Connect with us

LATEST NEWS

ಹೊತ್ತಿ ಉರಿದ ಕೆಮಿಕಲ್ ತುಂಬಿದ್ದ ಟ್ಯಾಂಕರ್ – ತಪ್ಪಿದ ಭಾರೀ ಅನಾಹುತ

ಉತ್ತರ ಕನ್ನಡ : ಕೆಮಿಕಲ್ ತುಂಬಿದ ಟ್ಯಾಂಕರ್ ಪಲ್ಟಿಯಾಗಿ ಹೊತ್ತಿ ಉರಿದ ಘಟನೆ ಯಲ್ಲಾಪುರ ತಾಲೂಕಿನ ಆರೆಬೈಲ್ ಕ್ರಾಸ್‍ನ ಇಡಗುಂದಿ ಬಳಿ ನಡೆದಿದೆ. ಸುಮಾರು ದೂರದವರೆಗೂ ಬೆಂಕಿ ಆವರಿಸಿದ ಹಿನ್ನಲೆ ಹುಬ್ಬಳ್ಳಿ-ಅಂಕೋಲ ರಾಷ್ಟ್ರೀಯ ಹೆದ್ದಾರಿ 66ರ ಸಂಚಾರವನ್ನು ಕೆಲಕಾಲ ಬಂದ್ ಮಾಡಲಾಗಿತ್ತು, ಇದೀಗ ಸಂಚಾರ ಮುಕ್ತವಾಗಿದೆ.


ಬೆಳಗ್ಗೆ ಸುಮಾರು 5.30ರಿಂದ 5.45ರ ನಡುವೆ ಮಂಗಳೂರಿನಿಂದ ಗುಜರಾತಿಗೆ ತೆರಳಿತ್ತಿದ್ದ ಟ್ಯಾಂಕರ್ನಲ್ಲಿ ಅರಬೈಲ್ ಘಟ್ಟದಲ್ಲಿ ಹೋಗುವಾಗ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಲಾರಿ ಹೊತ್ತಿ ಉರಿಯಲಾರಂಭಿಸಿದೆ. ಚಾಲಕನಿಗೆ ಸಣ್ಣಪುಟ್ಟ ಗಾಯಗಳಾಗಿವೆ.
ಸ್ಫೋಟದಿಂದ 500 ಮೀಟರ್ ಹೆಚ್ಚು ದೂರು ಬೆಂಕಿ ಅಲ್ಲಲ್ಲಿ ಕಾಣಿಸಿಕೊಂಡಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ.


ಯಲ್ಲಾಪುರದ ಇಡಗುಂದಿ ಬಳಿ ಪಲ್ಟಿಯಾಗಿ ಬಿದ್ದಿರುವ ಕೆಮಿಕಲ್ ಟ್ಯಾಂಕರ್‍ನಿಂದ ಹೊರಕ್ಕೆ ಬಿದ್ದು ಶಾರ್ಟ್ ಸಕ್ರ್ಯೂಟ್‍ನಿಂದ ಬೆಂಕಿ ಹೊತ್ತಿಕೊಂಡಿದೆ ಎಂದು ಹೇಳಲಾಗುತ್ತಿದೆ.