KARNATAKA
ಚಂದಿನ ಅಂಗಳದಲ್ಲಿ ಯಶ್ವಸಿಯಾಗಿ ಲ್ಯಾಂಡ್ ಆದ ‘ವಿಕ್ರಮ’..! ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸಿದ ಪ್ರಧಾನಿ..
ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಚಂದ್ರಯಾನ-3 ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸುವ ಮೂಲಕ ಯಶಸ್ವಿಯಾಗಿದ್ದಾರೆ.
ಬೆಂಗಳೂರು : ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ವಿಜ್ಞಾನಿಗಳು ಚಂದ್ರಯಾನ-3 ನೌಕೆಯನ್ನು ಚಂದ್ರನ ಅಂಗಳದಲ್ಲಿ ಇಳಿಸುವ ಮೂಲಕ ಯಶಸ್ವಿಯಾಗಿದ್ದಾರೆ.
ಸುದೀರ್ಘ 40 ದಿನಗಳಕಾಲ ಅದರ ಚಲನವಲನವನ್ನು ವೀಕ್ಷಿಸಿದ್ದ ವಿಜ್ಞಾನಿಗಳಿಗೆ ಇದು ಸುದಿನವಾಗಿತ್ತು.
ಚಂದಿರನ ದಕ್ಷಿಣ ಧ್ರುವದ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವುದನ್ನು ಭಾರತೀಯರು ಕಣ್ತುಂಬಿಕೊಂಡಿದ್ದಾರೆ.
ಭಾರತೀಯ ಕಾಲಮಾನ 6ಗಂಟೆ 4 ನಿಮಿಷಕ್ಕೆ ಸರಿಯಾಗಿ ಚಂದ್ರನ ಅಂಗಳದಲ್ಲಿ ವಿಕ್ರಮ್ ಲ್ಯಾಂಡರ್ ಯಶಸ್ವಿಯಾಗಿ ಇಳಿದಿದೆ.
ಈ ಮೂಲಕ ಭಾರತ ಹೊಸ ಮೈಲಿಗಲ್ಲನ್ನು ಸ್ಥಾಪಿಸಿದೆ.
ಇಸ್ರೋ ವಿಜ್ಞಾನಿಗಳ ಸಾಧನೆಯನ್ನು ದೇಶ, ವಿದೇಶಗಳು ಕೊಂಡಾಡುತ್ತಿವೆ.
ಪ್ರಧಾನಿ ಸಂತಸ :
ಈ ಕ್ಷಣ 140 ಕೋಟಿ ಹೃದಯ ಬಡಿತಗಳ ಶಕ್ತಿಯಾಗಿದೆ. ಅಮೃತ ಕಾಲದ ಈ ಸಂದರ್ಭದಲ್ಲಿ ಅಮೃತ ವರ್ಷ ಯಶಸ್ವಿಯಾಗಿದೆ ಎಂದು ಪ್ರಧಾನಿ ಮೋದಿ ತಿಳಿಸಿದರು. 6:19 PM, 23 AUG ಇಂತಹ ಐತಿಹಾಸಿಕ ಕ್ಷಣಗಳನ್ನು ನೋಡಿದಾಗ ನಮಗೆ ತುಂಬಾ ಹೆಮ್ಮೆಯಾಗುತ್ತದೆ. ಇದು ನವಭಾರತದ ಉದಯವಾಗಿದೆ ಎಂದು ಪ್ರಧಾನಿ ಮೋದಿ ಹೆಮ್ಮೆಯಿಂದ ಹೇಳಿದ್ದಾರೆ.
ದಕ್ಷಿಣ ಆಫ್ರಿಕಾದಿಂದಲೇ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಭಾರತ ಈಗ ಚಂದ್ರನಲ್ಲಿದೆ ಅಂತ ಹೆಮ್ಮೆ ವ್ಯಕ್ತಪಡಿಸಿದ್ದಾರೆ.
ನಾವು ಚಂದ್ರನಲ್ಲಿ ವಿಜಯ ಸಾಧಿಸಿದ್ದೇವೆ. ಚಂದ್ರನ ಅಂಗಳದಲ್ಲಿ ಇಸ್ರೋ ಐತಿಹಾಸಿಕ ಸಾಧನೆ ಮಾಡಿದೆ ಅಂತ ಮೋದಿ ಶ್ಲಾಘಿಸಿದರು.
ಚಂದ್ರಯಾನ-3 ಚಂದ್ರನ ಮೇಲೆ ಇಳಿಯುತ್ತಿದ್ದಂತೆ ದೇಶಾದ್ಯಾಂತ ಸಂಭ್ರಮಾಚರಣೆ ಮುಗಿಲು ಮುಟ್ಟಿದೆ.
ಪಟಾಕಿ ಸಿಡಿಸಿ, ಭಾವುಟವನ್ನು ಹಾರಿಸಿ, ಸಿಹಿಯನ್ನು ಹಂಚಲಾಗುತ್ತಿದೆ. .
ಭಾರತಕ್ಕೆ ಗೆಲುವು- ರಷ್ಯಾಕ್ಕೆ ಸೋಲು..!
ಚಂದ್ರಯಾನ ಯೋಜನೆ ಮೂಲಕ ಭಾರತ ಇತಿಹಾಸ ನಿರ್ಮಿಸಿದ್ದರೆ, ರಷ್ಯಾ ಇದೇ ವೇಳೆ ಸೋಲು ಕಂಡಿತ್ತು.
ಚಂದ್ರನ ಮೇಲ್ಮೈ ಮೇಲೆ ಇಳಿಯುವ ಮೊದಲೇ ರಷ್ಯಾದ ‘ಲೂನಾ -25’ ಬಾಹ್ಯಾಕಾಶ ನೌಕೆ ಪತನವಾಗಿ ಛಿದ್ರವಾಗಿತ್ತು.
ರಷ್ಯಾ ಚಂದ್ರನ ದಕ್ಷಿಣ ಧ್ರುವದ ಮೇಲೆ ಸಾಫ್ಟ್ ಲ್ಯಾಂಡ್ ಮಾಡಲು ಲೂನಾ-25 ನೌಕೆಯನ್ನು ಆಗಸ್ಟ್ 11ರಂದು ಉಡಾವಣೆ ಮಾಡಿತ್ತು.
ಈ ಯೋಜನೆಯಲ್ಲಿ ರಷ್ಯಾ ಸೋಲು ಕಂಡಿದ್ದು ವಿಜ್ಞಾನಿಗಳಿಗೆ ಸಾಕಷ್ಟು ಬೇಸರ ತರಿಸಿತ್ತು.
ಆದ್ರೆ ರಷ್ಯಾ ಸೋಲಿನ ನೋವನ್ನ ಭಾರತದ ಸಾಧನೆ ದೂರ ಮಾಡಿದೆ. ‘ಚಂದ್ರಯಾನ-3’ ಯೋಜನೆಯಲ್ಲಿ ಭಾರತ ಗೆದ್ದು ಬೀಗಿದೆ.
ಇದರೊಂದಿಗೆ ಚಂದ್ರನ ಮೇಲೆ ಅದರ ದಕ್ಷಿಣ ಧ್ರುವದಲ್ಲಿ ಇಳಿದ ಮೊದಲ ದೇಶ ಮತ್ತು ಚಂದ್ರನ ಮೇಲೆ ಇಳಿದ ನಾಲ್ಕನೇ ದೇಶ ಎಂಬ ಕೀರ್ತಿಗೆ ಭಾರತ ಭಾಜನವಾಗಿದೆ.