FILM
ಉದುಬತ್ತಿ ಹಚ್ಚಿ ತನಗೆ ತಾನೇ ಪೂಜೆ ಮಾಡಿಕೊಂಡ ಚೈತ್ರಾ ಕುಂದಾಪುರ – ವಿಚಿತ್ರ ವರ್ತನೆಗೆ ಮನೆಮಂದಿ ಶಾಕ್
ಬೆಂಗಳೂರು – ಬಿಗ್ ಬಾಸ್ ಸೀಸನ್ 11 ಪ್ರಾರಂಭವಾಗಿ 4 ವಾರ ಕಳೆಯುತ್ತಾ ಬಂದಿದೆ. ಈಗಾಗಲೇ ಪ್ರತಿಯೊಬ್ಬ ಸ್ಪರ್ಧಿಯೂ ಗೆಲುವಿಗಾಗಿ ತಮ್ಮ ಆಟ ಆಡುತ್ತಿದ್ದಾರೆ. ಈ ಚೈತ್ರಾ ಕುಂದಾಪುರ ತಮ್ಮ ವರಸೆ ಬದಲಾಯಿಸಿದ್ದಾರೆ.
ಉಡುಪಿ ಜಿಲ್ಲೆಯಿಂದ ತೆರಳಿದ್ದ ಹಿಂದೂ ಫೈರ್ ಬ್ರ್ಯಾಂಡ್ ಚೈತ್ರಾ ಬಿಗ್ ಬಾಸ್ ಸೀಸನ್ 11 ರಲ್ಲಿ ಯಾಕೋ ಸ್ವಲ್ಪ ಮಂಕಾಗಿದ್ದಾರೆ. ತನ್ನ ಹರಿತ ಮಾತುಗಳಿಂದ ಸದಾ ಸುದ್ದಿಯಲ್ಲಿರುವ ಚೈತ್ರಾ ಇಲ್ಲಿ ಮಾತ್ರ ಅಷ್ಟು ಆಕ್ಟಿವ್ ಆಗಿಲ್ಲ. ಈ ನಡುವೆ ಚೈತ್ರಾ ಕುಂದಾಪುರ ಅವರ ಆಟದ ಶೈಲಿ ಬದಲಾಗಿರೋದಕ್ಕೆ ಈ ಪೂಜಾ ಶೈಲಿಯೇ ಸಾಕ್ಷಿಯಾಗಿದೆ.
ಚೈತ್ರಾ ಕುಂದಾಪುರ ಅವರು ಬಿಗ್ ಬಾಸ್ ಮನೆಯಲ್ಲಿ ತನಗೆ ತಾನೇ ಪೂಜೆ ಮಾಡಿಕೊಂಡಿದ್ದು ವಿಶೇಷವಾಗಿದೆ. ದೇವರ ಪಕ್ಕದಲ್ಲಿ ನಿಂತು ಐ ಆ್ಯಮ್ ಗಾಡ್, ಗಾಡ್ ಈಸ್ ಗ್ರೇಟ್ ಅನ್ನೋ ರೀತಿಯಲ್ಲಿ ಕಾಣಿಸಿಕೊಂಡಿದ್ದಾರೆ. ಕನ್ನಡಿ ಮುಂದೆ ತನಗೆ ತಾನೇ ಪೂಜೆ ಮಾಡಿಸಿಕೊಂಡಿರುವ ಚೈತ್ರಾ ಕುಂದಾಪುರ ಅವರನ್ನು ಶಿಶಿರ್ ನೋಡಿ ಫುಲ್ ಶಾಕ್ ಆಗಿದ್ದಾರೆ.
ಎನ್ನ ಕಾಲೇ ಕಂಬ, ದೇಹವೇ ದೇಗುಲ,
ಶಿರವೇ ಹೊನ್ನ ಕಳಶವಯ್ಯ! #BBK11 #ChaitraKundapurapic.twitter.com/KxBPHi5mLl— Mal-Lee | ಮಲ್ಲಿ (@MallikarjunaNH) November 7, 2024