KARNATAKA
ಚಿಕ್ಕಮಗಳೂರಿನಲ್ಲಿ ಹಾಡುಹಗಲೇ ಜ್ಯುವೆಲ್ಲರಿ ಮಾಲಕನ ಮೇಲೆ ಪೈರಿಂಗ್
ಚಿಕ್ಕಮಗಳೂರು ಜುಲೈ 11: ಚಿಕ್ಕಮಗಳೂರಿನಲ್ಲಿ ಹಾಡುಹಗಲೇ ಶೂಟೌಟ್ ನಡೆದಿದೆ. ಪಲ್ಸರ್ ಬೈಕ್‌ನಲ್ಲಿ ಬಂದಿದ್ದ ಮೂವರು ದುಷ್ಕರ್ಮಿಗಳು ಜ್ಯುವೆಲ್ಲರ್ ಮಾಲಿಕನ ಮೇಲೆ ಫೈರಿಂಗ್ ಮಾಡಿ ಅಲ್ಲಿಂದ ಪರಾರಿಯಾಗಿರುವ ಘಟನೆ ಇಂದು ನಡೆದಿದೆ.
ಸಿನಿಮೀಯ ರೀತಿಯಲ್ಲಿ ಈ ಘಟನೆ ನಡೆದಿದೆ.ಪಲ್ಸರ್ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ನಗರದಲ್ಲಿ ಎಂ.ಜಿ ರಸ್ತೆಯಲ್ಲಿರುವ ಕೇಸರಿ ಜ್ಯುವೆಲ್ಲರ್ಸ್ ಮಾಲೀಕನಿಗೆ ಗನ್ ತೋರಿಸಿ ಚಿನ್ನಾಭರಣ ದೋಚಲು ಯತ್ನಿಸಿದ್ದಾರೆ. ಈ ವೇಳೆ ಅಂಗಡಿ ಮಾಲೀಕ ನಿರಾರಿಸಿದ್ದು, ಯಾರಾದರೂ ಸಹಾಯಕ್ಕೆ ಬರುವಂತೆ ಜೋರಾಗಿ ಕೂಗಿದ್ದಾರೆ. ತಕ್ಷಣ ಜ್ಯುವೆಲ್ಲರ್ ಮಾಲಿಕನ ಮೇಲೆ ಫೈರಿಂಗ್ ಮಾಡಿದ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ.
ಸಿನಿಮೀಯ ರೀತಿಯಲ್ಲಿ ಈ ದಾಳಿ ನಡೆದಿದೆ. ಈ ದಾಳಿಯಲ್ಲಿ ಜ್ಯುವೆಲ್ಲರ್ಸ್ ಮಾಲೀಕ ಸ್ಥಿತಿ ಗಂಭೀರವಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಸ್ಥಳಕ್ಕೆ ಪೊಲೀಸರು ಬಂದು ಪರೀಶೀಲನೆ ನಡೆಸಿದ್ದಾರೆ. ಅಲ್ಲದೇ ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗಾಗಿ ಬಲೆ ಬೀಸಿದ್ದಾರೆ.
Facebook Comments
You may like
ಬೆತ್ತಲೆಯಾದರೆ 50 ಕೋಟಿ ರೂ. ಸಿಗುತ್ತೆ..!?
ಪುತ್ತೂರು ಮಹಿಳಾ ಎಸ್ ಐ ಮೇಲೆ ಹಲ್ಲೆ – ಸಹೋದರಿಯರ ಬಂಧನ
ಚಡ್ಡಿ ಕದ್ದು ಧರಿಸಿದ್ದಕ್ಕೆ ಸಹೋದ್ಯೋಗಿಯನ್ನು ಚಾಕುವಿನಿಂದ ಇರಿದು ಕೊಂದ!
ಸುರತ್ಕಲ್ ನ ಫೆರಾವೊ ಲಾಡ್ಜಿಂಗ್ & ಬೋರ್ಡಿಂಗ್ ನಲ್ಲಿ ವೇಶ್ಯಾವಾಟಿಕೆ ದಂಧೆ – ಇಬ್ಬರ ಬಂಧನ
ಅಕ್ರಮ ಮರಳುಗಾರಿಕೆ ತಡೆಯಲು ಸ್ವತಃ ಫಿಲ್ಡ್ ಗೆ ಇಳಿದ ಪೊಲೀಸ್ ಆಯುಕ್ತ
ಕೊಲೆ ಪ್ರಕರಣದಲ್ಲಿ ಅರೆಸ್ಟ್ ಆದ ಹುಂಜ…!?
You must be logged in to post a comment Login