KARNATAKA
ಚಾರ್ಮಾಡಿ ಘಾಟ್ ನಲ್ಲಿ ಹಾಳಾಗಿ ನಿಂತ 16 ಚಕ್ರದ ಲಾರಿ – ವಾಹನ ಸವಾರರಿಗೆ ಟ್ರಾಫಿಕ್ ಜಾಮ್ ಬಿಸಿ
ಚಿಕ್ಕಮಗಳೂರು ಮಾರ್ಚ್ 18: ಚಾರ್ಮಾಡಿ ಘಾಟ್ ನಲ್ಲಿ 16 ಚಕ್ರದ ಲಾರಿಯೊಂದು ತಿರುವಿನಲ್ಲಿ ಕೆಟ್ಟು ನಿಂತ ಕಾರಣ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾದ ಘಟನೆ ನಡೆದಿದೆ.
ಹುಬ್ಬಳ್ಳಿಯಿಂದ ಮಂಗಳೂರಿಗೆ ಹೋಗುತ್ತಿದ್ದ ಸಿಮೆಂಟ್ ಲಾರಿ ಬೆಳಗ್ಗೆ 8:30ರ ವೇಳೆಗೆ ಚಾರ್ಮಾಡಿ ಘಾಟಿಯ 10ನೇ ತಿರುವಿನಲ್ಲಿ ಕೆಟ್ಟು ನಿಂತಿದೆ. ಘಾಟಿಯ ತಿರುವಿನಲ್ಲಿ ಟರ್ನ್ ಮಾಡಲಾಗದೇ ಲಾರಿ ನಿಂತ ಕಾರಣ ಮುಂದೆಯೂ ಹೋಗಲಾಗದೆ, ಹಿಂದೆಯೂ ಹೋಗಲಾಗದೆ ವಾಹನಗಳ ಚಾಲಕರು ಈಗ ಪರದಾಡುತ್ತಿದ್ದಾರೆ.
ಚಾರ್ಮಾಡಿ ಘಾಟ್ ನಲ್ಲಿ 10 ಚಕ್ರಕ್ಕಿಂತ ದೊಡ್ಡ ವಾಹನಗಳು ಸಂಚಾರಕ್ಕೆ ನಿಷೇಧ ಇದೆ. ಆದರೂ ಚಾಲಕ ಘಾಟ್ ನಲ್ಲಿ ಲಾರಿಯನ್ನು ತಂದಿದ್ದು 10ನೇ ತಿರುವಿನಲ್ಲಿ ಲಾರಿಯನ್ನು ಪಾಸ್ ಮಾಡಲು ಆಗದೆ ಸಿಕ್ಕಿಬಿದ್ದಿದ್ದಾನೆ. ಚಿಕ್ಕಮಗಳೂರು ಮಂಗಳೂರು ಸಂಪರ್ಕಿಸುವ ಪ್ರಮುಖ ಘಾಟ್ ಇದಾದ ಕಾರಣ ಸಾವಿರಾರು ಸಂಖ್ಯೆಯಲ್ಲಿ ವಾಹನ ಸಂಚಾರ ಇದೆ. ಆದರೆ ಲಾರಿಯಿಂದಾಗಿ ಇದೀಗ ಬೆಳಿಗ್ಗೆಯಿಂದಲೇ ಕಿಲೋ ಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಆಗಿದೆ.