KARNATAKA
ಚೈತ್ರಾ ಕುಂದಾಪುರ ವಂಚನೆ ಪುರಾಣ : ಅಭಿನವ ಹಾಲಶ್ರೀ ಸ್ವಾಮೀಯ ಡಿಢೀರ್ ಶ್ರೀಮಂತಿಕೆಯ ಮೂಲ ಯಾವುದು..!?
ಚೈತ್ರಾ ಕುಂದಾಪುರಳೊಂದಿಗೆ ಸೇರಿ ಕೊಟ್ಯಾಂತರ ರೂಪಾಯಿಗಳ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಸ್ತುತ ತಲೆ ಮರೆಸಿಕೊಂಡಿರುವ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಅವರ ಡೀಡೀರ್ ಶ್ರೀಮಂತಿಕೆಯ ಬಗ್ಗೆ ಇದೀಗ ಎಲ್ಲೆಡೆ ವ್ಯಾಪಕ ಚರ್ಚೆಗಳು ಆರಂಭವಾಗಿದೆ.
ಹೊಸಪೇಟೆ : ಚೈತ್ರಾ ಕುಂದಾಪುರಳೊಂದಿಗೆ ಸೇರಿ ಕೊಟ್ಯಾಂತರ ರೂಪಾಯಿಗಳ ವಂಚನೆ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಸ್ತುತ ತಲೆ ಮರೆಸಿಕೊಂಡಿರುವ ಹೂವಿನ ಹಡಗಲಿ ತಾಲೂಕಿನ ಹಿರೇಹಡಗಲಿ ಹಾಲಸ್ವಾಮಿ ಮಠದ ಅಭಿನವ ಹಾಲಶ್ರೀ ಅವರ ಡೀಡೀರ್ ಶ್ರೀಮಂತಿಕೆಯ ಬಗ್ಗೆ ಇದೀಗ ಎಲ್ಲೆಡೆ ವ್ಯಾಪಕ ಚರ್ಚೆಗಳು ಆರಂಭವಾಗಿದೆ.
ಸ್ವಾಮೀಜಿ ಇತ್ತೀಚೆಗೆ ಖರೀದಿಸಿದ ಇನ್ನೋವಾ ಕಾರು, 8 ಎಕರೆ ಜಮೀನು, ನಿವೇಶನ ಹಾಗೂ ಹೊಸ ಪೆಟ್ರೋಲ್ ಬಂಕ್‌ಗಳ ಮೇಲೆ ಎಲ್ಲರ ಕಣ್ಣು ನೆಟ್ಟಿವೆ,
ಚೈತ್ರಾ ಕುಂದಾಪುರರೊಂದಿಗೆ ಸೇರಿ ನಡೆಸಿದ ವಂಚನೆ ದುಡ್ಡಿನಿಂದ ಸ್ವಾಮೀಜಿ ಈ ಎಲ್ಲ ಆಸ್ತಿಗಳನ್ನು ಖರೀದಿಸಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ನಿವೇಶನ, ಜಮೀನು, ಪೆಟ್ರೋಲ್ ಬಂಕ್ ಬೇನಾಮಿ ಹೆಸರಿನಲ್ಲಿ ಖರೀದಿಸಿದ್ದಾರೆ ಎಂಬ ಅನುಮಾನ ಬಲವಾಗಿದೆ.
ಬೆಂಗಳೂರಿನಲ್ಲಿಯೂ ಮನೆ ಖರೀದಿಸಿರುವ ಗುಮಾನಿಯಿದೆ. ಈ ಹಿಂದೆ ಸ್ವಿಫ್ಟ್ ಡಿಸೈರ್, ಇಂಡಿಕಾ ಕಾರು ಹೊಂದಿದ್ದ ಸ್ವಾಮೀಜಿ ದಿಢೀರ್ ಇನ್ನೊವಾ ಕಾರು ಖರೀದಿಸಿದ್ದು, ಭಕ್ತರರಲ್ಲಿ ಹಲವು ಅನುಮಾನಗಳು ಹುಟ್ಟುಹಾಕಿದ್ದುವು.
