LATEST NEWS
ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆದ ಕರಾವಳಿಯ ಚಿಯರ್ ಬಾಯ್ ವಿಡಿಯೋ

ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆದ ಕರಾವಳಿಯ ಚಿಯರ್ ಬಾಯ್ ವಿಡಿಯೋ
ಉಡುಪಿ ಡಿಸೆಂಬರ್ 19: ಕರಾವಳಿ ಚಿಯರ್ ಬಾಯ್ ಒಬ್ಬರ ವಿಡಿಯೋ ಭಾರಿ ವೈರಲ್ ಆಗಿದ್ದು, ಕ್ರಿಕೆಟ್ ಮ್ಯಾಚ್ ಗಳಲ್ಲಿ ಕಾಣ ಸಿಗುವ ಚಿಯರ್ ಗರ್ಲ್ಸ್ ರೀತಿಯಾಗಿಯೇ ಇಲ್ಲೊಬ್ಬರು ಸ್ಥಳೀಯ ಕ್ರೀಡಾಕೂಟಗಳಲ್ಲಿ ಚಿಯರ್ ಬಾಯ್ ಆಗಿ ಮಿಂಚುತ್ತಿದ್ದು, ಕರಾವಳಿಯಲ್ಲಿ ಚಿಯರ್ ಬಾಯ್ ಆಗಿ ಭಾರೀ ಫೇಮಸ್ ಆಗಿದ್ದಾರೆ.
ಕರಾವಳಿಯಲ್ಲಿ ಸಾಮಾನ್ಯವಾಗಿ ಕಬಡ್ಡಿ, ವಾಲಿಬಾಲ್, ಕ್ರಿಕೆಟ್, ಹಗ್ಗಜಗ್ಗಾಟ ಪಂದ್ಯಾಟಗಳು ನಡೆಯುತ್ತಾ ಇರುತ್ತವೆ. ಹೆಚ್ಚಾಗಿ ಈ ಎಲ್ಲಾ ಪಂದ್ಯಗಳು ಹೊನಲು ಬೆಳಕಿನಲ್ಲಿ ನಡೆಯುವುದೇ ಹೆಚ್ಚು. ಇಂತಹದೇ ಒಂದು ಕಾರ್ಯಕ್ರಮದಲ್ಲಿ ಕ್ರೀಡಾಪಟುಗಳನ್ನು ಉತ್ತೇಜಿಸುವ ವಿಡಿಯೋ ಒಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಕ್ರೀಡಾಸಕ್ತರನ್ನು ಮನೋರಂಜಿಸುತ್ತಿರುವ ಚಿಯರ್ ಬಾಯ್ ಉಡುಪಿಯ ಚೇತನ್.

ಇತ್ತೀಚೆಗೆ ನಡೆದ ಕ್ರೀಡಾಕೂಟದಲ್ಲಿ ಚೇತನ್ ಅವರು ತನ್ನದೇ ಆದ ಡೈಲಾಗ್, ನೃತ್ಯದ ಮೂಲಕ ಎಲ್ಲರನ್ನು ನಗೆಗಡಲಲ್ಲಿ ತೇಲಿಸಿದ್ದಾರೆ. ಚೇತನ್ ಹಾಡಿನ ತಾಳಕ್ಕೆ ತಕ್ಕಂತೆ ಚಂಡೆಯವರೂ ಬಾರಿಸಿದ ವಿಡಿಯೋ ಸಾಮಾಜಿಕ ತಾಣದಲ್ಲಿ ಶಹಬ್ಬಾಸ್ ಗಿರಿ ಪಡೆದುಕೊಂಡಿದೆ. ಕ್ರಿಯೇಟಿವಿಟಿ ಮೂಲಕ ಪ್ರಯೋಗಗಳನ್ನು ಮಾಡುತ್ತಿರುವುದರಿಂದ ಎಲ್ಲರ ಮೆಚ್ಚುಗೆಯನ್ನು ಚೇತನ್ ಪಡೆದಿದ್ದಾರೆ.
ವೃತ್ತಿಯಲ್ಲಿ ಪೇಂಟರ್ ಆಗಿರುವ ಚೇತನ್, ಹಿಂದಿನಿಂದಲೂ ತಮ್ಮ ಊರಿನ ಯಾವುದೇ ಕಾರ್ಯಕ್ರಮದಲ್ಲಿ ಎಲ್ಲರನ್ನು ನಗಿಸುವ ಪ್ರಯತ್ನ ಮಾಡುತಿದ್ದರು. ಕೆಸರು ಗದ್ದೆ ಕ್ರೀಡಾಕೂಟದಲ್ಲಿ ವಿಶೇಷ ನೃತ್ಯ, ಹುಲಿವೇಷ ಕುಣಿತ, ವಾಲಿಬಾಲ್ ಮ್ಯಾಚ್ ಸಂದರ್ಭ ಬೊಂಬೆ ಕುಣಿತ ಸೇರಿದಂತೆ ಹಲವು ಬಗೆಗಳಲ್ಲಿ ನೆರೆದವರನ್ನು ಮನರಂಜಿಸುತಿದ್ದಾರೆ.
ವಿಶೇಷವಾಗಿ ಹಗ್ಗಜಗ್ಗಾಟ ಪಂದ್ಯಾಟದಲ್ಲಿ ಹೆಚ್ಚಾಗಿ ಆಟಗಾರರನ್ನು ಹುರಿದುಂಬಿಸುತ್ತಿದ್ದು. ಸಿನಿಮಾ ಡೈಲಾಗ್‌ಗಳನ್ನು ಫಟಾಫಟ್ ಹೇಳಿ ಎಲ್ಲರ ಚಪ್ಪಾಳೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಇದೀಗ ಚೇತನ್ ಎಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದ್ದಾರೆ ಅಂದರೆ ಕ್ರೀಡಾಕೂಟಕ್ಕೆ ಚೇತನ್ ಬರುತ್ತಾರಾ ಎಂದು ವಿಚಾರಿಸಿ ಇವರ ಮನೋರಂಜನೆ ನೋಡುವುದಕ್ಕೆಂದೆ ಬರುವವರು ಹೆಚ್ಚಾಗಿದ್ದಾರೆ.
VIDEO