸುಧಾರಣೆ, ಪ್ಲಾಟ್ ಫಾರ್ಮ್ ಸೌಲಭ್ಯಗಳು, ಲಿಫ್ಟ್ ಗಳು ಮತ್ತು ಎಸ್ಕಲೇಟರ್ ಗಳು ಮತ್ತು ಪಾದಚಾರಿ ಮೇಲ್ಸೇತುವೆ (ಎಫ್ ಒಬಿ) ನಿರ್ಮಾಣ, ಜೊತೆಗೆ ಪಾರ್ಕಿಂಗ್ ಅಭಿವೃದ್ಧಿ ಸೇರಿದಂತೆ ಇದೇ ರೀತಿಯ ಸೌಲಭ್ಯ ಕಾರ್ಯಗಳು ಪ್ರಗತಿಯಲ್ಲಿವೆ. ಸಂಪರ್ಕ ರಸ್ತೆಗಳು ಮತ್ತು ಪ್ಲಾಟ್ ಫಾರ್ಮ್ ಶೆಲ್ಟರ್ ಗಳಂತಹ ಕ್ಷೇತ್ರಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಲಾಗಿದೆ.

    ಸಚಿವರಾದ  ವಿ.ಸೋಮಣ್ಣ ಅವರು ಚಿಕ್ಕಮಗಳೂರು ಮತ್ತು ಬೇಲೂರು ನಡುವಿನ 22 ಕಿ.ಮೀ ಉದ್ದದ ಹೊಸ ಬ್ರಾಡ್ ಗೇಜ್ ಜೋಡಣೆ ಯೋಜನೆಯ ಪ್ರಗತಿಯನ್ನು ಪರಿಶೀಲಿಸಿದರು. ಚಿಕ್ಕಮಗಳೂರಿನಿಂದ ಹಾಡಿಹಳ್ಳಿವರೆಗೆ (9 ಕಿ.ಮೀ) ಆರಂಭಿಕ ಹಂತವನ್ನು 133.75 ಕೋಟಿ ರೂ.ಗಳ ವೆಚ್ಚದಲ್ಲಿ ಕಾರ್ಯಗತಗೊಳಿಸಲಾಗುತ್ತಿದ್ದು, 2024 ರ ಅಂತ್ಯದ ವೇಳೆಗೆ ಪೂರ್ಣಗೊಳಿಸುವ ಗುರಿಯನ್ನು ಹೊಂದಲಾಗಿದೆ. 190 ಕೋಟಿ ರೂ.ಗಳ ಯೋಜನಾ ವೆಚ್ಚದ ಹಾಡಿಹಳ್ಳಿಯಿಂದ ಬೇಲೂರಿನವರೆಗಿನ (13 ಕಿ.ಮೀ) ಎರಡನೇ ಹಂತವನ್ನು 2026 ರ ವೇಳೆಗೆ ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ. 748.85 ಕೋಟಿ ರೂ.ಗಳ ಅಂದಾಜು ವೆಚ್ಚದ ಬೇಲೂರು-ಹಾಸನ (ಆಲೂರು) ನಡುವಿನ 27 ಕಿ.ಮೀ ರೈಲ್ವೆ ಮಾರ್ಗದ ಯೋಜನೆಯ ಮೂರನೇ ಮತ್ತು ಅಂತಿಮ ಹಂತವನ್ನು 2027 ರ ವೇಳೆಗೆ ಕಾರ್ಯಗತಗೊಳಿಸುವ ಗುರಿಯನ್ನು ಹೊಂದಲಾಗಿದೆ.

    ಮಾನ್ಯ ಸಚಿವರು ನಿರ್ಮಾಣ ಹಂತದಲ್ಲಿರುವ ಹಾದಿಹಳ್ಳಿ ರೈಲ್ವೆ ನಿಲ್ದಾಣದ ಕಟ್ಟಡವನ್ನು ಪರಿಶೀಲಿಸಿದರು, ವೆಚ್ಚದ ಹೆಚ್ಚಳವನ್ನು ತಡೆಗಟ್ಟಲು ಗುಣಮಟ್ಟದ ಮಾನದಂಡಗಳನ್ನು ಕಾಪಾಡಿಕೊಳ್ಳುವ ಮತ್ತು ಕಾಲಮಿತಿಯನ್ನು ಅನುಸರಿಸುವ ಮಹತ್ವವನ್ನು ಒತ್ತಿ ಹೇಳಿದರು. ಕೋಟ ಶ್ರೀನಿವಾಸ ಪೂಜಾರಿ, ಸಂಸದರು ಉಡುಪಿ-ಚಿಕ್ಕಮಗಳೂರು, ಶ್ರೇಯಸ್ ಪಟೇಲ್ ಸಂಸದರು ಹಾಸನ, ಮೈಸೂರು ವಿಭಾಗದ ವಿಭಾಗೀಯ ರೈಲ್ವೆ ವ್ಯವಸ್ಥಾಪಕರಾದ ಶ್ರೀಮತಿ ಶಿಲ್ಪಿ ಅಗರ್ವಾಲ್, ಪ್ರಧಾನ ಮುಖ್ಯ ವಾಣಿಜ್ಯ ವ್ಯವಸ್ಥಾಪಕರಾದ ಸತ್ಯ ಪ್ರಕಾಶ್ ಶಾಸ್ತ್ರಿ, ಮುಖ್ಯ ಆಡಳಿತಾಧಿಕಾರಿ / ನಿರ್ಮಾಣ  ರಾಮ್ ಗೋಪಾಲ್ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.

    Share Information
    Advertisement
    Click to comment

    Leave a Reply

    Your email address will not be published. Required fields are marked *