ಏಷ್ಯನ್ ಓಪನ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್: ಅಶ್ವಿನ್ ಡಿಸಿಲ್ವಾಗೆ ಕಂಚು

ಮಂಗಳೂರು ಡಿಸೆಂಬರ್ 19: ಇಂಡೊನೇಷ್ಯಾದ ಜಕಾರ್ತದಲ್ಲಿ ನಡೆದ ಪುರುಷರ ಜೂನಿಯರ್ ವಿಭಾಗದ 1000 ಮೀ.ಏಷ್ಯನ್ ಓಪನ್ ಶಾರ್ಟ್ ಟ್ರ್ಯಾಕ್ ಸ್ಪೀಡ್ ಸ್ಕೇಟಿಂಗ್ ನಲ್ಲಿ ಮಂಗಳೂರಿನ ಅಶ್ವಿನ್ ಕ್ಯಾಲೆನ್ ಡಿಸಿಲ್ವಾ ಕಂಚಿನ ಪದಕ ‌ಪಡೆದಿದ್ದಾರೆ‌.

ಡಿಸೆಂಬರ್ 1 ಮತ್ತು 2 ರಂದು ಜಕಾರ್ತದಲ್ಲಿ ಸ್ಪರ್ಧೆ ನಡೆದಿದ್ದು, ಇದರಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಅಶ್ವಿನ್ ಜನವರಿಯಲ್ಲಿ ಕೆನಡಾದಲ್ಲಿ ನಡೆಯಲಿರುವ ವರ್ಲ್ಡ್ ಜೂನಿಯರ್ ಚಾಂಪಿಯನ್ ಶಿಪ್ ಗೆ ಅರ್ಹತೆಯನ್ನು ಪಡೆದಿದ್ದಾರೆ.

ಜೊತೆಗೆ ಫೆಬ್ರವರಿಯಲ್ಲಿ ಜರ್ಮನಿಯ ಡ್ರೆಸ್ಡೆನ್ ನಲ್ಲಿ ನಡೆಯಲಿರುವ ವರ್ಲ್ಡ್ ಕಪ್ ಚಾಂಪಿಯನ್‌ ಶಿಪ್ ನಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ‌.
ಅಶ್ವಿನ್ ಕ್ಯಾಲೆನ್ ಡಿಸಿಲ್ವಾ ಮಂಗಳೂರಿನ ಆಲ್ವಿನ್ ‌ಮತ್ತು ಆಶಾ ಡಿಸಿಲ್ವಾ ದಂಪತಿಯ ಪುತ್ರ.

0 Shares

Facebook Comments

comments