ಮಠಕ್ಕೆ ಆಗಮಿಸುತ್ತಿದ್ದ ಬಹುತೇಕ ಬಿಜೆಪಿ ನಾಯಕರು, ಟಿಕೆಟ್ ಆಕಾಂಕ್ಷಿಗಳು ಸ್ವಾಮೀಜಿ ಅವರ ಮಾತಿನ ಮೋಡಿಗೆ ಮರುಳಾಗಿದ್ದರು. ವಿಧಾನಸಭೆ ಚುನಾವಣೆ ವೇಳೆ ರಾಜ್ಯ, ರಾಷ್ಟ್ರ ಮಟ್ಟದ ಬಿಜೆಪಿ ನಾಯಕರ ಹೆಸರು ನಿತ್ಯವೂ ಸ್ವಾಮೀಜಿ ನಾಲಗೆಯ ಮೇಲೆ ಹರಿದಾಡುತ್ತಿದ್ದವು. ಹೀಗಾಗಿಯೇ, ಕೆಲವು ಮುಖಂಡರು ಶ್ರೀಗಳ ಸುತ್ತಮುತ್ತ ಸುತ್ತುವ ಜತೆಗೆ ಅವರ ದುಂಬಾಲು ಬೀಳುತ್ತಿದ್ದರು. ತಮ್ಮ ಪ್ರಭಾವ ಬೀರಿ ಪ್ರಬಲ ಟಿಕೆಟ್ ಆಕಾಂಕ್ಷಿಯೂ ಸ್ಪರ್ಧೆಯಿಂದ ಹಿಂದೆ ಸರಿಯುವಂತೆ ಮಾಡಿದ್ದರು.
ಕಳೆದ ಹಲವು ವರ್ಷಗಳಿಂದ ಸಂಘ ಪರಿವಾರದಲ್ಲಿ ಗುರುತಿಸಿಕೊಂಡಿದ್ದಾರೆ. ಟಿಕೇಟ್ ಆಕಾಂಕ್ಷಿ ಉದ್ಯಮಿ ಗೋವಿಂದ ಬಾಬು ಪೂಜಾರಿ ಅವರು ಕಳೆದ ಮಾರ್ಚ್‌ನಲ್ಲಿ ಶ್ರೀಮಠಕ್ಕೆ ಭೇಟಿ ನೀಡಿ, ಸ್ವಾಮೀಜಿ ಆಶೀರ್ವಾದ ಪಡೆದಿದ್ದರು ಎನ್ನಲಾಗಿದೆ.
ಚೈತ್ರಾ ಕುಂದಾಪುರಳಿಗೆ ಹಾಲಶ್ರೀ ಪ್ರಸಾದಈ ಮಧ್ಯೆ, ಸ್ವಾಮೀಜಿ ಕೋಟ್ಯಂತರ ರೂಪಾಯಿ ವಂಚನೆ ಪ್ರಕರಣದಲ್ಲಿ ಭಾಗಿಯಾದ ಆರೋಪ ಹೊರುತ್ತಿದ್ದಂತೆ ಐದಾರು ನೂರು ವರ್ಷಗಳ ಇತಿಹಾಸ, ಭವ್ಯ ಪರಂಪರೆ ಹೊಂದಿರುವ ಮಠಕ್ಕೆ ದೊಡ್ಡ ಕಳಂಕ ಅಂಟಿಕೊಂಡಂತಾಗಿದೆ. ಈ ಮಠಕ್ಕೆ ಉತ್ತರ, ದಕ್ಷಿಣ ಕರ್ನಾಟಕದಾದ್ಯಂತ ಇಂದಿಗೂ ಸಹಸ್ರಾರು ಭಕ್ತರಿದ್ದಾರೆ. ಹಲವು ಶಾಖಾ ಮಠಗಳಿವೆ. ಅ.30ರಂದು ಶ್ರೀ ಮಠದ ಮುಳ್ಳುಗದ್ದುಗೆ ಉತ್ಸವ, ರಥೋತ್ಸವ, ಸಾಮೂಹಿಕ ವಿವಾಹ ಮಹೋತ್ಸವ ಆಯೋಜನೆ ನೆಪದಲ್ಲಿ ಹಿರೇಹಡಗಲಿಯ ಊರ ಹಬ್ಬ ಆಚರಿಸಲು ನಿರ್ಧರಿಸಲಾಗಿದೆ. ಆದರೆ, ಸ್ವಾಮೀಜಿ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನುವ ಸುದ್ದಿ ತಿಳಿಯುತ್ತಲೇ ಸ್ವಾಮೀಜಿಗಳ ಸಂಬಂಧಿಕರು, ಮಠದ ಭಕ್ತರು, ಆಪ್ತರಿಗೆ ಬರಸಿಡಿಲು ಬಡಿದಂತಾಗಿದೆ.