Connect with us

    DAKSHINA KANNADA

    ಚಂದ್ರಯಾನದ ಯಶಸ್ಸಿಗೆ ಮಸೀದಿಗಳಲ್ಲಿ ಪ್ರಾರ್ಥಿಸಲು ರಾಜ್ಯ ದಾರಿಮಿ ಉಲಮಾ ಒಕ್ಕೂಟ ಕರೆ..

    ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಯ ‘ವಿಕ್ರಮ್’ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಕಾಲಿಡಲು ಕ್ಷಣಗಣನೆ ಆರಂಭವಾಗಿದೆ. 

    ಬೆಂಗಳೂರು : ಭಾರತದ ಮಹತ್ವಾಕಾಂಕ್ಷೆಯ ಚಂದ್ರಯಾನ-3 ಯೋಜನೆಯ ‘ವಿಕ್ರಮ್’ ಲ್ಯಾಂಡರ್ ಚಂದ್ರನ ಅಂಗಳಕ್ಕೆ ಕಾಲಿಡಲು ಕ್ಷಣಗಣನೆ ಆರಂಭವಾಗಿದೆ.

    ದೇಶಕ್ಕೆ ದೇಶವೇ ಕಾತರದಿಂದ ಕಾಯುತ್ತಿರುವ ಚಂದ್ರಯಾನ -3 ರ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಗುರಿ ತಲುಪುವಂತಾಗಲು ದೇಶದಾದ್ಯಂತ ಮಂದಿರ, ಚರ್ಚು, ಮಸೀದಿ, ಗುರುದ್ವಾರಗಳಲ್ಲಿ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತಿವೆ.

    ಚಂದ್ರಯಾನ -3 ರ ವಿಕ್ರಮ್ ಲ್ಯಾಂಡರ್ ಸುರಕ್ಷಿತವಾಗಿ ಗುರಿ ತಲುಪುವಂತಾಗಲು ಪ್ರತೀ ಮಸೀದಿಗಳಲ್ಲಿ ಪ್ರಾರ್ಥನೆ ನಡೆಸುವಂತೆ ರಾಜ್ಯ ದಾರಿಮಿ ಒಕ್ಕೂಟವು ಕರೆ ನೀಡಿದೆ.

    ಭಾರತ ದೇಶದ ಕೀರ್ತಿ ಬಾನೆತ್ತರಕ್ಕೇರಿ ಆ ಮೂಲಕ ದೇಶದ ಪ್ರಜೆಗಳು ಅಭಿಮಾನ ಪಡುವಂತಾಗಲು ಚಂದ್ರಯಾನ ಯಶಸ್ಸು ಕಾಣ ಬೇಕಿರುವುದು ನಮ್ಮೆಲ್ಲರ ಅಗತ್ಯವಾಗಿದೆ.

    ಇದಕ್ಕಾಗಿ ರಾತ್ರಿ ಹಗಲೆನ್ನದೇ ದುಡಿದ ವಿಜ್ಞಾನಿಗಳ ,ಸಿಬ್ಬಂದಿ ವರ್ಗದವರ ಒಳಿತಿಗಾಗಿ ಕೂಡಾ ಪ್ರಾರ್ಥನೆ ನಡೆಸಲು ದಾರಿಮಿ ಒಕ್ಕೂಟ ಕರೆ ನೀಡಿದೆ.

    ಚಂದ್ರಯಾನ–3ರ ಚಂದ್ರ ಸ್ಪರ್ಶ ಇಂದು ಸಂಜೆ 6.04 ಕ್ಕೆ ಸರಿಯಾಗಿ ಸಮಯ ನಿಗದಿಪಡಿಸಲಾಗಿದೆ.

    ಇದಕ್ಕೆ ಪೂರಕವಾಗಿ ಭಾನುವಾರ ಲ್ಯಾಂಡರ್‌ನ ವೇಗ ತಗ್ಗಿಸಿ, ಚಂದ್ರನ ಮೇಲ್ಮೈಗೆ ಅತ್ಯಂತ ಸನಿಹದಲ್ಲಿ ಅಂದರೆ, 25 ಕಿ.ಮೀ ಕಕ್ಷೆಗೆ ತಂದು ನೆಲೆಗೊಳಿಸಲಾಗಿದೆ. ಲ್ಯಾಂಡರ್‌ ಈಗ 25 ಕಿ.ಮೀ x 134 ಕಕ್ಷೆಯಲ್ಲಿದೆ.

    ನೋದನ ಘಟಕದಿಂದ (ಪ್ರೊಪಲ್ಷನ್‌ ಮಾಡ್ಯೂಲ್‌) ಪ್ರತ್ಯೇಕಗೊಂಡ ನಂತರ ಎರಡು ಹಂತಗಳಲ್ಲಿ ಲ್ಯಾಂಡರ್‌ನ ವೇಗ ತಗ್ಗಿಸುವ ಕಾರ್ಯ ನಡೆದಿದೆ.

    ಈಗ ಆಂತರಿಕ ತಪಾಸಣೆ ಕಾರ್ಯ ನಡೆಯುತ್ತಿದ್ದು, ಇಳಿದಾಣದ (ಲ್ಯಾಂಡಿಂಗ್‌ ಸ್ಥಳ) ಪ್ರದೇಶದಲ್ಲಿ ಸೂರ್ಯೋದಯಕ್ಕಾಗಿ ನಿರೀಕ್ಷಿಸಲಾಗುತ್ತಿದೆ.

    ಇಂದು ಸಂಜೆ 5.45 ಕ್ಕೆ ಸರಿಯಾಗಿ ಕಕ್ಷೆಯಿಂದ ಲ್ಯಾಂಡರ್‌ ಅನ್ನು ಕೆಳಗಿಳಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಇಸ್ರೊ ತಿಳಿಸಿದೆ.

    ಲ್ಯಾಂಡರ್‌ (ವಿಕ್ರಮ್‌) ಸಂಜೆ 6.04 ಕ್ಕೆ ಚಂದ್ರ ಸ್ಪರ್ಶ ಮಾಡಲಿದೆ. ಎಲ್ಲವೂ ನಿಗದಿಯಾದಂತೆ ನಡೆದರೆ ಭಾರತದ ಪಾಲಿಗೆ ಇಂದಿನ ದಿನ ಸ್ವರ್ಣ ಅಕ್ಷರಗಳಲ್ಲಿ ಬರೆದಿಡಬೇಕಾದ ದಿನವಾಗಲಿದೆ.

    Share Information
    Advertisement
    Click to comment

    You must be logged in to post a comment Login

    Leave a Reply