Connect with us

  DAKSHINA KANNADA

  ಸುಳ್ಯ ಸಂಪಾಜೆ ಗಡಿಯಲ್ಲಿ ಪ್ರತ್ಯಕ್ಷರಾದ ನಕ್ಸಲರು..!

  ಮಡಿಕೇರಿ : 6 ವರ್ಷದ ಬಳಿಕ ನಕ್ಸಲರು ಸುಳ್ಯ ಸಂಪಾಜೆ ಗಡಿಯ ಮಡಿಕೇರಿ ಭಾಗದ ಕಡಮಕಲ್ಲು ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಬಳಿ ಕಾಣಿಸಿಕೊಂಡಿದ್ದಾರೆ

  8 ಜನರ ನಕ್ಸಲ್ ತಂಡ ಶನಿವಾರ ಸಂಜೆ ಪ್ರತ್ಯಕ್ಷ ವಾಗಿದ್ದರೆಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ. ಮಡಿಕೇರಿ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಈ  ಘಟನೆ ನಡೆದಿದ್ದು,ಗುತ್ತಿಗಾರು, ಕೊಲ್ಲಮೊಗರು, ಕಲ್ಮಕರ್, ಬಳಿಯ ಕೂಜಿಮಲೆ ರಬ್ಬರ್ ಎಸ್ಟೇಟ್ ಪ್ರದೇಶದಲ್ಲಿ ನಕ್ಸಲರು ಬೀಡು ಬಿಟ್ಟಿದ್ದಾರೆ ಎಂದು ಹೇಳಲಾಗಿದೆ.

  ಕೂಜಿಮಲೆ ಅಂಗಡಿಯೊಂದರಿಂದ 4 ಸಾವಿರ ರೂಪಾಯಿ ನಗದು ನೀಡಿ ದಿನಸಿ ಸಾಮಗ್ರಿ ಖರೀದಿಸಿ ತೆರಳಿದ್ದಾರೆ ಎಂದು ಹೇಳಲಾಗಿದೆ.  2012 ರಲ್ಲಿ ಕಾಲೂರು ಗ್ರಾಮದಲ್ಲಿ ಪ್ರತ್ಯಕ್ಷಗೊಂಡಿದ್ದರು.2018 ರಲ್ಲೂ ಫೆಬ್ರವರಿ ತಿಂಗಳಿನಲ್ಲಿ ಇದೆ ವ್ಯಾಪ್ತಿ ಸಂಪಾಜೆ ಗುಡ್ಡೆಗದ್ದೆಯಲ್ಲಿ ಪ್ರತ್ಯಕ್ಷಗೊಂಡಿದ್ದ ತಂಡ. ಲೋಕಸಭಾ ಚುನಾವಣೆ ಹಿನ್ನಲೆ ನಕ್ಸಲರು ಆಕ್ಟಿವ್ ಆಗಿದ್ದು ಕೇರಳದಿಂದ ಬಂದಿರಬಹುದೆಂದು ಶಂಕಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆ ಹಾಗೂ ಕೊಡಗು ಜಿಲ್ಲೆಯ ಗಡಿ ಭಾಗದಲ್ಲಿ ಪೊಲೀಸರಿಂದ ಕಟ್ಟೆಚ್ಚರ ವಹಿಸಿದ್ದು ತಪಾಸಣೆ ನಡೆಸುತ್ತಿದ್ದಾರೆ.

   

  Share Information
  Advertisement
  Click to comment

  You must be logged in to post a comment Login

  Leave a Reply