KARNATAKA
ಕತ್ತು ಕುಯ್ದುಕೊಂಡು ಆತ್ಮಹತ್ಯೆ ಯತ್ನಿಸಿದ ಪ್ರೇಮಿಗಳು
ಮೈಸೂರು ಜುಲೈ 9: ಕತ್ತು ಕುಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಪಾಗಲ್ ಪ್ರೇಮಿಗಳನ್ನು ಪೊಲೀಸರು ರಕ್ಷಿಸಿದ ಘಟನೆ ನಂಜನಗೂಡು ತಾಲೂಕಿನ ದುಗ್ಗಹಳ್ಳಿ ಗ್ರಾಮದಲ್ಲಿ ನಡೆದಿದೆ.
ದುಗ್ಗಾಹಳ್ಳಿ ಗ್ರಾಮದ ಕಾವ್ಯ ಮತ್ತು ಕುರಿಹುಂಡಿ ಗ್ರಾಮದ ರವಿ ಆತ್ಮಹತ್ಯೆಗೆ ಯತ್ನಿಸಿದ ಜೋಡಿ. ದುಗ್ಗಾಹಳ್ಳಿ ಗ್ರಾಮದ ಕಾವ್ಯ ಮತ್ತು ಕುರಿಹುಂಡಿ ಗ್ರಾಮದ ರವಿ ಪರಸ್ಪರ ಪ್ರೀತಿಸುತ್ತಿದ್ದು, ಇಬ್ಬರ ಜಾತಿ ಬೇರೆ ಆಗಿದ್ದರಿಂದ ಕುಟುಂಬಸ್ಥರು ಮದುವೆಗೆ ವಿರೋಧ ವ್ಯಕ್ತಪಡಿಸಿದ್ದರು. ಈ ಹಿನ್ನಲೆ ಇಂದು ದುಗ್ಗಹಳ್ಳಿಗೆ ಬಂದಿದ್ದ ರವಿ, ಯಾರು ಇಲ್ಲದ ವೇಳೆ ಕಾವ್ಯಾಳ ಮನೆಗೆ ಹೋಗಿದ್ದಾನೆ.
ಮದುವೆಗೆ ಪೋಷಕರ ವಿರೋಧದ ಹಿನ್ನೆಲೆ ಇಬ್ಬರು ಕತ್ತು ಕುಯ್ದುಕೊಂಡು ಮನೆಯ ಹೊರಗೆ ಬಂದು ಕುಳಿತಿದ್ದಾರೆ. ರಕ್ತಸ್ರಾವದಿಂದ ಒದ್ದಾಡುತ್ತಿದ್ದ ಇಬ್ಬರನ್ನು ನೋಡಿದ ಸ್ಥಳೀಯರು ಕೂಡಲೇ ಪೊಲೀಸರು ಮತ್ತು ಅಂಬುಲೆನ್ಸ್ ಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು ಇಬ್ಬರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
Facebook Comments
You may like
ಶೂಟಿಂಗ್ ಸೆಟ್ಗೆ ಹೋಗಿ ಜಗ್ಗೇಶ್ ವಿರುದ್ದ ಗರಂ ಆದ ದರ್ಶನ್ ಫ್ಯಾನ್ಸ್…ಕ್ಷಮೆ ಕೇಳಿದ ನಟ ಜಗ್ಗೇಶ್
ಮನೆ ಛಾವಣಿಗೆ ನೇಣು ಬಿಗಿದು ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿನಿ..!
ಮನೆ ಜಪ್ತಿ ಮಾಡಲು ಬಂದ ಬ್ಯಾಂಕ್ ಸಿಬ್ಬಂದಿ ಎದುರೆ ನೇಣಿಗೆ ಶರಣಾದ ಮನೆ ಮಾಲೀಕನ ಪತ್ನಿ
ಡೆತ್ ನೋಟ್ ಬರೆದಿಟ್ಟು ನೇತ್ರಾವತಿ ನದಿಗೆ ಹಾರಿದ ಕೆಎಸ್ಆರ್ ಟಿಸಿ ಬಸ್ ಕಂಡಕ್ಟರ್
ಚಿಂತಾಜನಕ ಸ್ಥಿತಿಯಲ್ಲಿರುವ ತಾಯಿ ನೆನೆದು ಆತ್ಮಹತ್ಯೆಗೆ ಶರಣಾದ ಮಗ
ಮಾಜಿ ಪ್ರಿಯತಮೆ ಮೇಲೆ ಚೂರಿ ದಾಳಿ ನಡೆಸಿದ ರೌಡಿಶೀಟರ್ ಪೊಲೀಸ್ ಬಲೆಗೆ
You must be logged in to post a comment Login